ಬಾಗಲಕೋಟೆ: ಬೇಟೆ ನಾಯಿ ಅಂತಲೇ ಕರೆಸಿಕೊಳ್ಳುವ ಮುಧೋಳ ಶ್ವಾನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ತರಬೇತಿ ನೀಡುತ್ತಿದೆ.
ಮುಧೋಳ ತಾಲೂಕಿನ ತಿಮ್ಮಾಪೂರ ಗ್ರಾಮದ ಬಳಿ ಶ್ವಾನ ಸಂಶೋಧನೆ ಕೇಂದ್ರದಿಂದ ಮುಧೋಳ ಶ್ವಾನದ ಮರಿಯನ್ನು ತರಲಾಗಿದ್ದು, ಕ್ರಿಶ್ ಎಂದು ನಾಮಕರಣ ಮಾಡಲಾಗಿದೆ. ಇದೇ ಮೊದಲು ಬಾರಿ ಇಲಾಖೆಯಲ್ಲಿ ಸ್ಥಳೀಯ ಮುಧೋಳ ನಾಯಿಗೆ ತರಬೇತಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈಗಾಗಲೇ ಭೂ ಸೇನೆ, ವಾಯು ಸೇನೆಯಲ್ಲಿ ಈ ತಳಿಯ ನಾಯಿಗಳು ತರಬೇತಿ ಪಡೆಯುತ್ತಿವೆ. ಈ ಕಾರಣಕ್ಕೆ ಈಗ ಪೊಲೀಸ್ ಇಲಾಖೆಯವರೂ ಸಹ ತರಬೇತಿ ನೀಡಿ, ಕಳ್ಳತನ, ದರೋಡೆ, ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ತರಬೇತಿ ನೀಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ತಿಳಿಸಿದ್ದಾರೆ.
ಇದನ್ನೂ ಓದಿ: ವಿಷಯುಕ್ತ ದನದ ಶವಗಳ ಸೇವನೆ: ಅಳಿವಿನಂಚಿನ 11 ರಣಹದ್ದುಗಳು ಸಾವು