ದೇವನಹಳ್ಳಿ : ಹಿಜಾಬ್ - ಕೇಸರಿ ಶಾಲು ವಿವಾದದ ಹಿನ್ನಲೆ ಸರ್ಕಾರ ಶಾಲೆಗಳಿಗೆ ರಜೆ ನೀಡಿತ್ತು. ಇವತ್ತಿನಿಂದ ಪ್ರೌಢ ಶಾಲೆಗಳು ಪ್ರಾರಂಭವಾಗಿದೆ. ಶಾಲೆಯ ಶಿಕ್ಷಕಿ ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದರು. ಶಿಕ್ಷಕಿಯನ್ನ ರಜೆಯ ಮೇರೆಗೆ ಆಡಳಿತ ಮಂಡಳಿ ಮನೆಗೆ ಕಳುಹಿಸಿದೆ.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆ ಹೈಕೋರ್ಟ್ ಹಿಜಾಬ್ ಮತ್ತು ಕೇಸರಿ ಧರಿಸದಂತೆ ಮಧ್ಯಂತರ ತೀರ್ಪು ನೀಡಿತ್ತು. ಇವತ್ತು ಪ್ರೌಢ ಶಾಲೆ ಪ್ರಾರಂಭವಾಗಿದ್ದು, ದೇವನಹಳ್ಳಿ ತಾಲೂಕಿನ ವಿಜಯಪುರ ಶಾಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಶಿಕ್ಷಕಿ ಹಿಜಾಬ್ ಹಾಕೊಂಡು ಶಾಲೆಯಲ್ಲಿ ಓಡಾಡುತ್ತಿದ್ದರು.
ಹಿಜಾಬ್ ತೆಗೆಯುವಂತೆ ಶಾಲೆಯ ಮುಖ್ಯ ಶಿಕ್ಷಕರು ಹೇಳಿದರೂ ಶಿಕ್ಷಕಿ ಹಿಜಾಬ್ ತೆಗೆಯಲು ನಿರಾಕರಿಸಿದರು. ಹೀಗಾಗಿ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನ ರಜೆ ಮೇಲೆ ಮನೆಗೆ ಕಳುಹಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಿಜಾಬ್ ಅರ್ಜಿಗಳ ವಿಚಾರಣೆ ಪ್ರಾರಂಭ.. ಮಾಧ್ಯಮಗಳು ಜವಾಬ್ದಾರಿಯಿಂದ ನಡೆದಕೊಳ್ಳಬೇಕು.. ಸಿಜೆ ಮನವಿ