ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು 1005 ಮಂದಿಗೆ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,14,488ಕ್ಕೆ ಏರಿಕೆ ಆಗಿದೆ.
5 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 12,044ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1102 ಮಂದಿ ಇಂದು ಗುಣಮುಖರಾಗಿದ್ದು, ಈವರೆಗೆ 8,88,917 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ 208 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 12,044 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಕಳೆದ 7 ದಿನಗಳಲ್ಲಿ 27,358 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 78,831, ದ್ವಿತೀಯ ಸಂಪರ್ಕದಲ್ಲಿ 89,098 ಜನರು ಇದ್ದಾರೆ.
ಓದಿ: ಈಗ ಹೇಗಿದ್ದಾರೆ ರಜನಿಕಾಂತ್.. ವೈದ್ಯರು ಹೇಳಿದ್ದೇನು..?
ವಿಮಾನ ನಿಲ್ದಾಣದಿಂದ 1202 ಪ್ರಯಾಣಿಕರು ಬಂದಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಇನ್ನು ಯುಕೆಯಿಂದ ಬಂದ 403 ಮಂದಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿದ್ದು, 10 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. 144 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ಈವರೆಗೆ 14 ಮಂದಿಗೆ ಪಾಸಿಟಿವ್ ಬಂದಿದೆ.
ಬೆಂಗಳೂರಿನಲ್ಲಿಂದು 578 ಜನರಿಗೆ ಪಾಸಿಟಿವ್ - 4 ಮಂದಿ ಬಲಿ
ನಗರದಲ್ಲಿಂದು 578 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 385586ಕ್ಕೆ ಏರಿಕೆಯಾಗಿದೆ. 600 ಮಂದಿ ಇಂದು ಬಿಡುಗಡೆಯಾಗಿದ್ದು, ಒಟ್ಟು 372479 ಮಂದಿ ಈವರೆಗೆ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8819ಕ್ಕೆ ಇಳಿಕೆಯಾಗಿದೆ. ನಗರದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 4287ಕ್ಕೆ ಏರಿಕೆಯಾಗಿದೆ.