ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೇವನಹಳ್ಳಿ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳನ್ನು ವೇದಿಕೆ ಮೇಲೆ ಕರೆಯದೇ ದ್ವಜಾರೋಹಣ ಮಾಡಿದ್ದಾರೆ ಎಂದು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅಸಮಾಧಾನಗೊಂಡಿದ್ದರು.
ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯ್ತು. ಜಿಲ್ಲಾಧಿಕಾರಿ ಕರಿಗೌಡ ಅವರು ಚುನಾಯಿತ ಪ್ರತಿನಿಧಿಗಳನ್ನು ವೆದಿಕೆ ಮೇಲೆ ಕರೆಯದೇ ಧ್ವಜಾರೋಹಣ ಮಾಡಿ ನಂತರ ವೇದಿಕೆ ಮೇಲೆ ಶಾಸಕರು ಸೇರಿದಂತೆ ಪ್ರಮುಖ ಮುಖಂಡರನ್ನು ಕರೆದರು.
ಆದರೆ, ಶಾಸಕರು ವೇದಿಕೆ ಮೇಲೆ ಹೋಗದೇ ನಮಗೆ ಅವಮಾನವಾಗಿದೆ. ನಮ್ಮ ಕ್ಷೇತ್ರದಲ್ಲಿ ಜಿಲ್ಲಾ ಕೇಂದ್ರವಿದ್ದು, ನಮ್ಮ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಬೇಕು. ಆದರೆ ನಮ್ಮನ್ನು ಕಡೆಗಣಿಸಿ ಧ್ವಜಾರೋಹಣ ಮಾಡಿದ್ದಾರೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳ ಆರೋಪ ಮಾಡಿದ್ದಾರೆ. ಇದರಿಂದ ವೇದಿಕೆಯಲ್ಲಿ ಖಾಲಿ ಖುರ್ಚಿಗಳ ದರ್ಶನವಾಯಿತು.
ವೇದಿಕೆ ಮೇಲೆ ಒಂಟಿಯಾಗಿ ಖಾಲಿ ಚೇರುಗಳ ಮಧ್ಯೆ ಕುಳಿತ ಡಿಸಿ ಕರಿಗೌಡ ಅವರು ಎಸ್ಪಿ ರವಿ ಡಿ ಚೆನ್ನಣ್ಣನವರ್ ಜೊತೆಯಲ್ಲಿ ಮನವೊಲಿಸುವ ಪ್ರಯತ್ನ ಮಾಡಿದ್ರು. ಸುಮಾರು ಒಂದು ಗಂಟೆಗಳ ಕಾಲ ಪಟ್ಟು ಬಿಡದೇ ಕೂತಿದ್ದ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರು ಕೊನೆಯಲ್ಲಿ ವೇದಿಕೆ ಏರಿದ್ರು.
ಜಿಲ್ಲಾಡಳಿತ ಮತ್ತು ಶಾಸಕರ ಕಿತ್ತಾಟದಿಂದ ಶಾಲಾ ಮಕ್ಕಳಿ ಬಿಸಿಲಿನಲ್ಲೆ ಕಾರ್ಯಕ್ರಮ ಉದ್ಘಾಟನೆಗಾಗಿ ಕಾದು ಕುಳಿತಿದ್ದರು.