ಬೆಂಗಳೂರು: ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡು ಪ್ರಪಂಚದಾದ್ಯಂತ ವ್ಯಾಪಿಸುತ್ತಿರುವ ಮಹಾಮಾರಿ ಕೊರೊನಾ ಸೋಂಕು ಭಾರತಕ್ಕೂ ಕಾಲಿರಿಸಿದ್ದು, ಒಟ್ಟು 28 ಶಂಕಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 16 ವಿದೇಶಿ ಹಾಗೂ 12 ಭಾರತೀಯರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಈ ಸೋಂಕು ಹೇಗೆ ಹರಡುತ್ತದೆ ಅದರ ಲಕ್ಷಣ ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನೋಡೋದಾದ್ರೆ,
ಇವು ಸೋಂಕಿನ ಲಕ್ಷಣಗಳು:
ಕೆಮ್ಮು, ಜ್ವರ, ಸೀನುವುದು ಉಸಿರಾಟ ಸಮಸ್ಯೆ, ಕೆಲ ರೋಗಿಗಳಲ್ಲಿ ವಾಂತಿ ಮತ್ತು ಭೇದಿ, ರೋಗಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿದ್ದಾಗ ನ್ಯುಮೋನಿಯಾ ಹಾಗೂ ಕಿಡ್ನಿ ವೈಫಲ್ಯ ಉಂಟಾಗಿ ಸಾವು ಸಂಭವಿಸುತ್ತದೆ.
-
Simple measures can prevent #Coronavirus: pic.twitter.com/GK8uGMgEWj
— NDMA India (@ndmaindia) March 3, 2020 " class="align-text-top noRightClick twitterSection" data="
">Simple measures can prevent #Coronavirus: pic.twitter.com/GK8uGMgEWj
— NDMA India (@ndmaindia) March 3, 2020Simple measures can prevent #Coronavirus: pic.twitter.com/GK8uGMgEWj
— NDMA India (@ndmaindia) March 3, 2020
ಕೊರೊನಾ ವೈರಸ್ ಹರಡುವ ಬಗೆ ಹೇಗೆ?
- ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ,
- ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿದ್ದಾಗ ವೈರಾಣು ಹರಡುವ ಸಾಧ್ಯತೆ ಹೆಚ್ಚು.
- ಸೋಂಕಿತ ವ್ಯಕ್ತಿಯೊಂದಿಗೆ ಹಸ್ತಲಾಘವ ಮತ್ತು ಸ್ಪರ್ಶಿಸುವಾಗ,
- ಸೋಂಕಿತ ವ್ಯಕ್ತಿಯು ಬಳಸಿದ (ಕರವಸ್ತ್ರ,ಟವೆಲ್) ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ,
- ಸ್ವಚ್ಛಗೊಳಿಸದ ಕೈಗಳಿಂದ ಕಣ್ಣು, ಮೂಗು ಹಾಗು ಬಾಯಿಯನ್ನು ಮುಟ್ಟುವುದರಿಂದ ಈ ಸೋಂಕು ಹರಡುತ್ತದೆ.
-
Prevention tips for protection from #coronavirus: pic.twitter.com/wBAw5k7wAE
— NDMA India (@ndmaindia) March 3, 2020 " class="align-text-top noRightClick twitterSection" data="
">Prevention tips for protection from #coronavirus: pic.twitter.com/wBAw5k7wAE
— NDMA India (@ndmaindia) March 3, 2020Prevention tips for protection from #coronavirus: pic.twitter.com/wBAw5k7wAE
— NDMA India (@ndmaindia) March 3, 2020
-
ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?
- ಕೊರೊನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು.
- ಶಂಕಿತ ರೋಗಿಯು ಮನೆಯಲ್ಲಿದ್ದರೆ ಅವರಿಂದ ಪ್ರತ್ಯೇಕವಾಗಿ ವಾಸಿಸಬೇಕು.
- ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಆಗಿಂದಾಗ್ಗೆ ಸಾಬೂನಿನಿಂದ ಕೈ ತೊಳೆಯಬೇಕು.
- ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್/ ಕರವಸ್ತ್ರ ಉಪಯೋಗಿಸಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.
- ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
- ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಅಸುರಕ್ಷಿತವಲ್ಲದ ಕಾಡುಪ್ರಾಣಿ ಮತ್ತು ಸಾಕು ಪ್ರಾಣಿಗಳನ್ನು ಮುಟ್ಟಬಾರದು.
-
Novel Coronavirus (2019-nCoV) advice for the public: #MythBusters #coronavirus
— NDMA India (@ndmaindia) March 3, 2020 " class="align-text-top noRightClick twitterSection" data="
What precautions should i take while travelling? (2019-nCoV)?
Courtesy @WHO pic.twitter.com/oaX0sJhEPq
">Novel Coronavirus (2019-nCoV) advice for the public: #MythBusters #coronavirus
— NDMA India (@ndmaindia) March 3, 2020
What precautions should i take while travelling? (2019-nCoV)?
Courtesy @WHO pic.twitter.com/oaX0sJhEPqNovel Coronavirus (2019-nCoV) advice for the public: #MythBusters #coronavirus
— NDMA India (@ndmaindia) March 3, 2020
What precautions should i take while travelling? (2019-nCoV)?
Courtesy @WHO pic.twitter.com/oaX0sJhEPq
-
ಈ ಸೋಂಕಿಗೆ ಇಲ್ಲಿಯವರೆಗೆ ಯಾವುದೇ ಔಷಧಿ ಅಥವಾ ಚುಚ್ಚುಮದ್ದು ಕಂಡು ಹಿಡಿದಿಲ್ಲ. ರೋಗಿಯ ಗುಣ ಲಕ್ಷಣಗಳ ಆಧಾರದ ಮೇಲೆ ಆತನಿಗೆ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಸಾಕಷ್ಟು ಎಚ್ಚರಿಕೆ ವಹಿಸುವುದು ಸೂಕ್ತ.
-
ಈ ಮೊದಲೇ ತಿಳಿಸಿರುವಂತೆ, ನಮ್ಮ ಸರ್ಕಾರ #COVID19 ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ನಾಗರಿಕರು ಯಾವುದೇ ಭೀತಿಗೆ ಒಳಗಾಗದೆ, ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ. https://t.co/BMWV3GgDJo
— B Sriramulu (@sriramulubjp) March 3, 2020 " class="align-text-top noRightClick twitterSection" data="
">ಈ ಮೊದಲೇ ತಿಳಿಸಿರುವಂತೆ, ನಮ್ಮ ಸರ್ಕಾರ #COVID19 ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ನಾಗರಿಕರು ಯಾವುದೇ ಭೀತಿಗೆ ಒಳಗಾಗದೆ, ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ. https://t.co/BMWV3GgDJo
— B Sriramulu (@sriramulubjp) March 3, 2020ಈ ಮೊದಲೇ ತಿಳಿಸಿರುವಂತೆ, ನಮ್ಮ ಸರ್ಕಾರ #COVID19 ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ನಾಗರಿಕರು ಯಾವುದೇ ಭೀತಿಗೆ ಒಳಗಾಗದೆ, ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ. https://t.co/BMWV3GgDJo
— B Sriramulu (@sriramulubjp) March 3, 2020
ರಾಜ್ಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರಿರಾಮುಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.