ಟೋಕಿಯೋ(ಜಪಾನ್): ಭಾರತದ ಪ್ಯಾರಾ ವೇಟ್‌ಲಿಫ್ಟರ್ ಸಕಿನಾ ಖತುನ್ ಶುಕ್ರವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ ಪವರ್‌ಲಿಫ್ಟಿಂಗ್ ವಿಭಾಗದ ಫೈನಲ್‌ನಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಸಕೀನಾ ತಮ್ಮ ಮೊದಲ ಪ್ರಯತ್ನದಲ್ಲಿ 93 ಕೆಜಿ ಎತ್ತುವಲ್ಲಿ ಯಶಸ್ವಿಯಾದರು. ಆದರೆ 90 ಕೆ.ಜಿ ಭಾರ ಎತ್ತುವಿಕೆಯಲ್ಲಿ ವಿಫಲರಾದ ಅವರು ಪದಕ ಕಳೆದುಕೊಂಡರು.
ಚೀನಾದ ಪ್ಯಾರಾ ಪವರ್‌ಲಿಫ್ಟರ್ ಹು ