ಬೆಂಗಳೂರು: ಇಡೀ ದೇಶದಲ್ಲಿ ಇಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆಯನ್ನ ಆಯೋಜಿಸಲಾಗಿತ್ತು.
ಪಟ್ಟಣದ ಸರ್ಕಾರಿ ಕಾಲೇಜು ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸಂಜೀವಿನಿ ಯೋಗ ಸಂಸ್ಥೆಯ ನೂರಾರು ಯೋಗಪಟುಗಳು ತಮ್ಮ ಯೋಗ ಪ್ರದರ್ಶನವನ್ನ ಅನಾವರಣಗೊಳಿಸಿದ್ರು. ಇನ್ನು ಕಾರ್ಯಕ್ರಮವನ್ನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಮ್ಮ ಹಾಗೂ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಗಣ್ಯರು ಕೂಡ ಯೋಗದಲ್ಲಿ ಭಾಗವಹಿಸಿದ್ರು.
ಪಟ್ಟಣದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಭಾಗವಹಿಸಿ ಯೋಗಾಸನ ಮಾಡಿದರು. ಈ ವೇಳೆ ಪ್ರಮುಖವಾಗಿ ಯೋಗದ ಮಹತ್ವದ ಬಗ್ಗೆ ನೆರೆದಿದ್ದ ಜನರಿಗೆ ಅರಿವು ಮೂಡಿಸಿದ್ದಲ್ಲದೆ, ಸಾಮೂಹಿಕ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಸನಗಳನ್ನ ಮಾಡಿಸಲಾಯಿತು.