ETV Bharat / state

ಬೆಂಗಳೂರಲ್ಲಿ ಇ-ಬಸ್ ಸಂಚಾರಕ್ಕೆ ಉತ್ತೇಜನ: 3 ವರ್ಷಗಳಲ್ಲಿ ಓಡಾಡಲಿವೆ 1500 ಎಲೆಕ್ಟ್ರಿಕ್ ಬಸ್​ಗಳು - electric buses speciality

ಬಿಎಂಟಿಸಿಗೆ ಈ ವರ್ಷದಲ್ಲಿ 390 ಬಸ್​ಗಳು ಹಾಗೂ ಮುಂದಿನ ಮೂರು ವರ್ಷಗಳಲ್ಲಿ 1500 ಎಲೆಕ್ಟ್ರಿಕ್ ಬಸ್​ಗಳು ಸೇರ್ಪಡೆಯಾಗಲಿದ್ದು, ಸಿಲಿಕಾನ್​ ಸಿಟಿಯಲ್ಲಿ ಇ-ಬಸ್​ಗಳ ಸಂಚಾರ ಶುರುವಾಗಲಿದೆ.

electric bus
ಇ-ಬಸ್​ಗಳ ಸಂಚಾರ
author img

By

Published : Sep 30, 2021, 7:51 PM IST

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲೆಕ್ಟ್ರಿಕ್ ಬಸ್​ಗಳಿಗೆ ಉತ್ತೇಜನ ನೀಡುತ್ತಿದ್ದು, ಬೆಂಗಳೂರಿಗೆ ಈ ವರ್ಷದಲ್ಲಿ 390 ಬಸ್​ಗಳು ಹಾಗೂ ಮುಂದಿನ ಮೂರು ವರ್ಷಗಳಲ್ಲಿ 1500 ಎಲೆಕ್ಟ್ರಿಕ್ ಬಸ್​ಗಳು ಬಿಎಂಟಿಸಿ ಸೇರ್ಪಡೆಯಾಗುವ ಎಲ್ಲಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.

ಮೂರು ವರ್ಷಗಳಲ್ಲಿ 1500 ಎಲೆಕ್ಟ್ರಿಕ್ ಬಸ್​ಗಳ ಸಂಚಾರ

ಇಂದು ನಗರದ ಕೆಂಗೇರಿ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 40 ಲಕ್ಷ ಪಾವತಿಸಿ ಗುತ್ತಿಗೆ ಪಡೆದ ಎಲೆಕ್ಟ್ರಿಕ್ ಮಿನಿ ಬಸ್ಸನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಪರಿಶೀಲನೆ ನಡೆಸಿದರು. ಇದರ ಪ್ರಾಯೋಗಿಕ ಬಳಕೆ ಬಳಿಕ ನಗರದ ರಸ್ತೆಗೆ ಅನುಗುಣವಾಗಿ ಇನ್ನುಳಿದ 90 ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ. ನವೆಂಬರ್ ವೇಳೆಗೆ ಸಿಎಂ ಬಸವರಾಜ ಬೊಮ್ಮಾಯಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಈ 90 ಬಸ್​ಗಳನ್ನು ಕೂಡಾ ಸ್ಮಾರ್ಟ್ ಸಿಟಿಯ 50 ಕೋಟಿ ವೆಚ್ಚದಲ್ಲಿ ಪಡೆಯಲಾಗಿದ್ದು, 10 ವರ್ಷಗಳ ಕಾಲ NTPC ವ್ಯಾಪರ್ ವಿದ್ಯುತ್ ನಿಗಮ ಇದರ ನಿರ್ವಹಣೆ ನೋಡಿಕೊಳ್ಳಲಿದೆ. ಇದಕ್ಕಾಗಿ ಪ್ರತೀ ಕಿ.ಮೀ ಗೆ 51.62 ರೂ ಬಿಎಂಟಿಸಿ ಸಂಸ್ಥೆಗೆ ಪಾವತಿಸಲಿದೆ. ಡ್ರೈವರ್ ವೆಚ್ಚ, ಬಸ್ ನಿರ್ವಹಣೆ, ಚಾರ್ಜಿಂಗ್ ಎಲ್ಲವನ್ನೂ ಕಂಪನಿಯೇ ನೋಡಿಕೊಳ್ಳಲಿದೆ. ದಿನವೊಂದಕ್ಕೆ ಕನಿಷ್ಠ 180 ಕಿ.ಮೀ ದೂರ ಮೆಟ್ರೋ ಫೀಡರ್ ಆಗಿ ಬಸ್ ಚಲಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗುತ್ತಿದೆ, ಪರಿಸರ ಮಾಲಿನ್ಯವೂ ಅಪಾಯಕಾರಿ ಮಟ್ಟಕ್ಕೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಎಲ್ಲರೂ ಮುಖಮಾಡತೊಡಗಿದ್ದಾರೆ. ಸರ್ಕಾರದ ಬಿಎಂಟಿಸಿ ನಿಗಮವೂ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ. "ಒಟ್ಟು ಒಪ್ಪಂದ ವೆಚ್ಚ" (ಜಿಸಿಸಿ) ಗುತ್ತಿಗೆಯಡಿ ಜೆಬಿಎಮ್ ಸಂಸ್ಥೆ ಈ ಬಸ್ ಸಿದ್ಧಪಡಿಸಿದೆ.

