ETV Bharat / state

ಕೋವಿಡ್ ಬಂದು ಗುಣಮುಖರಾಗಿರುವವರ ಸರಾಸರಿ ಶೇ‌. 16.4ರಷ್ಟಿದೆ: ಸಚಿವ ಸುಧಾಕರ್

ಬಳ್ಳಾರಿ ಮತ್ತು ಬೆಂಗಳೂರು ನಗರದಲ್ಲಿ ಸೋಂಕಿನ‌ ಪ್ರಮಾಣ ಹೆಚ್ಚಿದೆ. ಅದರಲ್ಲೂ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಶೇ. 45 ಹಾಗೂ ದಕ್ಷಿಣ ವಿಭಾಗದಲ್ಲಿ ಶೇ‌. 39ರಷ್ಟು ಸೋಂಕಿನ ಪ್ರಮಾಣ ಇದೆ.

16.4% have developed antibodies against COVID-19 in State; sero survey finds
ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್
author img

By

Published : Nov 4, 2020, 3:46 PM IST

Updated : Nov 4, 2020, 4:12 PM IST

ಬೆಂಗಳೂರು: ರಾಜ್ಯದಲ್ಲಿ 15,654 ಜನರನ್ನು ಸಮೀಕ್ಷೆ ಮಾಡಲಾಗಿದೆ. ಈಗಾಗಲೇ ಕೋವಿಡ್ ಬಂದು ಗುಣಮುಖರಾಗಿರುವವರ ಸರಾಸರಿ ಶೇ‌. 16.4ರಷ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಂಬೈ, ಪುಣೆ ಮತ್ತು ತಮಿಳುನಾಡಿನಲ್ಲಿ ಹೆಚ್ಚಿದೆ. ಸಕ್ರಿಯ ಸೋಂಕಿತರ ಪ್ರಮಾಣ ಶೇ. 12.7ರಷ್ಟಿದೆ. ಎರಡೂ ಸೇರಿ ಶೇ. 27.3ರಷ್ಟಿದೆ. ಮರಣ ಪ್ರಮಾಣ ಶೇ. 0.05 ಮಾತ್ರ ಇದೆ‌. ಮುಂಬೈ 0.10 ಇದೆ. ದೆಹಲಿ 0.09 ಇದೆ ಎಂದು ಹೇಳಿದರು.

ರಾಜ್ಯದ 30 ಜಿಲ್ಲೆಗಳಲ್ಲಿ ಸಿರೋ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿಯೂ ಇದೇ ರೀತಿ ಸರ್ವೆ ಮಾಡಲಾಗಿತ್ತು. ಆದರೆ ಅಲ್ಲಿ ಕೇವಲ‌ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸರ್ವೆ ಮಾಡಲಾಗಿತ್ತು. ಆದರೆ ನಮ್ಮ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗಿದೆ. ಮಾಡರೇಟ್ ರಿಸ್ಕ್ ಮತ್ತು ಹೈ ರಿಸ್ಕ್ ಇರುವ ಎರಡೂ ವಿಭಾಗಗಳ ಸೋಂಕಿತರ ಸರ್ವೆ ಮಾಡಲಾಗಿದೆ ಎಂದು ಹೇಳಿದರು.

ಬಳ್ಳಾರಿ ಮತ್ತು ಬೆಂಗಳೂರು ನಗರದಲ್ಲಿ ಸೋಂಕಿನ‌ ಪ್ರಮಾಣ ಹೆಚ್ಚಿದೆ. ಅದರಲ್ಲೂ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಶೇ. 45 ಹಾಗೂ ದಕ್ಷಿಣ ವಿಭಾಗದಲ್ಲಿ ಶೇ‌. 39ರಷ್ಟು ಸೋಂಕಿನ ಪ್ರಮಾಣ ಇದೆ ಎಂದು ಹೇಳಿದರು.

ಎರಡನೇ ಹಂತದ ಸರ್ವೆ:

ಡಿಸೆಂಬರ್ ಅಂತ್ಯದಲ್ಲಿ ಹಾಗೂ ಫೆಬ್ರವರಿ, ಮಾರ್ಚ್​ಗೆ ಇನ್ನೂ ಎರಡು ಹಾಗೂ ಕೊನೆ ಹಂತದ ಸರ್ವೆ ಮಾಡಿಸಲಾಗುತ್ತದೆ ಎಂದು ತಿಳಿಸಿದರು. ಧಾರವಾಡದಲ್ಲಿ ಅತೀ ಕಡಿಮೆ ಸೋಂಕು ಪ್ರಮಾಣ ಅಂದರೆ ಶೇ. 8.7 ಇದೆ. ಗದಗ ಶೇ. 12, ಬಾಗಲಕೋಟೆ ಶೇ. 9 ಸೋಂಕು ಪ್ರಮಾಣ ಇದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ. ಆದರೂ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಮರಣ ಪ್ರಮಾಣವೂ ಕೂಡ‌ ಇಳಿಕೆಯಾಗಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್

ಸೋಂಕಿತರ ಸಂಖ್ಯೆ ನೋಡಿ‌ ಗಾಬರಿಯಾಗಬೇಕಿಲ್ಲ. ಸೂಕ್ತ ಚಿಕಿತ್ಸೆ ನೀಡಲು ನಾವು ಹೆಚ್ಚು ಗಮನ ವಹಿಸುತ್ತೇವೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

Last Updated : Nov 4, 2020, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.