ETV Bharat / state

ಮಿಟಗಾನಹಳ್ಳಿ ಕ್ವಾರಿಯಲ್ಲಿ ಕಸ: ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಗ್ರಾಮಸ್ಥರ ಆಕ್ರೋಶ - ಡಂಪಿಂಗ್ ಯಾರ್ಡ್

ಮಿಟಗಾನಹಳ್ಳಿ ಕ್ವಾರಿಯಲ್ಲಿ ಯಾವುದೇ ಕಾರಣಕ್ಕೂ ಕಸ ಸುರಿಯಲು ಬಿಡುವುದಿಲ್ಲ ಎಂದು ಕಣ್ಣೂರು ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Pollution control Board Visit Mittaganahalli
ಗ್ರಾಮಸ್ಥರ ಆಕ್ರೋಶ
author img

By

Published : Sep 13, 2020, 5:35 PM IST

Updated : Sep 13, 2020, 9:42 PM IST

ಮಹದೇವಪುರ: ಕ್ವಾರಿಯಲ್ಲಿ ಕಸ ಸುರಿಯಲು ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಮಿಟಗಾನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಆಕ್ರೋಶ
ಮಿಟಗಾನಹಳ್ಳಿ ಕ್ವಾರಿಯಲ್ಲಿ ಯಾವುದೇ ಕಾರಣಕ್ಕೂ ಕಸ ಸುರಿಯಲು ಬಿಡುವುದಿಲ್ಲ ಎಂದು ಕಣ್ಣೂರು ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ವತಿಯಿಂದ ಮಿಟಗಾನಹಳ್ಳಿ ಕಸ ವಿಲೇವಾರಿ ಘಟಕದದಿಂದ 5 ಕಿ.ಮೀ ದೂರದ ಕಲ್ಯಾಣ ಮಂಟಪವೊಂದರಲ್ಲಿ ಪರಿಸರ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಮಿಟಗಾನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದವರಿಗೆ ಡಂಪಿಂಗ್​ ಯಾರ್ಡ್ ಬಳಿ ಸಭೆ ನಡೆಸುತ್ತೇವೆಂದು ಹೇಳಿದ್ದರಿಂದ ಸಾರ್ವಜನಿಕರು ಕಾಯುತ್ತಾ ಕುಳಿತಿದ್ದರು. ಸಭೆಯಲ್ಲಿ ಹಾಜರಾಗಿದ್ದ ಕೆಲ ಗ್ರಾಮಸ್ಥರೂ ಸಹ ಕಸ ಇಲ್ಲಿ ಹಾಕಬೇಡಿ ಇಲ್ಲಿನ ಪರಿಸ್ಥಿತಿ ಅರಿಯಲು ಸ್ಥಳಕ್ಕೆ ಬನ್ನಿ ಎಂದು ಕರೆದರೂ ಜಿಲ್ಲಾಧಿಕಾರಿ ಹಾಗೂ ಬಿಬಿಎಂಪಿ ಜಂಟಿ ಆಯುಕ್ತರು ಡಂಪಿಂಗ್ ಯಾರ್ಡ್ ಬಳಿ ಬರದೆ ಹಾಗೆ ಹೊರಟು ಹೋದರು.
ಪರಿಸರ ಇಲಾಖೆ ಹಿರಿಯ ಅಧಿಕಾರಿ ರೇಖಾ ಅವರು ತಮ್ಮ ಅಧಿಕಾರಿಗಳೊಂದಿಗೆ ಡಂಪಿಂಗ್ ಯಾರ್ಡ್ ಗೆ‌ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ಇಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ ಹೊರಟರು. ತಾ.ಪಂ. ಮಾಜಿ ಅಧ್ಯಕ್ಷ ನಂಜೇಗೌಡ ಮಾತನಾಡಿ, ಬಿಬಿಎಂಪಿಯವರು ಪರಿಸರ ಇಲಾಖೆಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ, ಪರಿಸರ ಇಲಾಖೆಗೆ ಮನವಿ ಮಾಡಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮಿಟಗಾನಹಳ್ಳಿ ಕಸ ವಿಲೇವಾರಿ ಘಟಕದ ಸುತ್ತಮುತ್ತಲ ಜನ ಊಟ ಕೇಳುತ್ತಿಲ್ಲ ಶುದ್ಧವಾದ ಗಾಳಿ ದೊರೆಯುವಂತೆ ಮಾಡಿ. ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡರು.
ಕಣ್ಣೂರು ಪಂಚಾಯಿತಿ ಮಾಜಿ ಅಧ್ಯಕ್ಷ ಭಕ್ತಪಾಲ್ ಮಾತನಾಡಿ, ಈ ಹಿಂದೆ ನಡೆದ ಸಭೆಯಲ್ಲಿ ಇಲ್ಲಿ ಕಸ ಸುರಿಯುವುದಿಲ್ಲ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದರು. ಆದರೂ ಮತ್ತೆ ಕಸ ಸುರಿಯಲು ಪ್ರಾರಂಭಿಸಿದ್ದಾರೆ. ಈ ಭಾಗದಲ್ಲಿ ಎರಡು ಅಡಿ ಹಳ್ಳ ತೋಡಿದರೂ ಲಿಚೆಡ್ ತುಂಬಿದ ನೀರು ಸಿಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ಹಾಳಾಗುವುದಲ್ಲದೆ ಪರಿಸರ ಮಾಲಿನ್ಯವಾಗುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕುವುದಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು. ಸ್ಥಳದಲ್ಲಿ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್, ಕೆ.ಸಿ.ಮುನಿನಾರಾಯಣ, ಅಶೋಕ್, ಶ್ರೀನಿವಾಸ್, ಚಂದ್ರಶೇಖರ್, ರಾಘವೇಂದ್ರ ಮತ್ತಿತರರಿದ್ದರು.

Last Updated : Sep 13, 2020, 9:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.