ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಈಗ ಕೊರೊನಾ ಸೋಂಕಿತ ಪ್ರದೇಶವಾಗಿರುವುದರಿಂದ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆ ದೂರವಾಣಿ ಮೂಲಕ ಸಿದ್ದರಾಮಯ್ಯ ತಮ್ಮ ಬೆಂಬಲಿಗರು, ಆಪ್ತರಿಗೆ ಸೂಚನೆ ನೀಡಿ, ಸೀಲ್ ಡೌನ್ ಆಗಿರುವ ಪ್ರದೇಶದಲ್ಲಿ ಆಹಾರ ಧಾನ್ಯ ವಿತರಣೆ ಮಾಡುವಂತೆ ತಿಳಿಸಿದ್ದಾರೆ.
ಕೊರೊನಾದಿಂದಾಗಿ ಸೀಲ್ ಡೌನ್ ಆಗಿರುವ ಚಾಲುಕ್ಯ ನಗರ, ಬಾದಾಮಿ ಹಾಗೂ ಡಾಣಕಶಿರೂರ ಗ್ರಾಮದ ಪರಿಸ್ಥಿತಿ ಬಗ್ಗೆ ಬಾದಾಮಿ ತಹಶೀಲ್ದಾರ್ ಸುಹಾಸ ಇಂಗಳೆ, ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಹಾನಾಪುರ, ಬಾದಾಮಿ ಮುಖ್ಯಾಧಿಕಾರಿ ಜ್ಯೋತಿ ಗಿರೀಶ್ ಜೊತೆ ಪರಿಸ್ಥಿತಿ ಕುರಿತು ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ.
ಡಾಣಕಶಿರೂರಿನ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗಿರುವುದರಿಂದ ಗ್ರಾಮದ 300 ಕುಟುಂಬಗಳಿಗೆ 2 ಕೆಜಿ ಗೋಧಿ ಹಿಟ್ಟು, 1 ಕೆಜಿ ರವೆ, 1 ಕೆಜಿ ಸಕ್ಕರೆ, ಅರ್ಧ ಕೆಜಿ ಬೇಳೆ, ಅರ್ಧ ಕೆಜಿ ಅಡುಗೆ ಎಣ್ಣೆ, 100 ಗ್ರಾಮ ಚಹಾಪುಡಿ, 4 ಕೆಜಿ ಈರುಳ್ಳಿಯನ್ನು ಬಾದಾಮಿ ತಹಶೀಲ್ದಾರ್ ಇಂಗಳೆ ಅವರಿಗೆ ಹಸ್ತಾಂತರಿಸಲಾಯಿತು.