ETV Bharat / state

ರಾಜ್ಯದ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ : ಸಚಿವ ಆರ್​ ಬಿ ತಿಮ್ಮಾಪೂರ

ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರು ಸಾಕಷ್ಟು ಜನ ಇದ್ದಾರೆ ಎಂದು ಸಚಿವ ಆರ್​ ಬಿ ತಿಮ್ಮಾಪೂರ ಹೇಳಿದ್ದಾರೆ.

ಸಚಿವ ಆರ್​ ಬಿ ತಿಮ್ಮಾಪೂರ
ಸಚಿವ ಆರ್​ ಬಿ ತಿಮ್ಮಾಪೂರ
author img

By ETV Bharat Karnataka Team

Published : Sep 5, 2023, 8:41 PM IST

ಬಾಗಲಕೋಟೆ: ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಕ್ಕೆ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿದೆ. ಬಿ ಎಲ್​ ಸಂತೋಷ್​ ಅವರು ಮೊದಲು ತಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಎಂದು ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪೂರ​ ಟಾಂಗ್ ನೀಡಿದ್ದಾರೆ. ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಅವರು ಮಾತನಾಡಿದರು.

ಬಿ ಎಲ್ ಸಂತೋಷ್​ ಅವರ ವರ್ತನೆಗೆ ಕರ್ನಾಟಕದಲ್ಲಿರುವ ಲಿಂಗಾಯತ ನಾಯಕರು ಸಿಡಿದ್ದೇದಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ನೋಡುತ್ತಿರುವ ಸಂತೋಷ್​ ತಮ್ಮ ಪಕ್ಷ ಸರಿ ಮಾಡಿಕೊಳ್ಳಲಿ. ಲಿಂಗಾಯತ ನಾಯಕರು ಪಕ್ಷ ಬಿಟ್ಟು ಹೊರಟಿದ್ದಾರೆ ಮೊದಲು ಅದು ಸರಿ ಮಾಡಿಕೋಳ್ಳಿ. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ, ಎಲ್ಲ ಜಾತಿಯರನ್ನ ಒಗ್ಗೂಡಿಸಿ, ಕೇವಲ ಒಂದೇ ಜಾತಿಯವರನ್ನ ಸಿಮೀತ ಮಾಡಬೇಡಿ, ಎಲ್ಲ ಸಮಾಜದವರೊಟ್ಟಿಗೆ ನಡೆಯಿರಿ. ಕೇಂದ್ರದಲ್ಲಿ‌ ನಿಮ್ಮ ಸರ್ಕಾರ ಇದೆ. ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಿರುವುದಕ್ಕೆ ಬಿಜೆಪಿಯನ್ನು ಜನರು ಮನೆಗೆ ಕಳಿಸಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ‌ಪಕ್ಷದ ನಾಯಕರು ಬಿಜೆಪಿ ಹೋಗುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಪಕ್ಷದ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತಮ್ಮ ಕೆಲಸ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೇ ಬಿಜೆಪಿ ಪಕ್ಷದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಬರುವವರು ಇದ್ದಾರೆ. ಎಷ್ಟು ಜನ ಬರುತ್ತಾರೆ ಎಂದು ಸಂತೋಷ ಅವರಿಗೆ ದೂರವಾಣಿ ಮೂಲಕ ತಿಳಿಸುತ್ತೇನೆ ಎಂದು ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್ ನೀಡಿದರು.

ಇದೇ ಸಮಯದಲ್ಲಿ, ಮಾಲ್​ಗಳಲ್ಲಿ ಮದ್ಯ ಮಾರಾಟಕ್ಕೆ ಚಿಂತನೆ ವಿಚಾರವಾಗಿ ಮಾತನಾಡಿ, ಸದ್ಯ ಅಂತಹ ಪ್ರಶ್ನೆ ನಮ್ಮ ಮುಂದೆ ಇಲ್ಲ. ಚರ್ಚೆಗೆ ಕುಳಿತಾಗ ಅದೊಂದು ವಿಷಯ ಬಂದಿತ್ತು. ಮಾಡಬೇಕೋ, ಬಿಡಬೇಕೋ ಅನ್ನೋದು ಇನ್ನೂ ಚರ್ಚೆಯ ಹಂತಲ್ಲೇ ಇದೆ. ಇದನ್ನು ಜಾರಿಗೊಳಿಸಬೇಕು ಎನ್ನುವ ವಿಚಾರ ಸದ್ಯಕ್ಕೆ ಇಲ್ಲ. ಇದು ಬಹಳ ಪ್ರೀಮ್ಯಾಚ್ಯೂರ್, ಈ ವಿಷಯ ಇನ್ನೂ ಚರ್ಚೆ ಹಂತದಲ್ಲಿಯೇ ಇದೆ ಎಂದರು.

ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ಅದೇನಾಗಿದೆ, ನನಗೆ ಗೊತ್ತಿಲ್ಲ. ತಮಿಳುನಾಡನ್ನು ಗಮನದಲ್ಲಿರಿಸಿಕೊಂಡು ಅವರು ಮಾತನಾಡಿರಬಹುದು, ನನಗೆ ಗೊತ್ತಿಲ್ಲ. ಇದರಲ್ಲಿ ಪಕ್ಷದ ನಿಲುವು ಏನಿರೋದಿಲ್ಲ. ಈ ದೇಶದಲ್ಲಿ ಅವರವರ ಧರ್ಮ ಅವರವರ ಆಚರಣೆಗೆ ಬಿಟ್ಟದ್ದು. ನಾವು ಪಕ್ಷದ ವತಿಯಿಂದ ಆ ಧರ್ಮ, ಈ ಧರ್ಮ ಅಂತ ಹೇಳೋದಿಲ್ಲ. ಅದನ್ನು ಧರ್ಮಾದಿಕಾರಿಗಳು, ಪೀಠಾಧಿಕಾರಿಗಳು ಮಾಡುತ್ತಾರೆ. ಯಾವುದೇ ಧರ್ಮ ಸ್ವೀಕಾರ ಮಾಡಲು ಇಲ್ಲಿ ಸ್ವಾತಂತ್ರ್ಯ ಇದೆ ಎಂದು ಹೇಳಿದರು.

ಇದನ್ನೂ ಓದಿ: ರಿಪಬ್ಲಿಕ್ ಆಫ್ ಭಾರತ್ ಮರು ನಾಮಕರಣಕ್ಕೆ ಸ್ವಾಗತ: ಎನ್ ರವಿಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.