33 ಜನ ಪ್ರಯಾಣಿಕರು ಪ್ರಯಾಣಿಸಬಹುದು:

ಕೆಲಸದ ಮಧ್ಯೆ ಒಂದು ಬಾರಿ ಚಾರ್ಜ್ ಮಾಡಲು 45 ನಿಮಿಷಗಳು ಬೇಕಾಗಿದ್ದು, 120 ಕಿ.ಮೀ ಓಡಿಸಬಹುದಾಗಿದೆ, ಕೆಂಗೇರಿ, ಕೆ.ಆರ್.ಪುರಂ, ಯಶವಂತಪುರ ಸುತ್ತಮುತ್ತ ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸಲಿದೆ. ಈ ಬಸ್​ನಲ್ಲಿ 33 ಜನ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಪ್ರತೀ ಸೀಟ್​ನಲ್ಲಿ ಎಮರ್ಜೆನ್ಸಿ ಬಟನ್ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಬಸ್​ಗೂ BMTC 45 ಲಕ್ಷ ರೂಪಾಯಿಯನ್ನು ಸಂಸ್ಥೆಗೆ ನೀಡಿದೆ.

ಮೊದಲ ಎಲೆಕ್ಟ್ರಿಕಲ್ ಬಸ್:

ಸಚಿವ ಬಿ.ಶ್ರೀರಾಮುಲು ಮಾತನಾಡಿ, ಇಂದು ಎಲೆಕ್ಟ್ರಿಕ್ ಬಸ್ಸನ್ನು ಪರಿಶೀಲಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ರಂಗದಲ್ಲಿಯೂ ಇದು ಮೊದಲ ಎಲೆಕ್ಟ್ರಿಕಲ್ ಬಸ್. ಪರಿಸರ ರಕ್ಷಣೆಗೆ ಈ ವಾಹನ ಸಹಕಾರಿ. ನವೆಂಬರ್ ತಿಂಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ಮೂಲಕ 90 ಬಸ್​ಗಳನ್ನು ಪಡೆದು ಉದ್ಘಾಟಿಸಲಿದ್ದಾರೆ. 9 ಮೀಟರ್ ಬಸ್ ಇದಾಗಿದ್ದು, ಚಿಕ್ಕ ರಸ್ತೆಗಳಲ್ಲಿಯೂ ಓಡಾಟ ಮಾಡಬಹುದು. ಇದಲ್ಲದೆ 12 ಮೀಟರ್ ಉದ್ದದ 300 ಎಲೆಕ್ಟ್ರಿಕ್ ಬಸ್ ಖರೀದಿಯ ಬಗ್ಗೆಯೂ ಚಿಂತನೆ ಇದ್ದು, ಬಿಎಂಟಿಸಿ ಬೋರ್ಡ್ ಸಭೆಯಲ್ಲಿ ಅಂತಿಮ ನಿರ್ಧಾರ ಆಗಲಿದೆ. ಅಲ್ಲದೆ 643 ಡೀಸೆಲ್ ನ ಬಿಎಸ್ 6, ಬಸ್ ಗಳ ಖರೀದಿಯೂ ಆಗಲಿದೆ ಎಂದರು. ಡ್ರೈವರ್ ಕಂಪನಿಯವರೇ ಇರಲಿದ್ದಾರೆ. ಆದರೆ ಇದನ್ನು ಖಾಸಗೀಕರಣ ಎನ್ನಲಾಗುವುದಿಲ್ಲ. ಇದು ಹೊಸ ಮಾದರಿಯ ಬಸ್ ಆಗಿರುವುದರಿಂದ ಬಸ್ ನೀಡಿದ ಸಂಸ್ಥೆಯೇ ಇದರ ಪರಿಣಿತರಿರುವುದರಿಂದ ಅವರ ವತಿಯಿಂದಲೇ ಡ್ರೈವರ್ ಇರಲಿದ್ದಾರೆ ಎಂದರು.

