ETV Bharat / state

ಇನ್ಮುಂದೆ ಸಿಎಂ ಪರಿಹಾರ ನಿಧಿ ಪಡೆಯಲು ಅಲೆಯಬೇಕಿಲ್ಲ... ಆನ್​ಲೈನ್​ ವ್ಯವಸ್ಥೆ ಜಾರಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಕಾರ್ಯವಿಧಾನಗಳನ್ನು ಆನ್ ಲೈನ್ ಮೂಲಕ ನಿರ್ವಹಿಸುವ ತಂತ್ರಾಂಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಲೋಕಾರ್ಪಣೆ ಮಾಡಿದರು.

cm fund will availble in online
ಆನ್​ಲೈನ್ ವ್ಯವಸ್ಥೆ ಜಾರಿ
author img

By

Published : Sep 16, 2020, 10:37 PM IST

ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿ ಪಡೆಯಲು ಇನ್ಮುಂದೆ ಅರ್ಜಿ ಹಿಡಿದು ಅಲೆದಾಡಬೇಕಿಲ್ಲ. ಆನ್​ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಿ ದಾಖಲೆ ಒದಗಿಸಿದರೆ ಅರ್ಜಿದಾರರ ಖಾತೆಗೆ ಪರಿಹಾರದ ಮೊತ್ತ ಬರಲಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಕಾರ್ಯವಿಧಾನಗಳನ್ನು ಆನ್​​ಲೈನ್ ಮೂಲಕ ನಿರ್ವಹಿಸುವ ತಂತ್ರಾಂಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಲೋಕಾರ್ಪಣೆ ಮಾಡಿದರು.

ನಂತರ ಮಾತನಾ‌ಡಿದ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ದೈನಂದಿನ ಕಾರ್ಯ ವಿಧಾನಗಳನ್ನು ಅಂತರ್ಜಾಲದ ಮೂಲಕ ನಿರ್ವಹಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದ್ದೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡವರು ಮತ್ತು ಅಶಕ್ತ ಜನರ ವೈದ್ಯಕೀಯ ವೆಚ್ಚಕ್ಕಾಗಿ ಪರಿಹಾರವನ್ನು ಒದಗಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

