ಬೆಂಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ನಗರ ಸಿಸಿಬಿ ಪೊಲೀಸರು ಏಳು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿ 14 ಮಂದಿ ದಂಧೆಕೋರರನ್ನು ಬಂಧಿಸಿದ್ದಾರೆ. ಅವರಿಂದ 7 ಕೋಟಿಗಿಂತ ಹೆಚ್ಚು ಮೌಲ್ಯದ ತರಹೇವಾರಿ ಮಾದಕವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಡುಗೋಡಿ, ವಿದ್ಯಾರಣ್ಯಪುರ, ವರ್ತೂರು, ಬನಶಂಕರಿ ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ ಮೂವರು ವಿದೇಶಿ ಪ್ರಜೆ ಸೇರಿದಂತೆ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಐರನ್ ಟೇಬಲ್, ಸಿರಿಂಜ್ ಮೂಲಕ ಸ್ಮಗ್ಲಿಂಗ್: 2012ರಲ್ಲಿ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಫ್ರಾನ್ಸಿನ್ ಬೆಂಗಳೂರಿಗೆ ಹೊಸ ಮಾದರಿಯ ಡ್ರಗ್ಸ್ ಪರಿಚಯಿಸುವುದಕ್ಕೆ ಮುಂದಾಗಿದ್ದ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈತ ಡೀಲ್ ಮಾಡ್ತಿದ್ದ ಡ್ರಗ್ಸ್ಅನ್ನ ಜಪ್ತಿ ಮಾಡಿದ್ದು, ಈತನ ಬಳಿಯೇ ಮೂರುವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಇನ್ನು ಈತನ ಸ್ಮಗ್ಲಿಂಗ್ ಸ್ಟೈಲ್ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಐದಾರು ಐರನ್ ಟೇಬಲ್ಗಳನ್ನ ಆನ್ ಲೈನ್ನಲ್ಲಿ ಆರ್ಡರ್ ಮಾಡ್ತಿದ್ದ ಆರೋಪಿ ಮರದ ಮಧ್ಯ ಸೀಳಿ ಅದರಲ್ಲಿ ಡ್ರಗ್ಸ್ ತುಂಬಿ ಮತ್ತೆ ವ್ಯವಸ್ಥಿತವಾಗಿ ಪ್ಯಾಕ್ ಮಾಡ್ತಿದ್ದ. ಮಾಲ್ ಇದ್ದ ಟೇಬಲ್ ಮಧ್ಯೆ ಐದಾರು ಟೇಬಲ್ಗಳನ್ನು ಒಟ್ಟಿಗೆ ಇಟ್ಟು ಪಾರ್ಸಲ್ ಕಳಿಸ್ತಿದ್ದ. ಈತನ ಜಾಡು ಬೆನ್ನಟ್ಟಿದ್ದ ಸಿಸಿಬಿ ಟೀಂ ಆರೋಪಿಯನ್ನು ಮಾದಕ ವಸ್ತು ಸಮೇತ ಬಂಧಿಸಿದ್ದಾರೆ.
-
Bengaluru's CCB Narcotics Squad Conducted Swift Operation, apprehending 14 Individuals, Including International and Interstate Drug Peddlers. Also seized drugs worth of 7.83cr
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 16, 2023 " class="align-text-top noRightClick twitterSection" data="
ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯಗಳ ನಿಗ್ರಹ ಪಡೆಯು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, 14 ಜನ ಅಂತರಾಷ್ಟ್ರೀಯ ಮತ್ತು… pic.twitter.com/Weucct06Jd
">Bengaluru's CCB Narcotics Squad Conducted Swift Operation, apprehending 14 Individuals, Including International and Interstate Drug Peddlers. Also seized drugs worth of 7.83cr
