ETV Bharat / state

ಹೂವು ಬೆಳೆಗಾರರಿಗೆ ಹೆಕ್ಟೇರ್​ ಲೆಕ್ಕದಲ್ಲಿ ಪರಿಹಾರ: ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ದೇವಾಲಯ, ಮದುವೆ, ಸಭೆ-ಸಮಾರಂಭಗಳನ್ನ ಬಂದ್​ ಮಾಡಿದ್ದರಿಂದ ಹೂವು ಬೆಳೆಗಾರರಿಗೆ ಅಧಿಕ ನಷ್ಟ ಉಂಟಾಗಿದ್ದು, ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಗರಿಷ್ಠ ಒಂದು ಹೆಕ್ಟೇರ್​ಗೆ 25,000 ಮೀರದಂತೆ ಪರಿಹಾರ ಧನವನ್ನ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಾಹಾಂತೇಶ ಮುರಗೋಡ ತಿಳಿಸಿದ್ದಾರೆ.

Compensation per hectare for flower growers
ಹೂವು ಬೆಳೆಗಾರರಿಗೆ ಹೆಕ್ಟೇರ್​ ಲೆಕ್ಕದಲ್ಲಿ ಪರಿಹಾರ..ತೋಟಗಾರಿಕೆ ಉಪನಿರ್ದೇಶಕ ಮಾಹಾಂತೇಶ ಮುರಗೋಡ
author img

By

Published : May 18, 2020, 3:46 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಲಾಕ್​ಡೌನ್​ನಿಂದಾಗಿ ಹೂವು ಬೆಳೆಗಾರರಿಗೆ ಅಧಿಕ ನಷ್ಟವಾಗಿದ್ದು, ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಗರಿಷ್ಠ ಒಂದು ಹೆಕ್ಟೇರ್​ಗೆ 25,000 ಮೀರದಂತೆ ಪರಿಹಾರ ಧನವನ್ನ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಾಹಾಂತೇಶ ಮುರಗೋಡ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ 2019-20ನೇ ಸಾಲಿನ ಅಲ್ಪಾವಧಿ ಚೆಂಡು ಹೂವು, ಸೇವಂತಿಗೆ, ಆ್ಯಸ್ಟರ್ ಇತ್ಯಾದಿ ಹೂ ಬೆಳೆಗಳ ಹಿಂಗಾರು ಸಮೀಕ್ಷೆ ಮತ್ತು ಬಹು ವಾರ್ಷಿಕ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್ ಇತ್ಯಾದಿ ಹಾಗೂ ಸಂರಕ್ಷಿತ ಬೇಸಾಯದಲ್ಲಿ ಬೆಳೆದ ಗುಲಾಬಿ, ಜರ್ಬೆರಾ, ಕಾರ್ನೇಷನ್, ಆರ್ಕಿಡ್ ಇತ್ಯಾದಿ ಬೆಳೆಗಳ ಮುಂಗಾರು ಬೆಳೆ ಸಮೀಕ್ಷೆಯ ಮಾಹಿತಿ ಆಧರಿಸಿ ಹೂ ಬೆಳೆಗಾರರಿಗೆ ಪರಿಹಾರಧನ ನೀಡಲಾಗುವುದು ಎಂದರು.

ಇನ್ನು, 2019-20ನೇ ಸಾಲಿನ ಮುಂಗಾರು/ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಹೂ ಬೆಳೆದ ರೈತರು, ಯಾವುದೇ ದಾಖಲಾತಿಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ರೈತರು ಬೆಳೆದಿರುವ ಹೂ ಬೆಳೆಗಳು 2019-20ನೇ ಸಾಲಿನ ಹಿಂಗಾರು/ಮುಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲೆಯಾಗದಿದ್ದಲ್ಲಿ ಅಂತಹ ರೈತರು ಅರ್ಜಿಯೊಂದಿಗೆ ಆರ್.ಟಿ.ಸಿ., ಆಧಾರ್ ಕಾರ್ಡ್, ರೈತರ ಬ್ಯಾಂಕ್ ಪುಸ್ತಕದ ಜೆರಾಕ್ಸ್, ಸ್ವಯಂ ದೃಢೀಕೃತ ಘೋಷಣಾ ಪತ್ರದೊಂದಿಗೆ ಆಯಾ ತಾಲೂಕು ತೋಟಗಾರಿಕೆ ಇಲಾಖೆಗೆ ಮೇ 26ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.