cm fund will availble in online
ಆನ್​ಲೈನ್ ವ್ಯವಸ್ಥೆ ಜಾರಿ
ಸಾರ್ವಜನಿಕರು, ಸಂಘ ಸಂಸ್ಥೆಗಳು, ನಿಗಮ-ಮಂಡಳಿಗಳು ನೀಡುವ ದೇಣಿಗೆಯ ಮೊತ್ತದಿಂದ ಪರಿಹಾರ ಕಾರ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ. ನೈಸರ್ಗಿಕ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ನೊಂದ ಸಂತ್ರಸ್ತರಿಗೆ ಹಾಗೂ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಕೂಡ ಪರಿಹಾರ ನಿಧಿಯ ಮೊತ್ತವನ್ನು ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತಿದೆ ಎಂದು ನಿಧಿಯ ಕಾರ್ಯವಿಧಾನದ ಮಾಹಿತಿ ನೀಡಿದರು.2020 ರ ಏಪ್ರಿಲ್ ತಿಂಗಳಿನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಅಂತರ್ಜಾಲದ ಮೂಲಕ ಸ್ವೀಕರಿಸಿ, ಪರಿಹಾರದ ಮೊತ್ತವನ್ನು ಡಿ.ಬಿ.ಟಿ. ಯೋಜನೆಯ ಮೂಲಕ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಧ್ಯವರ್ತಿಗಳು ಬಡ ಅರ್ಜಿದಾರರನ್ನು ಶೋಷಿಸುವುದು ಹಾಗೂ ನಕಲಿ ಫಲಾನುಭವಿಗಳ ಹಾವಳಿಯನ್ನು ತಪ್ಪಿಸಿ, ಅರ್ಹ ಫಲಾನುಭವಿಗಳ ಅವಶ್ಯಕತೆಗೆ ತಕ್ಕಂತೆ ಶೀಘ್ರವಾಗಿ ಪರಿಹಾರ ಮೊತ್ತವನ್ನು ತಲುಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಿಕೆಯಲ್ಲಿ ಆಗಬಹುದಾದ ವಿಳಂಬವನ್ನು ತಡೆಯಲು ತಂತ್ರಾಂಶವು ಸಹಕಾರಿಯಾಗಲಿದೆ. ಬಿ.ಪಿ.ಎಲ್. ಪಡಿತರ ಚೀಟಿ ಮತ್ತು ಆಧಾರ್ ಗುರುತಿನ ಚೀಟಿಯ ಡಾಟಾವನ್ನು ಮಾನದಂಡವಾಗಿ ಉಪಯೋಗಿಸುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಅರ್ಜಿದಾರರಿಗೆ ಯಾವುದೇ ವಿಳಂಬವಿಲ್ಲದೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪರಿಹಾರವನ್ನು ಈ ತಂತ್ರಾಂಶದ ಮೂಲಕ ಒದಗಿಸಬಹುದಾಗಿರುತ್ತದೆ ಎಂದರು.ಎಲ್ಲಿ ಅರ್ಜಿ ಸಲ್ಲಿಸಬಹುದು:ವಿಧಾನಸಭೆ, ವಿಧಾನ ಪರಿಷತ್, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರುಗಳಿಗೆ ಪ್ರತ್ಯೇಕ ಲಾಗಿನ್ ಒದಗಿಸಲಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರು ನೇರವಾಗಿ ಶಾಸಕರ ಕಚೇರಿಗೆ ಅಥವಾ ಸಂಸದರ ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾ ಸಿಂಧು ಕೇಂದ್ರಗಳಲ್ಲಿ ಹಾಗೂ ಯಾವುದಾದರೂ ಅಂತರ್ಜಾಲ ಕೇಂದ್ರಗಳಲ್ಲಿ ಸಾರ್ವಜನಿಕರು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.ಅರ್ಜಿಯ ಸ್ಥಿತಿಗತಿಯನ್ನು ಆನ್‍ಲೈನ್ ಮೂಲಕವೇ ಪರಿಶೀಲಿಸಿಕೊಳ್ಳಬಹುದಾಗಿದ್ದು, ಪರಿಹಾರ ಧನ ಬಿಡುಗಡೆ ವಿವರ ಇತ್ಯಾದಿಗಳನ್ನು ಮೊಬೈಲ್ ಸಂದೇಶದ ಮೂಲಕ ಮಾಹಿತಿ ಒದಗಿಸಲಾಗುತ್ತದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಕಚೇರಿಗೆ ವಿದ್ಯುನ್ಮಾನ ಅರ್ಜಿ ಸಲ್ಲಿಸಲು cmrf.karnataka.gov.in ಹಾಗೂ https://sevasindhu.karnataka.gov.in ಸಂಪರ್ಕಿಸಬೇಕು. ಈ ತಂತ್ರಾಂಶದ ಲಾಭವನ್ನು ಅರ್ಹ ಸಾರ್ವಜನಿಕರು ಪಡೆಯಲಿ ಎಂದು ಆಶಿಸಿದರು.ಸಿಎಂ ಪರಿಹಾರ ನಿಧಿಯಿಂದ 71 ಕೋಟಿ ಬಿಡುಗಡೆ:ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಒಟ್ಟು 14,275 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 11,530 ಪ್ರಕರಣಗಳಿಗೆ 61.88 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. 587 ಪ್ರಕರಣಗಳಿಗೆ 9.16 ಕೋಟಿ ರೂ.ಗಳ ಭರವಸೆ ಪತ್ರಗಳನ್ನು ಸಂಬಂಧಿಸಿದ ಆಸ್ಪತ್ರೆಗಳ ಹೆಸರಿಗೆ ವಿತರಿಸಲಾಗಿದ್ದು, ಒಟ್ಟು 12,117 ಪ್ರಕರಣಗಳಿಗೆ 71.04 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.