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 16, 2023
ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯಗಳ ನಿಗ್ರಹ ಪಡೆಯು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, 14 ಜನ ಅಂತರಾಷ್ಟ್ರೀಯ ಮತ್ತು… pic.twitter.com/Weucct06JdBengaluru's CCB Narcotics Squad Conducted Swift Operation, apprehending 14 Individuals, Including International and Interstate Drug Peddlers. Also seized drugs worth of 7.83cr
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 16, 2023
ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯಗಳ ನಿಗ್ರಹ ಪಡೆಯು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, 14 ಜನ ಅಂತರಾಷ್ಟ್ರೀಯ ಮತ್ತು… pic.twitter.com/Weucct06Jd
ಹ್ಯಾಶಿಷ್ ಆಯಿಲ್ ಸಾಗಿಸುತ್ತಿದ್ದ ನಾಲ್ವರ ಬಂಧನ: ಮತ್ತೊಂದು ಪ್ರಕರಣದಲ್ಲಿ ಆಂಧ್ರ ಪ್ರದೇಶದಿಂದ ನಗರಕ್ಕೆ ಹ್ಯಾಶಿಷ್ ಆಯಿಲ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಆಂಧ್ರದಿಂದ ಡಬ್ಬದಲ್ಲಿ ಹ್ಯಾಶಿಷ್ ಆಯಿಲ್ ತರಿಸುತ್ತಿದ್ದ ಆರೋಪಿಗಳು ವಿಭಿನ್ನವಾಗಿ ಸ್ಮಗ್ಲಿಂಗ್ ಮಾಡುತ್ತಿದ್ದರು. ಇಂಜೆಕ್ಷನ್ ಸಿರಿಂಜ್ನಲ್ಲಿ ಬಳಸುತ್ತಿದ್ದ ಆರೋಪಿಗಳು, ಬಂಡೆಪಾಳ್ಯ ಬಳಿಯ ಮನೆಯೊಂದರಲ್ಲಿ ಹತ್ತು ಎಂಎಲ್‌ಎ ನಿಂದ ಐವತ್ತು ಎಂಎಲ್ ತುಂಬಿ ಮಾರಾಟ ಮಾಡುತ್ತಿದ್ದರು. ಈ ಹೊಸ ಟೆಕ್ನಿಕ್ ಬಳಸಿದ್ದ ಒಡಿಶಾ ಮೂಲದ ಸುರೇಶ್, ಕರ್ನಾಟಕದ ಅಕ್ಷಯ್, ಆದಿತ್ಯ ಮತ್ತು ಸಾಯಿ ಚೈತನ್ಯ ಸೇರಿ ನಾಲ್ವರನ್ನ ಸಿಸಿಬಿ ಟೀಂ ಅರೆಸ್ಟ್ ಮಾಡಿ ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯಾಶಿಷ್ ಆಯಿಲ್ ಜಪ್ತಿ ಮಾಡಿದ್ದಾರೆ.
ಗಾಂಜಾ ಮಾರಾಟ ಮಾಡ್ತಿದ್ದ ಮೂವರು ಸೆರೆ: ಮೂರನೇ ಪ್ರಕರಣದಲ್ಲಿ ಇನ್ನು ನಗರದಲ್ಲಿ ಹೋಲ್ ಸೇಲ್ ಆಗಿ ಗಾಂಜಾ ಮಾರಾಟ ಮಾಡ್ತಿದ್ದ ಮೂರು ಜನ ಅರೋಪಿಗಳನ್ನೂ ಸಿಸಿಬಿ ಟೀಂ ಬಂಧಿಸಿದೆ. ಕುನ್ನಾ ಸುನ್ನಾ, ಜಲಂದರ್, ಜಗದೀಶ್ ಬಂಧಿತ ಅರೋಪಿಗಳು. ಒಡಿಶಾದಿಂದ ಬೆಂಗಳೂರಿಗೆ ಗಾಂಜಾ ತಂದು ಹೋಲ್ಸೇಲ್ ರೀತಿಯಲ್ಲಿ ನಗರದ ಪೆಡ್ಲರ್ಸ್ ಗಳಿಗೆ ಮಾರಾಟ ಮಾಡುತ್ತಿದ್ದರೆಂದು ತನಿಖೆ ವೇಳೆ ಗೊತ್ತಾಗಿದೆ. ಕಾರಿನಲ್ಲಿ ಗಾಂಜಾ ಸಾಗಿಸುವಾಗಲೇ ಅರೋಪಿಗಳನ್ನು ಅಡ್ಡಗಟ್ಟಿ ಸಿಸಿಬಿ ಟೀಂ ಅರೆಸ್ಟ್ ಮಾಡಿದೆ.
ಇದನ್ನೂ ಓದಿ: ಕುಡಚಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಗುಜರಾತ್, ಪಶ್ಚಿಮ ಬಂಗಾಳ ಮೂಲದ ಯುವತಿಯರ ರಕ್ಷಿಸಿದ ಪೊಲೀಸರು