ETV Bharat / state

ನಿರಾಣಿ ಮುಂದಿನ ಮುಖ್ಯಮಂತ್ರಿಯಂತೆ, ಪೋಸ್ಟರ್‌ ವೈರಲ್‌ - ಮುರುಗೇಶ ನಿರಾಣಿ

ಮುಂದಿನ ಮುಖ್ಯಮಂತ್ರಿ ಹಾಗೂ ಜಮಖಂಡಿ ಜಿಲ್ಲೆಯ ಕನಸನ್ನು ನನಸು ಮಾಡುವ ಕೈಗಾರಿಕೆ ಸಚಿವರಾದ ಮುರುಗೇಶ ನಿರಾಣಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ.

ನಿರಾಣಿ ಮುಂದಿನ ಮುಖ್ಯಮಂತ್ರಿಯಂತೆ
ನಿರಾಣಿ ಮುಂದಿನ ಮುಖ್ಯಮಂತ್ರಿಯಂತೆ
author img

By

Published : Aug 17, 2022, 7:45 PM IST

ಬಾಗಲಕೋಟೆ: ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಮುಂದಿನ ಮುಖ್ಯಮಂತ್ರಿ' ಎಂದು ನಮೋದಿಸಿರುವ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದಿನ ಮುಖ್ಯಮಂತ್ರಿ ಹಾಗೂ ಜಮಖಂಡಿ ಜಿಲ್ಲೆಯ ಕನಸನ್ನು ನನಸು ಮಾಡುವ ಕೈಗಾರಿಕೆ ಸಚಿವರಾದ ಮುರುಗೇಶ ನಿರಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅಪ್ತ ಸಹಾಯಕ ಕಿರಣ ಬಡಿಗೇರ ಎಂಬುವರು ಪೋಸ್ಟರ್​ ಮಾಡಿಸಿದ್ದಾರೆ.

ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿಗೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಈಗ ಸ್ವಲ್ಪಮಟ್ಟಿಗೆ ತಣ್ಣಗಾಗಿದೆ ಎನ್ನುವಷ್ಟರಲ್ಲಿಯೇ ನಿರಾಣಿ ಕುರಿತ ಈ ಪೋಸ್ಟ್​ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯ ಫಿಂಗರ್ ಪ್ರಿಂಟ್ ಬ್ಯೂರೊ ಸಾಧನೆ: ಕೇಂದ್ರಕ್ಕೆ 5 ಲಕ್ಷ ಆರೋಪಿಗಳ ದತ್ತಾಂಶ ಕೇಂದ್ರಕ್ಕೆ ರವಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.