ETV Bharat / state

ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ರಾಜ್ಯಕ್ಕೆ ಆಗಮಿಸಿದ ರಾಹುಲ್​ ಗಾಂಧಿ, ಸ್ವಾಗತಿಸಿದ ಡಿಕೆಶಿ

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಹಿನ್ನೆಲೆ ರಾಜ್ಯಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆಗಮಿಸಿದ್ದಾರೆ.

congress-mp-rahul-gandhi-arrives-in-karnataka-to-launch-gruha-lakshmi-scheme
ಗೃಹಲಕ್ಷ್ಮಿ ಯೋಜನೆಗೆ ಚಾಲನೆ
author img

By ETV Bharat Karnataka Team

Published : Aug 30, 2023, 11:21 AM IST

Updated : Aug 30, 2023, 1:01 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮೈಸೂರಿನಲ್ಲಿ ಇಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.

ವಿಶೇಷ ವಿಮಾನದಲ್ಲಿ ಆಗಮಿಸಿದ ರಾಹುಲ್​ ಇದೀಗ ವಿಮಾನ ನಿಲ್ದಾಣದಿಂದ ನೇರವಾಗಿ ಹೆಲಿಕಾಪ್ಟರ್​ನಲ್ಲಿ ಮೈಸೂರಿನತ್ತ ತೆರಳುತ್ತಿದ್ದಾರೆ. ರಾಹುಲ್​ ಜೊತೆ ಡಿಸಿಎಂ ಡಿಕೆ ಶಿವಕುಮಾರ್​ ಕೂಡ ತೆರಳಲಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು, ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಶಿವಕುಮಾರ್​, ''ಇಂದು ಎಲ್ಲ ಮಹಿಳೆಯರ ಅಕೌಂಟ್​​ಗೆ ಹಣ ಮಂಜೂರಾತಿ ಆಗಲಿದೆ. ಬ್ಯಾಂಕ್​​ನವರು ಸಮಯ ನಿಗದಿ ಮಾಡಿಕೊಂಡು ಹಂತ ಹಂತವಾಗಿ ಹಣ ಹಾಕಲಿದ್ದಾರೆ'' ಎಂದು ತಿಳಿಸಿದರು. ಗ್ಯಾರಂಟಿಗಳಿಂದ ರಾಜ್ಯ ಅರ್ಥಿಕ ದಿವಾಳಿ ಎಂಬ ಬೊಮ್ಮಾಯಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ''ಮೋದಿಯವರು ಯಾಕೆ ಸಿಲಿಂಡರ್ ಮೇಲೆ 200 ರೂ. ಸಬ್ಸಿಡಿ ಅನೌನ್ಸ್ ಮಾಡಿದ್ರು? ಅದು ದಿಕ್ಕು ತಪ್ಪಿಸಲ್ವಾ? ಹೆಣ್ಣು ಮಕ್ಕಳಿಗೆ ಯಾಕೆ 200 ರೂಪಾಯಿ ಕಡಿತ ಮಾಡಿದ್ದಾರೆ. ಮಧ್ಯಪ್ರದೇಶದ ಸಿಎಂ ಯಾಕೆ ಹೆಣ್ಣುಮಕ್ಕಳಿಗೆ 1500 ರೂಪಾಯಿ ಘೋಷಣೆ ಮಾಡಿದ್ದಾರೆ'' ಎಂದು ಪ್ರಶ್ನಿಸಿದರು.

ಮಾಧ್ಯಮದವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

''ನಾವು 2000 ರೂ. ಘೋಷಣೆ ಮಾಡಿದ್ದೇವೆ ಅಂತ ಇವರು ಯಾಕೆ 200 ರೂ. ಕಡಿತ ಮಾಡಿದ್ದಾರೆ. ನಾವು ಮಾಡಿದ್ರೆ ಮಾತ್ರ ದಿವಾಳಿ ಆಗುತ್ತದೆಯೇ? ಅವರು ಮಾಡಿದರೆ ದಿವಾಳಿ ಆಗಲ್ಲವೆ? ನಾವ್ ಮಾಡಿದಾಗ ಟ್ರಾಕ್ ತಪ್ಪು ಹೋಗುತ್ತದೆ. ಅವರು ಮಾಡಿದಾಗ ಸರಿಯಾಗಿ ಹೋಗುತ್ತದೆಯೇ? ಇರಲಿ ವಿರೋಧ ಪಕ್ಷದವರು ಮಾತಾಡಬೇಕು'' ಎಂದು ಹೇಳಿದರು.

ಬಿಜೆಪಿ ಶಾಸಕರು‌ ಕಾಂಗ್ರೆಸ್ ಸೇರ್ಪಡೆ ವಿಚಾರ ಪ್ರತಿಕ್ರಿಯಿಸಿ, ''ಕೆಲವರು ಅವರ ಸಮಸ್ಯೆಗಳನ್ನು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಸಾಧ್ಯವಾದಷ್ಟು ಅವರಿಗೆ ಜನರಿಗೆ ಸಹಾಯ ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಅದು‌ ಬಿಟ್ಟರೆ ಬೇರೆ ಏನೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾರ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಭವಿಷ್ಯ ಇದೆ, ಅಂತ ಕೆಲವರು‌ ಇಚ್ಚೆ ಪಡುವವರು ಇರುತ್ತಾರೆ'' ಎಂದರು. ''ಈ ಮುನ್ನ ಇವರು ಮಾಡಿದಾಗ ಏನಾಯ್ತು? ಡಬಲ್ ಇಂಜಿನ್ ಸರ್ಕಾರ ಕೆಡವಿದ್ರಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದ್ರಲ್ಲವೇ'' ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಇಂದು ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ: ಬೃಹತ್ ವೇದಿಕೆ ಸಜ್ಜು

Last Updated : Aug 30, 2023, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.