ETV Bharat / state

ದಿನಸಿ ಕಿಟ್ ವಿತರಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಪಂಚಾಯಿತಿ ಸದಸ್ಯೆ - Panchayat Member Marriage Anniversary

ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ ಭಾಗ್ಯ ಕೆಂಪರಾಜು ತಮ್ಮ 26 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಿನಸಿ ಕಿಟ್​​ಗಳ ವಿತರಣೆ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಂಡರು.

author img

By

Published : May 14, 2020, 12:39 PM IST

ನೆಲಮಂಗಲ: ಇತ್ತೀಚೆಗಷ್ಟೇ ನಗರಸಭೆಗೆ ಸೇರ್ಪಡೆಯಾದ ವಾಜರಹಳ್ಳಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯೆ ಹಾಗೂ ಅರಿಶಿನಕುಂಟೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ ಭಾಗ್ಯ ಕೆಂಪರಾಜು ತಮ್ಮ 26 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸರಳವಾಗಿ ಆಚರಿಸಿಕೊಂಡರು.

ವಿವಾಹ ವಾರ್ಷಿಕೋತ್ಸವದ ಅಂಗವಾಗಿ 250 ಕ್ಕೂ ಹೆಚ್ಚು ದಿನಸಿ ಕಿಟ್​​ಗಳ ವಿತರಣೆ ಮತ್ತು ವಾರ್ಡ್​ನ ಹಿರಿಯ ನಾಗರಿಕರಿಗೆ ಔಷಧಿ ಕಿಟ್​ಗಳ ವಿತರಣೆ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದರು.

ದಿನಸಿ ಕಿಟ್ ವಿತರಣೆಯ ಮೂಲಕ ಸರಳ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಮಾಜಿ ಉಪಾಧ್ಯಕ್ಷೆ ಭಾಗ್ಯ ಕೆಂಪರಾಜು

ನಂತರ ಮಾತನಾಡಿ ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್​​ಡೌನ್ ಆದ ಪರಿಣಾಮ ಜನ ಸಾಮಾನ್ಯರು ಪರದಾಡುವಂತಾಗಿದೆ. ಈಗಾಗಲೇ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಆಹಾರದ ಅಗತ್ಯತೆ ಇರುವವರನ್ನು ಗುರುತಿಸಿ ದಿನಸಿ ಕಿಟ್​ಗಳ ವಿತರಣೆ ಮಾಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.