ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಹೊಸ 12 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಇಂದು ರಾಜ್ಯದಲ್ಲಿ 12 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ.. ಮೈಸೂರಿನಲ್ಲೇ ಇಂದು ಹೊಸ 7 ಪ್ರಕರಣಗಳು ಪತ್ತೆಯಾಗಿದೆ.
ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ
ರೋಗಿ-152:: 32 ವರ್ಷದ ಬೆಂಗಳೂರು ವ್ಯಕ್ತಿಗೆ ಸೋಂಕು.. P-43&P44ರಿಂದ ಸೊಂಕು ತಗುಲಿದೆ (ಮಗ) .. ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-153: 62 ವರ್ಷದ ಮಹಿಳೆ ಕೇರಳ ಮೂಲದವರಾಗಿದ್ದು, ಜರ್ಮನಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿರುತ್ತಾರೆ.. P-106,&p-133 ಸಂಪರ್ಕ ಹೊಂದಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ..
ರೋಗಿ-154: 20 ವರ್ಷದ ಯುವಕನಿಗೆ ಸೋಂಕು ದೃಢವಾಗಿದ್ದು, ಮೈಸೂರು ಮೂಲದವನಾಗಿದ್ದು, P-104 ರ ಸಹೋದರನಾಗಿದ್ದಾನೆ.. ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ..
ರೋಗಿ-155 : 37 ವರ್ಷದ ವ್ಯಕ್ತಿ ಮೈಸೂರು ಮೂಲದವರಾಗಿದ್ದು, ದೆಹಲಿಗೆ ಪ್ರಯಾಣ ಮಾಡಿದ್ದಾರೆ..ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ..
ರೋಗಿ-156: 57 ವರ್ಷದ ವ್ಯಕ್ತಿಗೆ ಮೈಸೂರು ಮೂಲದವರು, ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.. ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ರೋಗಿ-157: 22 ವರ್ಷದ ವ್ಯಕ್ತಿಗೆ ಮೈಸೂರು ಮೂಲದವರು, ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.. ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ-158: 26 ವರ್ಷದ ಮೈಸೂರು ಮೂಲದವರು..ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ..
ರೋಗಿ-159: 32 ವರ್ಷದ ಮಹಿಳೆ ಮೈಸೂರು ಮೂಲದವರು.. P52 ರಂತೆ ಫಾರ್ಮ್ ಕಂಪನಿಯಲ್ಲಿ ಉದ್ಯೋಗಿ ಆಗಿರುತ್ತಾರೆ.. ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ..
ರೋಗಿ-160: 35 ವರ್ಷದ ವ್ಯಕ್ತಿಗೆ ಮೈಸೂರು ಮೂಲದವ್ರು, ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ..
ರೋಗಿ-161: 54 ವರ್ಷದ ಬಾಗಲಕೋಟೆಯ ನಿವಾಸಿ.. P-125 ಪತ್ನಿಯಾಗಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದಿದೆ..
ರೋಗಿ-162:: 58 ವರ್ಷದ ವ್ಯಕ್ತಿಗೆ ಸೋಂಕು ತಗಲಿದ್ದು, ಬಾಗಲಕೋಟೆಯ ನಿವಾಸಿಯಾಗಿದ್ದು P125 ರ ಸಹೋದರನಾಗಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದೆ..
ರೋಗಿ-163: 43 ವರ್ಷದ ವ್ಯಕ್ತಿಯು ಬೆಂಗಳೂರು ಗ್ರಾಮಾಂತರ ನಿವಾಸಿಯಾಗಿದ್ದಾರೆ.. ಸೋಂಕು ತಗುಲಿದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸಲಾಗುತ್ತಿದೆ.. ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ..