ದೊಡ್ಡಬಳ್ಳಾಪುರ : ಕುಡುಕ ಗಂಡನಿಗೆ ಬುದ್ಧಿ ಕಲಿಸಬೇಕೆಂದು ಆಕೆ ಮಕ್ಕಳೊಂದಿಗೆ ಮನೆ ಬಿಟ್ಟಳು. ಇದರಿಂದ ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಪಸ್ಸಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಶೋಕ್( 30) ನೇಣಿಗೆ ಶರಣಾಗಿರುವ ವ್ಯಕ್ತಿ. ಮದ್ಯವ್ಯಸನಿಯಾಗಿದ್ದ ಅಶೋಕ, ದಿನನಿತ್ಯ ಮನೆಗೆ ಕುಡಿದಿಕೊಂಡು ಬರುತ್ತಿದ್ದ. ಕುಡುಕ ಗಂಡನ ವರ್ತನೆಯಿಂದ ರೋಸಿ ಹೋಗಿದ್ದ ಹೆಂಡತಿ, ಗಂಡನಿಗೆ ಪಾಠ ಕಲಿಸಲು ಮುಂದಾದಳು. ಹೀಗಾಗಿ ಎರಡು ತಿಂಗಳ ಹಿಂದೆ ಗಂಡನ ಮನೆ ಬಿಟ್ಟು, ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು.
ಇತ್ತ ತನ್ನ ಹೆಂಡತಿಯನ್ನ ಮನೆಗೆ ಕರೆತರಲು ಗಂಡ ಸಾಕಷ್ಟು ಪ್ರಯತ್ನ ನಡೆಸಿದ. ಆದರೆ ಕುಡಿತ ಬಿಡದ ಗಂಡನ ವರ್ತನೆಯಿಂದ ಆಕೆ ಮಾತ್ರ ತವರಲ್ಲೇ ಇದ್ದಳು. ಇತ್ತೀಚೆಗೆ ಮಕ್ಕಳ ಟಿಸಿ ತೆಗೆದುಕೊಳ್ಳಲು ಗಂಡನ ಮನೆಗೆ ಬಂದಿದ್ದಳು. ಆಗಲೂ ತನ್ನನ್ನು ಬಿಟ್ಟು ಹೋಗದಂತೆ ಗಂಡ ಮನವಿ ಮಾಡಿದ್ದ. ಆದರೆ, ನನ್ನ ಪಾಲಿಗೆ ನೀನು ಸತ್ತಿದ್ದಿಯಾ! ಎಂದು ಹೇಳಿ ಮತ್ತೆ ಮನೆ ಬಿಟ್ಟು ಬಿಟ್ಟು ಹೋಗಿದ್ದಾಳೆ. ಇದರಿಂದ ಮನನೊಂದ ಅಶೋಕ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಇನ್ನು ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.