ETV Bharat / state

ಕೊರೊನಾ ವಾರಿಯರ್​ಗೆ ಅವ್ಯಾಚ ಶಬ್ದಗಳಿಂದ ನಿಂದನೆ: ಪ್ರತಿಭಟನೆ - ಕೊರೊನಾ ವಾರಿಯರ್ಸ್ ಪ್ರತಿಭಟನೆ

ಹೊಸಕೋಟೆ ನಗರದ ಕೊರೊನಾ ವಾರಿಯರ್​ ಜೊತೆ ಸೋಂಕಿತ ವ್ಯಕ್ತಿ ಅವಾಚ್ಯ ಪದ ಬಳಸಿ ಆಕೆಯನ್ನು ನಿಂದಿಸಿದ ಹಿನ್ನಲೆ ಕೊರೊನಾ ವಾರಿಯರ್ಸ್ ತಮಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

Corona Warriors protest
ಕೊರೊನಾ ವಾರಿಯರ್ಸ್ ಪ್ರತಿಭಟನೆ
author img

By

Published : Sep 10, 2020, 9:59 PM IST

ಹೊಸಕೋಟೆ: ಕೊರೊನಾ ಸೋಂಕಿತ ವ್ಯಕ್ತಿಯಿಂದ ಮಾಹಿತಿ ಕಲೆ ಹಾಕಲು ಕರೆ ಮಾಡಿದ ಕೊರೊನಾ ವಾರಿಯರ್​ಗೆ ಸೋಂಕಿತನೋರ್ವ ಅವ್ಯಾಚ ಪದಗಳನ್ನು ಬಳಸಿ ಪೋನಿನಲ್ಲಿ ಆಕೆಯ ಮೇಲೆ ನಿಂದನೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆ ನಗರದ ಚೇತನ್​ ಎಂಬ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ನೇರವಾಗಿ ಹೊಸಕೋಟೆ ಸರ್ಕಾರಿ ಕೋವಿಡ್ ಆಸ್ವತ್ರೆಗೆ ಬಂದು ಚಿಕಿತ್ಸೆಗೆ ಆಸ್ವತ್ರೆಯಲ್ಲಿ ದಾಖಲಾಗಿದ್ದಾನೆ. ಹೀಗಾಗಿ ಸೋಂಕಿತನ ಪ್ರೈಮರಿ ಕಾಂಟ್ಯಾಕ್ಟ್ ಮಾಹಿತಿ ಕಲೆ ಹಾಕಲು ಹಿರಿಯ ಅಧಿಕಾರಿಗಳ ಆದೇಶದಂತೆ ಕೊರೊನ ವಾರಿಯರ್ ಮಹಿಳೆ ಸೊಂಕಿತನಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಆದರೆ ಈ ವೇಳೆ ಕೊರೊನಾ ವಾರಿಯರ್ಸ್ ಗೆ ಮಾಹಿತಿ ನೀಡಬೇಕಿದ್ದ ಮಹಿಳೆಯ ಜೊತೆ ಸೋಂಕಿತ ಅಸಭ್ಯವಾಗಿ ಮಾತನಾಡಿ ನಮ್ಮ ಮನೆ ವಿಳಾಸ ನಿಮಗೇಕೆ ಎಂದು ನಿಂದಿಸಿದ್ದಾನೆ.

ಕೊರೊನಾ ವಾರಿಯರ್ಸ್ ಪ್ರತಿಭಟನೆ

ಸೋಂಕಿತ ಆತಂಕದಲ್ಲಿ ಮಾತನಾಡಿದ್ದಾನೆ ಎಂದು ಒಂದು ದಿನ ಬಿಟ್ಟು ನಂತರ ಕರೆ ಮಾಡಿದರೆ, ಮತ್ತೋರ್ವ ವಾರಿಯರ್ ಜೊತೆಯು ತೀರಾ ಕೆಳ ಮಟ್ಟದ ಭಾಷೆ ಬಳಸಿ ಮಾತನಾಡಿದ್ದು, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹಗಲಿರುಳು ಶ್ರಮಿಸುತ್ತಿರೂ ವಾರಿಯರ್ಸ್​ನನ್ನು ಕೆರಳಿಸಿದೆ.

ಹೀಗಾಗಿ ಸೋಂಕಿತನ ಆಡಿಯೋವನ್ನ ಹಿರಿಯ ಅಧಿಕಾರಿಗಳಿಗೆ ನೀಡಿದ ವಾರಿಯರ್ಸ್ ಅವಾಚ್ಯ ಶಬ್ದಗಳಿಂದ ನಿಂದಿಸಿದವನ ವಿರುದ್ದ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನಿನ್ನೆ ಸಂಜೆಯಿಂದಲೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯ ಕೊರೊನಾ ವಾರಿಯರ್ಸ್ ನಮಗೆ ನ್ಯಾಯ ಕೊಡಿಸಿ ಎಂದು ಕೆಲಸವನ್ನ ಬಿಟ್ಟು ಪ್ರತಿಭಟನೆಗಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿ ಕೊರೊನಾ ವಾರಿಯರ್ಸ್ ಜೊತೆ ಸಭೆ ನಡೆಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ವಾರಿಯರ್ಸ್ ಜೊತೆ ತೀರಾ ಕೆಳ ಮಟ್ಟದ ಭಾಷೆ ಬಳಸಿ ಮಾತನಾಡಿದ ಸೋಂಕಿತನ ವಿರುದ್ದ ಪೊಲೀಸರ ಮುಖಾಂತರ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ವಾರಿಯರ್ಸ್ ಸಾಮೂಹಿಕ ಪ್ರತಿಭಟನೆಯನ್ನ ಹಿಂಪಡೆದುಕೊಂಡಿದ್ದಾರೆ.

ಇನ್ನೂ ಇದೇ ರೀತಿ ತಾಲೂಕಿನಲ್ಲಿ ಮಾಹಿತಿ ಕಲೆ ಹಾಕಲು ಹೋಗುವ ಮಹಿಳೆಯರ ಮೇಲೆ ಕೆಲವರು ದಬ್ಬಾಳಿಕೆ ಮಾಡುತ್ತಿದ್ದು, ಅಂತವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೊರೊನಾ ವಾರಿಯರ್ಸ್ ಬೆಂಗಳೂರು ಗ್ರಾಮಾಂತರ ಎಸ್ಪಿ ಮತ್ತು ಡಿಸಿಗೆ ದೂರು ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.