electric bus
ಎಲೆಕ್ಟ್ರಿಕ್ ಬಸ್​

ಪ್ರಯಾಣದರ ಕಡಿಮೆ:

ರಾಜೇಂದ್ರ ಕುಮಾರ್ ಕಟಾರಿಯಾ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಈ ಬಸ್ ಅನುಷ್ಠಾನಕ್ಕೆ ಬಂದಿದೆ. ಇ-ಬಸ್ ನಲ್ಲಿ ಮಾಲಿನ್ಯ ಇರುವುದಿಲ್ಲ. ಹೊಗೆ, ಶಬ್ಧ ಇಲ್ಲದಿರುವುದು ಹಾಗೂ ನಿರ್ವಹಣೆ ವೆಚ್ಚ, ಡೀಸೆಲ್ ವಾಹನಕ್ಕೆ ಹೋಲಿಸ ದರ ಕಡಿಮೆಯಾಗಲಿದೆ. ಮೆಟ್ರೋ ನಿಲ್ದಾಣದಿಂದ ಜನರಿಗೆ ಓಡಾಡಲು ಈ ಬಸ್ ನೆರವಾಗಲಿದೆ ಎಂದರು. ಪ್ರತೀ ದಿನ ಕನಿಷ್ಠ 180 ಕಿ.ಮೀ ಓಡಾಡಲಿದೆ. ಮೊದಲ ಹಂತದಲ್ಲಿ 90 ಬಸ್ ಬರಲಿದೆ. ಎರಡನೇ ಹಂತದಲ್ಲಿ 300 ಬಸ್, 11 ಮೀಟರ್ ಉದ್ದದ ಬಸ್​ಗಳು ಬರಲಿದೆ. ಅಲ್ಲದೆ ಕೇಂದ್ರ ಸರ್ಕಾರದ ಫೇಮ್ -2 ಯೋಜನೆಯ ಮೂಲಕ 9 ನಗರಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಕಲ್ಚರ್ ತರಲು ಗ್ರಾಂಡ್ ಚಾಲೆಂಜ್ ಆರಂಭಿಸಿದ್ದಾರೆ. ಎಷ್ಟು ಬಸ್ ಬೇಕು ಎಂದು ಪಟ್ಟಿ ಕೇಳಿದ್ದಾರೆ. ಮುಂದಿನ ಮೂರು ವರ್ಷಕ್ಕೆ 1500 ಬಸ್ ಗಳಿಗೆ ಬಿಡ್ ಆಗಲಿದೆ. ವರ್ಷಕ್ಕೆ 600 ರಂತೆ ಪ್ರತೀ ವರ್ಷ ಇ-ಬಸ್ ಸೇರ್ಪಡೆಯಾಗಲಿದೆ. ಹೀಗಾದಲ್ಲಿ 30, 40% ಜನರ ಸಂಚಾರ ಈ-ಬಸ್ ಮೂಲಕ ಆಗಲಿದೆ ಎಂದರು.

