ದೇವನಹಳ್ಳಿ: ಆಮ್ಲಜನಕ ತಯಾರಿಕೆಗೆ ಬೇಕಾದ ಜಿಯೋಲೈಟ್ ರೋಮ್ನಿಂದ ಆಮದು ಮಾಡಿಕೊಳ್ಳಲಾಗಿದ್ದು, 34,200 ಕಿಲೋ ಗ್ರಾಂ ಜಿಯೋಲೈಟ್ ಹೊತ್ತ ಎರಡು ಏರ್ ಇಂಡಿಯಾ ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ.
ಭಾರತದಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಿಂದ ಕೊರೊನಾ ಸೊಂಕಿತರ ಸಾವು ಹೆಚ್ಚಾಗುತ್ತಿದೆ. ಆಮ್ಲಜನಕ ತಯಾರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಖಾಸಗಿ ಸಂಸ್ಥೆಗಳು ಸಹ ಆಮ್ಲಜನಕ ತಯಾರಿಕೆಗೆ ಮುಂದಾಗಿವೆ. ಈ ಜಿಯೋಲೈಟ್ಗಳು ಗಾಳಿಯಲ್ಲಿರುವ ಆಮ್ಲಜನಕವನ್ನು ಸಂಕುಚಿತಗೊಳಿಸುತ್ತವೆ.
ಸಂಕುಚಿತಗೊಂಡ ಆಮ್ಲಜನಕ ಜಿಯೋಲೈಟ್ ಮೂಲಕ ಹಾದು ಹೋಗುವಂತೆ ಮಾಡಲಾಗುತ್ತೆ. ಜಿಯೋಲೈಟ್ ಗಾಳಿಯಲ್ಲಿನ ಸಾರಜನಕವನ್ನು ಹೀರಿಕೊಳ್ಳುತ್ತದೆ. ಕೊನೆಯಲ್ಲಿ ಆಮ್ಲಜನಕ ಸಂಗ್ರಹವಾಗುತ್ತೆ. ಈ ಆಮ್ಲಜನಕ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಕೊರೊನಾ ಸೋಂಕಿತರ ಆಕ್ಸಿಜನ್ ಕೊಡಲು ಬಳಸಲಾಗುತ್ತದೆ.