ETV Bharat / state

ಗ್ರಾಮ ದೇವರ ಮೇಲಿನ ಭಕ್ತಿಗೆ ಸ್ವಂತ ಮನೆಗಳನ್ನೇ ಬಿಟ್ಟುಕೊಟ್ಟ ಗ್ರಾಮಸ್ಥರು!

author img

By

Published : Feb 29, 2020, 6:51 PM IST

ಐತಿಹಾಸಿಕ ಮಹಾಲಕ್ಷ್ಮಿ ದೇವಸ್ಥಾನದ ದಾರಿಗೆ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಗ್ರಾಮಸ್ಥರು ತಮ್ಮ ಮನೆಗಳನ್ನೇ ಬಿಟ್ಟು ಕೊಡುವ ಮೂಲಕ ಭಕ್ತಿ ಮರೆದಿದ್ದಾರೆ.

The villagers  gave up their own home For Temple Road
ಗ್ರಾಮ ದೇವರ ಮೇಲಿನ ಭಕ್ತಿಗೆ ಸ್ವಂತ ಮನೆಯನ್ನೇ ಬಿಟ್ಟುಕೊಟ್ಟ ಗ್ರಾಮಸ್ಥರು

ಬಾಗಲಕೋಟೆ: ಐತಿಹಾಸಿಕ ಮಹಾಲಕ್ಷ್ಮಿ ದೇವಸ್ಥಾನದ ದಾರಿ ಮಾಡುವ ಸಲುವಾಗಿ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮಸ್ಥರು ತಮ್ಮ ಮನೆಗಳನ್ನೇ ಬಿಟ್ಟು ಕೊಡುವ ಮೂಲಕ ಭಕ್ತಿ ಮೆರೆದಿದ್ದಾರೆ.

ದೇವಸ್ಥಾನಕ್ಕೆ ಇಕ್ಕಟ್ಟಾದ ರಸ್ತೆ ಮೂಲಕ ತೇರಳುವಂತಹ ಸ್ಥಿತಿ ಇದ್ದಿದ್ದರಿಂದ ಪ್ರತಿ ವರ್ಷ ಹುಣ್ಣಿಮೆ ನಂತರ ನಡೆಯುವ ಪಲ್ಲಕ್ಕಿ ಉತ್ಸವಕ್ಕೆ 10 ಸಾವಿರಕ್ಕೂ ಅಧಿಕ ಜನರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ನೇರವಾಗಿ ದಾರಿ ನಿರ್ಮಿಸುವ ಸಲುವಾಗಿ ಗ್ರಾಮದ 19 ಕುಟುಂಬಗಳು ತಮ್ಮ ಮನೆಗಳನ್ನೇ ದೇವಸ್ಥಾನದ ದಾರಿಗೆ ಬಿಟ್ಟುಕೊಟ್ಟಿವೆ.

ಈ ಹಿನ್ನೆಲೆ ಗ್ರಾಮದ ಪ್ರಮುಖರು ಸೇರಿ ದೇವಸ್ಥಾನಕ್ಕೆ ಹೊಸದಾಗಿ ದಾರಿ ಮಾಡುವ ಸಂಕಲ್ಪ ತೊಟ್ಟು ಯೋಜನೆ ರೂಪಿಸಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮನೆಗಳನ್ನು ಬಿಟ್ಟುಕೊಟ್ಟಿದ್ದು, ಸದ್ಯ ಕೆಲವರು ಆಶ್ರಯ ಮನೆಗಳಿಗೆ ಶಿಪ್ಟ್ ಆಗಿದ್ದಾರೆ.

ಗ್ರಾಮ ದೇವರ ಮೇಲಿನ ಭಕ್ತಿಗೆ ಸ್ವಂತ ಮನೆಗಳನ್ನೇ ಬಿಟ್ಟುಕೊಟ್ಟ ಗ್ರಾಮಸ್ಥರು!

ಗ್ರಾಮಸ್ಥರು ದೇವಸ್ಥಾನದ ದಾರಿಗೆ ಮನೆಗಳನ್ನೇ ಬಿಟ್ಟುಕೊಟ್ಟರೆ, ಮನೆ ಬಿಟ್ಟುಕೊಟ್ಟ ಗ್ರಾಮಸ್ಥರಿಗೆ ಗ್ರಾಮದ ಕೆಲವರು ಸೇರಿ ತಮ್ಮ ಜಾಗಗಳನ್ನೇ ಉಚಿತವಾಗಿ ನೀಡಿ ಮಾದರಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.