ETV Bharat / state

ರಸ್ತೆ ಅಪಘಾತದಲ್ಲಿ ಐವರು ಸಾವು: ಸ್ನೇಹಿತರ ಸ್ಮರಣಾರ್ಥ​ ಕ್ರಿಕೆಟ್​ ಟೂರ್ನಮೆಂಟ್ - Five deaths in road accident at doddabalalpura

ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಮಧ್ಯದಲ್ಲಿ ಯಲಹಂಕ - ಹಿಂದೂಪುರ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಅಭಿವೃದ್ಧಿಯ ನಂತರ ಗ್ರಾಮದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಅಪಘಾತದಲ್ಲಿ ಕಂಟನಕುಂಟೆ ಶ್ರೀನಿವಾಸ್, ಪ್ರವೀಣ್ ಗೌಡ, ನಟರಾಜ್ ಸಾವನ್ನಪ್ಪಿದ್ದು, ಇವರ ಸ್ಮರಣಾರ್ಥ ಕಂಟನಕುಂಟೆಯ ಸ್ನೇಹಿತರ ಬಳಗ ನಟರಾಜ್ ಟ್ರೋಫಿ -2021ರ ಕ್ರಿಕೆಟ್ ಟೂರ್ನಮೆಂಟ್​ ಆಯೋಜಿಸಿದೆ.

Cricket tournament in memory of friends
ಶ್ರೀನಿವಾಸ್, ಪ್ರವೀಣ್ ಗೌಡ, ನಟರಾಜ್ ಅಪಘಾತದಲ್ಲಿ ಸಾವು
author img

By

Published : Mar 25, 2021, 7:43 PM IST

ದೊಡ್ಡಬಳ್ಳಾಪುರ: ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ಕಂಟನಕುಂಟೆ ಗ್ರಾಮದಲ್ಲಿ 9 ತಿಂಗಳ ಅವಧಿಯಲ್ಲಿ 9 ಅಪಘಾತಗಳು ಸಂಭವಿಸಿದ್ದು, ಗ್ರಾಮದ ಐವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಸ್ನೇಹಿತರ ಸ್ಮರಣಾರ್ಥ ಕ್ರಿಕೆಟ್​ ಟೂರ್ನಮೆಂಟ್​ನ್ನು ಸ್ನೇಹಿತರ ಬಳಗ ಆಯೋಜಿಸಿದೆ.

ಗ್ರಾಮಸ್ಥರಿಂದ ರಸ್ತೆ ತಡೆದು ಹೋರಾಟ

ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಮಧ್ಯದಲ್ಲಿ ಯಲಹಂಕ - ಹಿಂದೂಪುರ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಅಭಿವೃದ್ಧಿಯ ನಂತರ ಗ್ರಾಮದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮದ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟುವ ಸಮಯದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಈ ಅಪಘಾತಗಳಲ್ಲಿ ಗ್ರಾಮದ ಯುವಕರು ಸಾವನ್ನಪ್ಪಿದ್ದಾರೆ. ಹೆದ್ದಾರಿಗೆ ಸ್ಕೈವಾಕ್​ ನಿರ್ಮಿಸುವಂತೆ ಮತ್ತು ಸರ್ವಿಸ್​​ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ರಸ್ತೆ ತಡೆದು ಹೋರಾಟ ಸಹ ನಡೆಸಿದ್ದಾರೆ.

ಓದಿ:ಗುಡಿಸಲಿಗೆ ಬೆಂಕಿ : ಐದು ಲಕ್ಷ ರೂ. ಹಣ, ಚಿನ್ನಾಭರಣ ಕಣ್ಣೆದುರೇ ಸುಟ್ಟು ಕರಕಲು!

ರಸ್ತೆ ಅಪಘಾತದಲ್ಲಿ ಕಂಟನಕುಂಟೆ ಶ್ರೀನಿವಾಸ್, ಪ್ರವೀಣ್ ಗೌಡ, ನಟರಾಜ್​ ಸಾವನ್ನಪ್ಪಿದ್ದಾರೆ. ಇವರ ಸ್ಮರಣಾರ್ಥ ಕಂಟನಕುಂಟೆಯ ಸ್ನೇಹಿತರ ಬಳಗ ನಟರಾಜ್ ಟ್ರೋಫಿ -2021ರ ಕ್ರಿಕೆಟ್ ಟೂರ್ನಮೆಂಟ್​ ಆಯೋಜಿಸಿದೆ. ಈ ಮೂಲಕ ಗ್ರಾಮಸ್ಥರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸ್ಕೈವಾಕ್​ ಸರ್ವಿಸ್​ ರಸ್ತೆಗೆ ಆಗ್ರಹಿಸುವ ಯೋಜನೆ ಹಾಕಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.