ದೇವನಹಳ್ಳಿ: ಚುನಾವಣೆಯಲ್ಲಿ ಸ್ಪರ್ಧಿಸಿದಾಗ ತಮ್ಮ ವಿರುದ್ಧವೇ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳನ್ನು ಎತ್ತಿಕಟ್ಟಿದ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸಂಸದ ಬಚ್ಚೇಗೌಡರ ವಿರುದ್ದ ದೂರು ನೀಡುವುದಾಗಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ದೇವನಹಳ್ಳಿಯ ಐವಿಸಿ ರಸ್ತೆಯಲ್ಲಿನ ವಿಸ್ಡಮ್ ಶಾಲೆಯಲ್ಲಿ ನಡೆಯುತ್ತಿರುವ ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ಬಿ.ಎನ್.ಬಚ್ಚೇಗೌಡ ಮಾಯವಾಗಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲೂ ಕಾಣಿಸ್ತಿಲ್ಲ. ಈ ಬಗ್ಗೆ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.
ಸಂಸದರಿಗೆ ಬಂದ ಅನುದಾನ ಕೇವಲ ಒಂದು ತಾಲೂಕಿಗೆ ಮಾತ್ರ ನೀಡಲಾಗಿದೆ. ಲೋಕಸಭಾ ಕ್ಷೇತ್ರದ ಉಳಿದ ಯಾವುದೇ ತಾಲೂಕಿಗೆ ಅನುದಾನ ನೀಡಿಲ್ಲ. ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಬಚ್ಚೇಗೌಡರು ಕಾಂಗ್ರೆಸ್ನೊಂದಿಗೆ ಶಾಮೀಲಾಗಿದ್ದರು. ಎಲ್ಲಾ ಮುಖಂಡರಿಗೂ ಫೋನ್ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ದಾಖಲೆಗಳು ನನ್ನ ಬಳಿಯಿವೆ. ಇಂತಹವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಈ ಎಲ್ಲದರ ಕುರಿತು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಅಕ್ಬರ್ನ ಇನ್ನೊಂದು ಮುಖವನ್ನೂ ನಾವು ಮಕ್ಕಳಿಗೆ ತಿಳಿಸಬೇಕಿದೆ: ಸಚಿವ ಬಿ.ಸಿ.ನಾಗೇಶ್