ETV Bharat / state

ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೇಕಾರ ಮುಖಂಡರನ್ನು ನೇಮಿಸಬೇಕಿತ್ತು; ಸಿದ್ದು ಸವದಿ - Sidhu Savadi

ನನಗೆ ನಿಗಮ ಇಲ್ಲದಿದ್ದರೂ ಸರಿ, ಸಚಿವ ಸ್ಥಾನ ಇಲ್ಲದಿದ್ದರೂ ಯಾವುದೇ ಅಸಮಾಧಾನ ಇಲ್ಲ. ಆದರೆ ನೇಕಾರ ಮುಖಂಡರಿಗೆ ಕೈಮಗ್ಗ ಅಭಿವೃದ್ಧಿ ನಿಗಮ ದೊರಕಿದರೆ ಸೂಕ್ತವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದು ಸವದಿ
ಸಿದ್ದು ಸವದಿ
author img

By

Published : Jul 27, 2020, 11:31 PM IST

ಬಾಗಲಕೋಟೆ : ನೇಕಾರರ ಮುಖಂಡರಿಗೆ ಕೈಮಗ್ಗ ಅಭಿವೃದ್ಧಿ ನಿಗಮ ನೀಡುವ ಮೂಲಕ ಕಾರ್ಯಕರ್ತರನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗಿತ್ತು ಎಂದು ತೇರದಾಳ ಶಾಸಕ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕರಾದ ಸಿದ್ದು ಸವದಿ ತಿಳಿಸಿದರು.

ನಾನು ಯಾವುದೇ ನಿಗಮ ಮಂಡಳಿ ಅಧ್ಯಕ್ಷನನ್ನಾಗಿ ನೇಮಕ ಮಾಡಿ ಎಂದು ಮುಖ್ಯಮಂತ್ರಿಯವರೆಗೆ ಕೇಳಿದ್ದಿಲ್ಲ. ಕ್ಷೇತ್ರದಲ್ಲಿ ನೇಕಾರ ಮುಖಂಡರಾದ ಮನೋಹರ ಶಿರೋಳ ಎಂಬುವವರನ್ನು ಆಯ್ಕೆ ಮಾಡುವುದಕ್ಕೆ ಸಾಕಷ್ಟು ಸಲ ಹೇಳಿದ್ದೆ. ಅವರನ್ನು ಕರೆದುಕೊಂಡು ಮುಖ್ಯಮಂತ್ರಿಗಳಿಗೆ ಭೇಟಿ ಆಗಿದ್ದೇನೆ. ಆದರೆ ನನಗೆ ನೀಡಿರುವುದು ಒಂದೆಡೆ ಖುಷಿ, ಇನ್ನೊಂದೆಡೆ ಇರುಸು ಮುರುಸಾಗುತ್ತಿದೆ ಎಂದರು.

ನನಗೆ ನಿಗಮ ಇಲ್ಲದಿದ್ದರೂ ಸರಿ. ಸಚಿವ ಸ್ಥಾನ ಇಲ್ಲದಿದ್ದರೂ ಯಾವುದೇ ಅಸಮಾಧಾನ ಇಲ್ಲ. ಆದರೆ ನೇಕಾರರ ಮುಖಂಡರಿಗೆ ಕೈಮಗ್ಗ ಅಭಿವೃದ್ಧಿ ನಿಗಮ ದೊರಕಿದರೆ ಸೂಕ್ತವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಸಿಎಂ ಭೇಟಿಯಾಗಿ ನನ್ನ ವಿಚಾರ ತಿಳಿಸುತ್ತೇನೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.