ಕೆಎಸ್​ಆರ್​​ಟಿಸಿ ಯಲ್ಲೂ ಇ -ಬಸ್​:

ಸಂಸ್ಥೆಗೆ ಇದು ಆರ್ಥಿಕವಾಗಿ ಹೊರೆಯಾಗುವುದಿಲ್ಲ. ಚಾರ್ಜಿಂಗ್ ವ್ಯವಸ್ಥೆ ಡಿಪೋಗಳಲ್ಲಿಯೇ ಇರಲಿದೆ, ಹೊರಗಡೆಯೂ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ಕೆಎಸ್​ಆರ್​​ಟಿಸಿ ಯಲ್ಲೂ ಜಿಲ್ಲೆಗಳ ನಡುವೆ ಓಡಾಡುವ ಬಸ್​ಗಳಿಗೆ ಇ-ಬಸ್ ಆರಂಭಿಸಲು ಎರಡು ಪ್ರಸ್ತಾವನೆ ಹೋಗಿದೆ. ಮೊದಲನೇ ಗ್ರಾಂಡ್ ಚಾಲೆಂಜ್ ನಲ್ಲಿ ನಗರ ಸಂಚಾರ ಇರಲಿದೆ, ಎರಡನೇ ಹಂತದ ಫೇಮ್ -2 ನಲ್ಲಿ ಇಂಟರ್ ಸಿಟಿ ಬಸ್​ಗಳನ್ನು ಆರಂಭಿಸಲು ಮೂರು ನಿಗಮಗಳೂ ಒಪ್ಪಿಗೆ ಸೂಚಿಸಿವೆ. ಎಷ್ಟು ಬೇಡಿಕೆ ಇದೆ ಎಂಬುದರ ಬಗ್ಗೆ ವಿವರ ಸಲ್ಲಿಸಲಿದ್ದಾರೆ ಎಂದರು. ಬಸ್ ದರದಲ್ಲಿ ಯಾವುದೇ ಹೆಚ್ಚಳ ಅಥವಾ ಕಡಿಮೆ ಆಗುವುದಿಲ್ಲ, ಒಂದೇ ರೀತಿ ಇರಲಿದೆ ಎಂದರು. ಪ್ರಾಯೋಗಿಕ ಬಸ್ ಚಾಲನೆಯಲ್ಲಿರಲಿದೆ. ನಗರದ ರಸ್ತೆಗೆ ಯಾವ ಸಮಸ್ಯೆ ಬರಲಿದೆ ಎಂಬುದರ ಟ್ರಯಲ್ ನಡೆಯಲಿದೆ. ನಂತರ ಡಿಸೆಂಬರ್ ಒಳಗೆ ಎಲ್ಲಾ 90 ಬಸ್​​ಗಳೂ ಬರಲಿವೆ ಎಂದರು.

ಎಮ್ ಡಿ ಅನ್ಬುಕುಮಾರ್ ಮಾತನಾಡಿ, ಡೀಸೆಲ್ ಬಸ್ ಬೆಲೆ 30 ಲಕ್ಷ ವೆಚ್ಚವಿದ್ದರೆ, ಇ- ಬಸ್ ಬೆಲೆ 90 ಲಕ್ಷ ಆಗಲಿದೆ. ಹೀಗಾಗಿ ಸ್ಮಾರ್ಟ್ ಸಿಟಿ ಅನುದಾನ ನೆರವಾಗಿದೆ. ಬಸ್​​ನಲ್ಲಿ ಎಲ್ಲಾ ವ್ಯವಸ್ಥೆ ಇರಲಿದೆ. ಕ್ಯಾಮರಾ ವ್ಯವಸ್ಥೆ, ಸೇಫ್ಟಿ ಬಟನ್, ರಿವರ್ಸ್ ಗೇರ್ ಕ್ಯಾಮರಾ, ಮಹಿಳೆಯರು-ಪುರುಷರಿಗೆ ಪ್ರತ್ಯೇಕ ಪ್ರವೇಶ ದ್ವಾರ ಇರಲಿದೆ. ಇದು 9 ಮೀಟರ್ ಉದ್ದದ ಬಸ್ ಆಗಿದ್ದು, ಚಿಕ್ಕ ರಸ್ತೆಗಳು, ಮೆಟ್ರೋ ನಿಲ್ದಾಣಕ್ಕೆ ಫೀಡರ್ ಸರ್ವಿಸ್ ಬಳಕೆಗೆ ಅನುಕೂಲವಾಗಲಿದೆ ಎಂದರು‌. ಇ-ಬಸ್ ಗಳ ನಿರ್ವಹಣೆ ಬಗ್ಗೆ ಬಿಎಂಟಿಸಿಗೆ ಅನುಭವ ಇಲ್ಲದ ಕಾರಣ, ಸಂಸ್ಥೆಯ ಸಹಾಯವನ್ನೇ ಪಡೆಯಲಾಗುತ್ತಿದೆ ಎಂದರು. ವೋಲ್ವೋ ಎಸಿ ಬಸ್‌ಗಳು ಒಟ್ಟು 843 ಇದ್ದು, ಮುಂದಿನ ವಾರದಿಂದ ಎಲ್ಲಾ ಬಸ್ ಗಳನ್ನು ಚಲಾವಣೆಗೆ ತರಲಾಗುವುದು ಎಂದರು. 6 ಸಾವಿರ ಬಿಎಂಟಿಸಿ ಬಸ್ ಗಳನ್ನೂ ಕೂಡ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.ಪ್ರತೀ ವರ್ಷ 400 ಬಸ್ ಗಳನ್ನು ಸ್ಕ್ರಾಪ್ ಗೆ ಹಾಕಲಾಗುತ್ತದೆ. ಈ ಜಾಗಕ್ಕೆ ಇ-ಬಸ್ ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದರು.

