ಬೆಂಗಳೂರು: ನಾನು ಕೋರ್ಟ್ ಕೇಸ್ ನಿಮಿತ್ತ ದೆಹಲಿಗೆ ತೆರುಳುತ್ತಿದ್ದೇನೆ. ಕೈಕಮಾಂಡ್ ಅಥವಾ ಯಾರನ್ನು ಭೇಟಿ ಮಾಡಲು ಹೋಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇಂದು ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಕೋರ್ಟ್ ಕೇಸ್ ನಿಮಿತ್ತ ದೆಹಲಿಗೆ ತೆರುಳುತ್ತಿದ್ದೇನೆ. ಇದಕ್ಕೆ ರಾಜಕೀಯದ ಯಾವುದೇ ಸಂಬಂಧ ಇಲ್ಲ. ಹೈಕಮಾಂಡ್ ಯಾರನ್ನು ಭೇಟಿ ಮಾಡೋದಿಲ್ಲ. ನಮಗೇನು ಪಕ್ಷದ ಕೆಲಸವಿಲ್ಲ. ಈಗ ಆರಾಮಾಗಿ, ಫ್ರೀಯಾಗಿ ನೋಡಿ ಖಾಸಗಿ ಗಾಡಿಲಿ ಬಂದಿದ್ದೀನಿ. ಹೋಗ್ತಾ ಇದೀನಿ ಅಷ್ಟೆ ಎಂದರು.
ಅತೃಪ್ತರೇನೋ ಎಲ್ಲ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, ಅತೃಪ್ತರು ಯಾರು ಇಲ್ಲ. ಎಲ್ಲ ತೃಪ್ತರೇ ಎಂದರು.
ಬಿಜೆಪಿ ಸರ್ಕಾರ ರಚನೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಡಿಯಪ್ಪಾ ಅದು ಯಡಿಯೂರಪ್ಪನವರಿಗೆ ಬಿಟ್ಟಿದ್ದು, ಬಿಜೆಪಿಗೆ ಬಿಟ್ಟ ವಿಚಾರ. ಅದರಲ್ಲಿ ನಮ್ಮದು ಏನು ಇಲ್ಲ ಎಂದು ಮುನ್ನೆಡೆದರು.
ದಿಢೀರ್ ದೆಹಲಿಗೆ ಹೊರಟ ಶಿವಕುಮಾರ್ ಹೈಕಮಾಂಡ್ ಭೇಟಿ ಮಾಡಲು ಹೋಗಿದ್ದಾರೆ ಎನ್ನಲಾಗಿತ್ತಿದ್ದು, ಅಲ್ಲದೇ ಸರ್ಕಾರದ ಪತನ ಹಿನ್ನಲೆ ಎಲ್ಲಾ ಮಾಹಿತಿಯನ್ನ ಕಾಂಗ್ರೆಸ್ ನಾಯಕರಿಗೆ ನಿಡೋ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.