ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ 6 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 161ಕ್ಕೆ ಏರಿಕೆ ಆಗಿದೆ. ಕೆಮ್ಮು, ಜ್ವರ, ನೆಗಡಿ ಲಕ್ಷಣ ಹೊಂದಿದ್ದ ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ 30 ವರ್ಷದ ಪುರುಷ ಪಿ-10638 (ಬಿಜಿಕೆ-156), ಕಲಾದಗಿ ಗ್ರಾಮದ ಸೋಂಕಿತ ವ್ಯಕ್ತಿ ಪಿ-8300 ಸಂಪರ್ಕ ಹೊಂದಿದ್ದ 45 ವರ್ಷದ ಪುರುಷ ಪಿ-10639 (ಬಿಜಿಕೆ-157).
28 ವರ್ಷದ ಯುವತಿ ಪಿ-10640 (ಬಿಜಿಕೆ-158), 40 ವರ್ಷದ ಮಹಿಳೆ ಪಿ-10641 (ಬಿಜಿಕೆ-159), ಬಾಗಲಕೋಟೆ ತಾಲೂಕಿನ ಉಸಿರಾಟದ ತೊಂದರೆಗೊಳಗಾದ 55 ವರ್ಷದ ಪುರುಷ ಪಿ-10642 (ಬಿಜಿಕೆ-160), ಕೆಮ್ಮು, ನೆಗಡಿ, ಜ್ವರದ ಲಕ್ಷಣ ಹೊಂದಿದ್ದ ಜಮಖಂಡಿ ನಗರದ ಅಂಬೇಡ್ಕರ ಸರ್ಕಲ್ನ 42 ವರ್ಷದ ಪುರುಷನಿಗೆ ಪಿ-10643 (ಬಿಜಿಕೆ-161) ಕೋವಿಡ್ ದೃಢಪಟ್ಟಿದೆ.
ಕೋವಿಡ್ ದೃಢಪಟ್ಟವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಿಂದ ಬೆಂಗಳೂರಿಗೆ ಕಳುಹಿಸಲಾಗಿದ್ದ 716 ಸ್ಯಾಂಪಲ್ಗಳ ಪೈಕಿ 128 ಸ್ಯಾಂಪಲ್ಗಳ ವರದಿ ನೆಗಟಿವ್ ಬಂದಿದೆ. ಜಿಲ್ಲಾ ಕೋವಿಡ್ ಲ್ಯಾಬ್ನ ಟ್ರೂನೆಟ್ನಲ್ಲಿ ಪರೀಕ್ಷಿಸಲಾದ 26 ಸ್ಯಾಂಪಲ್ ಹಾಗೂ ಸಿಬಿನೆಟ್ನಲ್ಲಿ ಪರೀಕ್ಷಿಸಲಾದ 5 ಸ್ಯಾಂಪಲ್ಗಳು ಸಹ ನೆಗಟಿವ್ ಬಂದಿದೆ.
ಇದರಿಂದ ಜಿಲ್ಲೆಯಿಂದ ಹೊಸದಾಗಿ 157 ಸ್ಯಾಂಪಲ್ಗಳನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 753 ಸ್ಯಾಂಪಲ್ಗಳ ವರದಿ ಬಾಕಿ ಇದೆ. ಪ್ರತ್ಯೇಕ ನಿಗಾದಲ್ಲಿ 688 ಜನರಿದ್ದರೆ, ಇಲ್ಲಿಯವರೆಗೆ ಒಟ್ಟು 11868 ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಈ ಮಧ್ಯೆ ಕಲಾದಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯು ಕಳೆದ ಒಂದು ತಿಂಗಳನಿಂದ ಅನಾರೋಗ್ಯದಿಂದಾಗಿ ಬಳಲುತ್ತಿದ್ದನು, ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಹೋದ ಸಮಯದಲ್ಲಿ 29 ವರ್ಷದ ಯುವಕ ಮೃತ ಪಟ್ಟಿರುವುದು ವರದಿಯಾಗಿದೆ.
ಅಲ್ಲದೆ ಯುವಕನ ಗಂಟಲು ದ್ರವದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.