ಸಿಬ್ಬಂದಿ ಆತಂಕ ಪಡಬೇಕಿಲ್ಲ:

ವಜಾಗೊಂಡ ಸಿಬ್ಬಂದಿಗಳು ಡಿಪೋಗೆ ಬಂದರೂ ಕೆಲಸ ನಿರಾಕರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರಾದ ಶ್ರೀರಾಮುಲು, 6 ಸಾವಿರ ಮಂದಿ ನೌಕರರ ಪೈಕಿ, 4 ಸಾವಿರ ಮಂದಿಯನ್ನು ಬಿಎಂಟಿಸಿಗೆ ತೆಗೆದುಕೊಳ್ಳಲಾಗಿದೆ. ಇನ್ನುಳಿದ 2 ಸಾವಿರ ಮಂದಿಯಲ್ಲಿ ಕೆಲವರ ಮೇಲೆ FIR ಆಗಿದೆ. ಕಾನೂನಾತ್ಮಕವಾಗಿ ಇದನ್ನು ಪರಿಹರಿಸಲಾಗುವುದು. ಲೇಬರ್ ಕೋರ್ಟ್​​ನಲ್ಲಿ ಇದನ್ನು ತಕ್ಷಣ ರಾಜಿಯಾಗುವ ಮೂಲಕ ಇತ್ಯರ್ಥ ಪಡಿಸಲಾಗುವುದು. ಯಾರೂ ಆತಂಕಪಡುವ ಅಗತ್ಯ ಇಲ್ಲ, ಸರ್ಕಾರ ನೌಕರರ ಪರ ಇದೆ ಎಂದರು.

ಹೆಚ್ಚುವರಿ ಕೆಲಸದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸಮಸ್ಯೆಗಳಿದ್ದಾಗ ಸರ್ಕಾರದ ಗಮನಕ್ಕೆ ತಂದಾಗ ಬಗೆಹರಿಸಲು ಪ್ರಯತ್ನಿಸಲಾಗುವುದು. ಆದರೆ ಮುಷ್ಕರ ಇದಕ್ಕೆ ದಾರಿಯಲ್ಲ ಎಂದರು. ಇನ್ನು ನೆಲಮಂಗಲದಲ್ಲಿ ಚಾಲಕರೊಬ್ಬರು ವೇತನದ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಇಂತಹ ಅಹಿತಕರ ಘಟನೆಗೆ ಒಳಗಾಗಬಾರದು, ಸಿಎಂ 2500 ಕೋಟಿ ಅನುದಾನ ಕೊಟ್ಟಿದಾರೆ. ಒಂದುವರೇ ತಿಂಗಳು ಬಾಕಿ ಇರುವ ಸಂಬಳವನ್ನೂ ಕೊಡಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.