ಬಾಗಲಕೋಟೆ: ನಗರದಲ್ಲಿ ಕೋವಿಡ್ 2ನೇ ಅಲೆ ಸ್ಫೋಟಗೊಂಡಿದ್ದು, ಗಣ್ಯ ವ್ಯಾಪಾರಿಯೊಬ್ಬರ ಕುಟುಂಬದಲ್ಲೇ ಹನ್ನೊಂದು ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಮನೆ ಸುತ್ತಮುತ್ತಲೂ ಮಿನಿ ಕಂಟೈನ್ಮೆಂಟ್ ಝೋನ್ ಹಾಕಲಾಗಿದೆ.
ಬ್ಯಾರಿಕೇಡ್ ಹಾಕಿ ಜನ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕ ಮತ್ತೊಮ್ಮೆಮನೆ ಮಾಡಿದೆ. ನಗರದ ಮಾರವಾಡಿ ಗಲ್ಲಿಯಲ್ಲಿರುವ ಒಂದೇ ಕುಟುಂಬದ 11ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ದೇವರನಾಡಿನ ಚುನಾವಣಾ ಪ್ರಚಾರದಲ್ಲಿ ಮಿಂಚಿದ ಕರ್ನಾಟಕದ ಕೇಸರಿ ನಾಯಕರು
ಸೋಂಕಿತ ಪ್ರಕರಣ ದಾಖಲಾಗುತ್ತಿದ್ದಂತೆ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು,ಸೊಂಕು ಪತ್ತೆಯಾಗಿರುವ ಕುಟುಂಬದ ಜನರು ಹಾಗೂ ಅವರ ಅಂಗಡಿಗೆ ಬಂದು ಹೋಗಿರುವವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ. ಇದರ ಬೆನ್ನಲ್ಲೇ ಕಳೆದ ವರ್ಷದ ಕಹಿ ಮರುಕಳಿಸುತ್ತಾ ಎನ್ನುವ ತೀವ್ರ ಆತಂಕ ಸ್ಥಳೀಯರಲ್ಲಿ ಮೂಡಿದೆ.
ಮಹಾರಾಷ್ಟ್ರ ರಾಜ್ಯದ ನಂಟು ಹೊಂದಿರುವ ಗಣ್ಯ ವ್ಯಾಪಾರಸ್ಥರು,ಮಹಾರಾಷ್ಟ್ರದಿಂದ ಕೊರೊನಾ ಸೋಂಕು ಹೊತ್ತು ತಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.