ETV Bharat / state

ನಾನು ಸಿಎಂ ಆಗಬೇಕಾದ್ರೆ ಕಾಂಗ್ರೆಸ್​ಗೆ ಮತ ಹಾಕಿ: ಸಿದ್ದರಾಮಯ್ಯ

ಬಾದಾಮಿ ಕ್ಷೇತ್ರದ ಜನತೆಯ ಋಣವನ್ನು ನನ್ನಿಂದ ತೀರಿಸಲು ಆಗುವುದಿಲ್ಲ. ನಾನು ಸದಾ ಚಿರಋಣಿ ಆಗಿರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Former CM Siddaramaiah spoke.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
author img

By

Published : May 3, 2023, 10:57 AM IST

Updated : May 3, 2023, 2:31 PM IST

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಬಾಗಲಕೋಟೆ: ನಾನು ಮುಖ್ಯಮಂತ್ರಿ ಆಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಬಾದಾಮಿ ಪಟ್ಟಣದ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಮುಖ್ಯಮಂತ್ರಿ ಆಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಭೀಮಸೇನ ಚಿಮ್ಮನಕಟ್ಟಿ ಅವರನ್ನು ಗೆಲ್ಲಿಸಿ. ಬಾದಾಮಿ ಜನತೆಗೆ ನಾನು ಸದಾ ಚಿರಋಣಿ ಆಗಿರುತ್ತೇನೆ. ನಾನು ಇರುವವರೆಗೂ ಬಾದಾಮಿ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಚಾಮುಂಡಿ ಹಾಗೂ ಬಾದಾಮಿ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ, ಹೊರಗಿನವರು ಅಂತ ಭಾವನೆ ಮಾಡದೇ ಗೆಲ್ಲಿಸಿ, ನನಗೆ ರಾಜಕೀಯ ಜೀವನ ಕಲ್ಪಿಸಿಕೊಟ್ಟಿದ್ದೀರಿ. ಅದಕ್ಕೆ ನಿಮಗೆ ಕೋಟಿ ಕೋಟಿ ನಮನಗಳು. ಬಾದಾಮಿಯನ್ನು ದತ್ತು ತೆಗೆದುಕೊಂಡು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಭೀಮಸೇನೆ ಚಿಮ್ಮನಕಟ್ಟಿ ಶಾಸಕರಾದರೂ ನಾನೇ ಶಾಸಕನಾಗಿದ್ದೇನೆ ಅಂತ ತಿಳಿಯಿರಿ. ಈ ಸಲ ನಮ್ಮ ಸರ್ಕಾರ ಬರುತ್ತೆ. ಉಳಿದ ಮೂಲ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ನಮ್ಮದು ಎಂದರು.

ಇಲ್ಲಿ ಸಿದ್ದರಾಮಯ್ಯನವರ ಬಣ, ಚಿಮ್ಮನಕಟ್ಟಿ ಬಣ ಅಂತ ಗುಂಪು ಮಾಡದೇ ಎಲ್ಲರೂ ಒಂದೇ. ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದು ಕಾಂಗ್ರೆಸ್ ಪಕ್ಷದ ಮನೆ. ಭೀಮಸೇನ ಚಿಮ್ಮನಕಟ್ಟಿ ಪರ ಕೆಲಸ ಮಾಡಿ ಗೆಲ್ಲಿಸಲು ಪ್ರಯತ್ನಿಸಬೇಕು ಎಂಬ ಒಗ್ಗಟ್ಟಿನ ಮಂತ್ರ ಜಪಿಸಲು ಮುಖಂಡರು, ಕಾರ್ಯಕರ್ತರಿಗೆ ಮನವಿ ಮಾಡಿದರು.

ಇದೇ ಸಮಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಸಿದ್ದರಾಮಯ್ಯ, ಕೆಲವರು ಸೋಲಿನ ಭೀತಿಯಿಂದ ನಾನು ಬಾದಾಮಿ ಬಿಟ್ಟು ಹೋದೆ ಎಂದು ಹೇಳುತ್ತಾರೆ. ಬಾದಾಮಿ ನನಗೆ ದೂರ ಆಗುತ್ತದೆ, ಬರಲು ಆಗುವುದಿಲ್ಲ. ಕ್ಷೇತ್ರದ ಜನತೆಯನ್ನು ಭೇಟಿ ಮಾಡಲು ಆಗಲ್ಲ ಅಂತ ಬಾದಾಮಿ ಕ್ಷೇತ್ರ ಬಿಟ್ಟಿದ್ದೇನೆ. ಆದರೆ ಇಲ್ಲಿನ ಜನತೆಯ ಋಣವನ್ನು ನನ್ನಿಂದ ತೀರಿಸಲಾಗದು ಎಂದು ಹೇಳಿದರು.

'ಸಿದ್ದರಾಮಯ್ಯ ಸಿಎಂ ಆಗಿದ್ರೆ ಕೊಲ್ಲಾಪುರದ ಪೈಲ್ವಾನ್ ತರ ಆಡ್ತಿದ್ರು': ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಕೊಲ್ಲಾಪುರದ ಪೈಲ್ವಾನ್ ತರ ಆಡುತ್ತಿದ್ದರು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ. ಬಸವರಾಜ ಬೊಮ್ಮಾಯಿಯಂತಹ ಒಬ್ಬ ಸಜ್ಜನ ರಾಜಕಾರಣಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ವಿಧಾನಸೌಧದ ಒಳಗೆ ಅಥವಾ ಹೊರಗೆ ಎರಡೂ ಕಡೆಯಲ್ಲಿ ಉತ್ತಮವಾದ ನಡವಳಿಕೆ ಹೊಂದಿದ್ದಾರೆ. ಮೀಸಲಾತಿಗೆ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಶಾಂತ ಸ್ವಭಾವ ಹೊಂದಿದ್ದಾರೆ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಕೊಲ್ಲಾಪುರ ಪೈಲ್ವಾನ್​ ತರ ಆಗ್ತಿತ್ತು. ಸೌಜನ್ಯಕ್ಕಾದರೂ ಬೇರೆಯವರಿಗೆ ಗೌರವ ಕೊಡುವುದನ್ನು ಕಲಿಯುತಿದ್ದೀರಾ ಸಿದ್ದರಾಮಯ್ಯ‌ನವರೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂಓದಿ: ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ

Last Updated : May 3, 2023, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.