ETV Bharat / state

ಬಾಗಲಕೋಟೆಗೆ 10 ಕೋಟಿ ರೂ. ಅನುದಾನ ಬಿಡುಗಡೆ.. ಸಿಎಂ ಯಡಿಯೂರಪ್ಪ - ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿರಾಣಿ ಅವರ ಮನೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ರಾಜ್ಯದ ಪ್ರವಾಹ ಸ್ಥಿತಿ ಎದುರಿಸಲು ಸರ್ಕಾರ ನೂರು ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ಹತ್ತು ಕೋಟಿ ಹಣವನ್ನು ಬಾಗಲಕೋಟೆ ಜಿಲ್ಲೆಗೆ ನೀಡಲಾಗಿದೆ ಎಂದು ತಿಳಿಸಿದ್ರು.

ಸಿಎಂ ಬಿ.ಎಸ್​. ಯಡಿಯೂರಪ್ಪ
author img

By

Published : Aug 9, 2019, 1:22 PM IST

ಬಾಗಲಕೋಟೆ: ರಾಜ್ಯದ ಪ್ರವಾಹ ಸ್ಥಿತಿ ಎದುರಿಸಲು ಸರ್ಕಾರ ನೂರು ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ಹತ್ತು ಕೋಟಿ ಹಣವನ್ನು ಬಾಗಲಕೋಟೆ ಜಿಲ್ಲೆಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್‌ ಡಿಯೂರಪ್ಪ ಹೇಳಿದ್ದಾರೆ.

ಮುಧೋಳ ಪಟ್ಟಣದಲ್ಲಿರುವ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಜಲಾವೃತ್ತವಾಗಿವೆ. 6,381 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ. 28,126 ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್‌ ಮಾಡಲಾಗಿದೆ. 42 ಪರಿಹಾರ ಕೇಂದ್ರ ತೆರೆಯಲಾಗಿದ್ದು, 92 ತಾತ್ಕಾಲಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಇನ್ಫೋಸಿಸ್ ಪ್ರತಿಷ್ಠಾನದ ಡಾ. ಸುಧಾಮೂರ್ತಿ ಅವರು 10 ಕೋಟಿ, ನಿರಾಣಿ ಅವರು ನೀಡಿದ ಒಂದು ಕೋಟಿ ಹಾಗೂ ಕೆಎಂಎಫ್​ನವರು ಕೂಡ ಒಂದು ಕೋಟಿ ರೂ. ಪರಿಹಾರ ಧನ ನೀಡಲು ಮುಂದಾಗಿದ್ದಾರೆ ಎಂದು ಇದೇ ವೇಳೆ ಸಿಎಂ ತಿಳಿಸಿದ್ರು.

ಸಿಎಂ ಬಿ ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ..

ರಾಜ್ಯದಲ್ಲಿ ಶ್ರೀಮಂತರು ಹಾಗೂ ಕೈಗಾರಿಕಾ ಉದ್ಯಮಿಗಳು ಸಿಎಂ ಪರಿಹಾರ ಧನಕ್ಕೆ ಪರಿಹಾರ ಧನ ನೀಡಬೇಕು ಎಂದು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮಂತ್ರಿ ಹಾಗೂ ಗೃಹ ಮಂತ್ರಿ ಅವರೊಂದಿಗೆ ಪ್ರವಾಹದ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ.

ಅದಕ್ಕೆ ಸಂಭಂದಪಟ್ಟ ಎಲ್ಲಾ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಆಲಮಟ್ಟಿ ಜಲಾಶಯಕ್ಕೆ 524 ಮೀಟರ್ ಎತ್ತರ ಮಾಡುವುದಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

Intro:Anchor

Body:ರಾಜ್ಯದ ಪ್ರವಾಹ ಸ್ಥಿತಿ ಎದುರಿಸಲು ಸರ್ಕಾರ ನೂರು ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.ಅದರಲ್ಲಿ ಹತ್ತು ಕೋಟಿ ಹಣವನ್ನು ಬಾಗಲಕೋಟೆ ಜಿಲ್ಲೆಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಮುಧೋಳ ಪಟ್ಟಣದ ನಿರಾಣಿ ಅವರ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಜಲಾವೃತ್ತವಾಗಿದ್ದು,6381 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ.28,126 ಜನರನ್ನು ಸ್ಥಳಾಂತರ ಮಾಡಲಾಗಿದೆ.42 ಪರಿಹಾರ ಕೇಂದ್ರ ತೆರೆಯಲಾಗಿದ್ದು,92 ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ ಎಂದ ಅವರು,ಸುಧಾ ಮೂರ್ತಿ ಅವರು ಹತ್ತು ಕೋಟಿ, ನಿರಾಣಿ ಅವರು ಒಂದು ಕೋಟಿ ಹಾಗೂ ಕೆ ಎಂ ಎಫ್ ದಿಂದ ಒಂದು ಕೋಟಿ ಪರಿಹಾರ ಧನ ನೀಡಲು ಮುಂದಾಗಿದ್ದಾರೆ.ರಾಜ್ಯದಲ್ಲಿ ಶ್ರೀಮಂತ ರು ಹಾಗೂ ಕೈಗಾರಿಕಾ ಉದ್ಯಮಿಗಳು ಸಿಎಂ ಪರಿಹಾರ ಧನಕ್ಕೆ ಪರಿಹಾರ ಧನ ನೀಡಬೇಕು ಎಂದು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು,ಪ್ರಧಾನಿ ಮಂತ್ರಿ ಹಾಗೂ ಗೃಹ ಮಂತ್ರಿ ಅವರೊಂದಿಗೆ ಚರ್ಚೆ ಮಾಡಿ,ಸಮಗ್ರ ಮಾಹಿತಿ ನೀಡಲಾಗಿದೆ. ಅದಕ್ಕೆ ಸಂಭಂದಪಟ್ಟ ಎಲ್ಲಾ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಆಲಮಟ್ಟಿ ಜಲಾಶಯ ಕ್ಕೆ 524 ಮೀಟರ್ ಎತ್ತರ ಮಾಡುವುದಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.