ETV Bharat / state

ಮಾದರಿ ಗ್ರಾಮ ಪಂಚಾಯತಿಗಳಾಗಿ ಪರಿವರ್ತಿಸಲು ಶಾಸಕ ಚರಂತಿಮಠ ಕರೆ - model village panchayats

ಬಾಗಲಕೋಟೆ ಮತಕ್ಷೇತ್ರದ 24 ಗ್ರಾಮ ಪಂಚಾಯತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಪರಿವರ್ತಿಸಲು ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಕರೆ ನೀಡಿದರು.

ಚರಂತಿಮಠ
ಚರಂತಿಮಠ
author img

By

Published : Jul 24, 2020, 11:59 PM IST

ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದ 24 ಗ್ರಾಮ ಪಂಚಾಯತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಪರಿವರ್ತಿಸಲು ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಕರೆ ನೀಡಿದರು.

ತಾಲೂಕು ಪಂಚಾಯತ್ ಸಭಾಭವನದಲ್ಲಿಂದು ಜರುಗಿದ ಸರ್ಕಾರದಿಂದ ನೇಮಕವಾದ 24 ಗ್ರಾಮ ಪಂಚಾಯತಿಗಳ ಆಡಳಿತಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡದೇ ಯಾವುದೇ ಬಿಲ್ ಪಾಸ್ ಮಾಡುವಂತಿಲ್ಲ. ವಾರದಲ್ಲಿ ಕನಿಷ್ಠ ಎರಡು ದಿನಗಳಾದರೂ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೇಟಿ ನೀಡಿ, ಕೊವಿಡ್-19, ಕೊರೊನಾ ವೈರಸ್ ಕುರಿತು ಗ್ರಾಮೀಣ ಜನತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಾಗೃತಿ ಮೂಡಿಸಲು ತಿಳಿಸಿದರು.

ಸರ್ಕಾರಿ ಕಟ್ಟಡಗಳು, ಶಾಲಾ ಕಾಂಪೌಂಡ್, ಶೌಚಾಲಯಗಳನ್ನು ಪರಿಶೀಲಿಸಬೇಕು. ಶುದ್ಧ ವಾತಾವರಣಕ್ಕೆ ಗಿಡಗಳನ್ನು ನೆಟ್ಟು ಎಲ್ಲಾ ರಸ್ತೆಗಳ ಅಕ್ಕಪಕ್ಕದ ತಿಪ್ಪೆಗುಂಡಿಗಳನ್ನು ಹಾಗೂ ಅನಧಿಕೃತ ಕಟ್ಟಡಗಳನ್ನು ಹಾಗೂ ಕಂಟಿಗಳನ್ನು ತೆರವುಗೊಳಿಸುವುದರ ಮುಖಾಂತರ ಮತ ಕ್ಷೇತ್ರದ ಎಲ್ಲ ಗ್ರಾಮಗಳನ್ನು ಡಿಸೆಂಬರ್ ಒಳಗಾಗಿ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಲು ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರ ಚನ್ನನಗೌಡ ಪರನಗೌಡರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾವಿನಮರದ ಹಾಗೂ ಹುನಗುಂದದ ಇ.ಓ ಹಾಗೂ ಎಲ್ಲಾ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.