ಬಾಗಲಕೋಟೆ: ಅಕ್ಕನಿಗೆ ಮತ್ತು ತನಗೆ ಮೋಸ ಮಾಡಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ ತನ್ನ ಆಸ್ತಿಯನ್ನು ಶಾಲೆಗೆ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಅಕ್ಕನಿಗೆ ಮಕ್ಕಳಿಲ್ಲ ಎಂದು ಸಹೋದರನೇ ದತ್ತು ಪುತ್ರನಾಗಿ ಮಡಿಲು ಸೇರಿದ್ದ. ಆದರೆ, ದುರಂತ ಎಂದರೆ ಈ ನಡುವೆ ಅಕ್ಕನ ಗಂಡ ಸಾವನ್ನಪ್ಪಿದ್ದಾರೆ.
ಅಕ್ಕನ ಗಂಡ ಸಾವನ್ನಪ್ಪಿದ ನಂತರ ಭಾವನಿಗೆ ಸೇರ ಬೇಕಾದ ಆಸ್ತಿ ನೀಡದೇ ಅವರ ತಮ್ಮಂದರಿರು ವಂಚಿಸಿದ್ದರು. ಅಲ್ಲದೇ ಭಾವನ ಮನೆ ಕಡೆಯವರು ಹುಡುಗಿ ಕೊಟ್ಟು ಮದುವೆ ಮಾಡುತ್ತೇವೆ ಎಂದು ಆಶ್ವಾನ ನೀಡಿದ್ದರು ಅದನ್ನೂ ಮಾಡದೇ ವಂಚಿಸಿದ್ದಾರೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಹುನಗುಂದ ಹೂವನೂರ ಗ್ರಾಮದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಕ್ಕನ ಗಂಡನ ಲೆಕ್ಕದಲ್ಲಿ ಬರಬೇಕಿದ್ದ ನಾಲ್ಕು ಎಕರೆ ಜಮೀನುನ್ನು ಭಾವನ ಸಹೋದರರು ನೀಡದೇ ಮೋಸ ಮಾಡಿದ್ದರು. ನಾಗರಾಜ ಕಳ್ಳಿಗುಡ್ಡ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಕ್ಕನ ಮೈದುನರಾದ ಅಂದಾನೆಪ್ಪ, ರಾಮು, ಶಿವು ಹೆಸರಲ್ಲಿ ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದಾನೆ.
ನನ್ನ ಸಾವಿಗೆ ಇವರೇ ಕಾರಣ, ನನಗೆ ಬರಬೇಕಿದ್ದ ನಾಲ್ಕು ಎಕರೆ ಆಸ್ತಿ ಕೊಡದೆ ಮೋಸ ಮಾಡಿದರು. ರಾಮಣ್ಣ ನಂಬಿಸಿ ಕುತ್ತಿಗೆ ಕೊಯ್ದಿದ್ದಾರೆ. ಊರಿನ ಜನ ಈ ಐದು ಅಣ್ತಮ್ಮಂದಿರನ್ನು ನಂಬಬೇಡಿ. ನನ್ನ ಅಂತ್ಯಸಂಸ್ಕಾರ ಇದೇ ಊರಲ್ಲೇ ಮಾಡಿ. ಅಕ್ಕ ಅವ್ವ, ಸ್ನೇಹಿತರೆ ನನ್ನ ಕ್ಷಮಿಸಿ ಎಂದು ಡೆತ್ ನೋಟಲ್ಲಿ ಉಲ್ಲೇಖಿಸಿದ್ದಾನೆ.
ಇದರ ಜೊತೆಗೆ ಸಾವಿನಲ್ಲಿ ಶಾಲೆಯ ಬಗ್ಗೆ ಪ್ರೇಮವನ್ನು ಯುವಕ ಮೆರದಿದ್ದಾನೆ. ನನ್ನ ಹೆಸರಲ್ಲಿ ಈಗಾಗಲೇ ಇರುವ ನಾಲ್ಕು ಎಕರೆ ಜಾಗದಲ್ಲಿ 2 ಎಕರೆಯಲ್ಲಿ ಶಾಲೆಗೆ ದಾನ ಪಡೆದು ಅಲ್ಲಿ ಸರಕಾರಿ ಶಾಲೆ ಕಟ್ಟಿಸಿ. ನಮ್ಮೂರಿನ ಎಲ್ಲ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ. ಸರ್ವೆ ನಂ 19/1 /2a ಜಾಗ ಪಡದು ನಮ್ಮೂರ ಎಲ್ಲ ಮಕ್ಕಳಿಗೂ ಅನುಕೂಲ ಮಾಡಿಕೊಡಬೇಕು ಎಂದು ಯುವಕ ಮನವಿ ಮಾಡಿಕೊಂಡಿದ್ದಾನೆ.
ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ನಿನ್ನೆ ರಾತ್ರಿ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಎಫ್‌ಡಿಎ ಅನುಮಾನಾಸ್ಪದ ಸಾವು.. ಆತ್ಮಹತ್ಯೆ ಶಂಕೆ
ಕುಡಿದ ಮತ್ತಿನಲ್ಲಿ ಯುವಕ ಸಾವು: ಇದು ಶಾಲೆಗೆ ಜಾಗ ಕೊಟ್ಟು ಆತ್ಮಹತ್ಯೆಯಲ್ಲೂ ಸಾರ್ಥಕತೆ ಒಬ್ಬ ಯುವಕ ಮೆರೆದರೆ, ಮತ್ತೊಂದು ಕಡೆ ಕುಡಿದ ಮತ್ತಿನಲ್ಲಿ ಕಟ್ಟಡದ 3ನೇ ಮಹಡಿಯ ಕಿಟಕಿಯಿಂದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿಯ ರೀತಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಬೆಳಗಾವಿಯ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ತಮ್ಮಣ್ಣ ಆರ್ಕೇಡ್‌ನ 3ನೇ ಮಹಡಿಯಲ್ಲಿ ಇರುವ ಬ್ರೂ 59 ಪಬ್‌ನಿಂದ ಯುವಕ ಜಿಗಿದಿದ್ದಾನೆ. ಮೃತನನ್ನು ಯೋಗೇಶ್ ಶಾನಬಾಗ್ ಎಂದು ಗುರುತಿಸಲಾಗಿದೆ. ಮೃತ ಯುವಕ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮೂಲದವನಾಗಿದ್ದಾನೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಬೆಕ್ಕುಗಳ ಸಾವು: ಮೂಢನಂಬಿಕೆಗೆ ಬಲಿಯಾದವೇ ಮಾರ್ಜಾಲಗಳು?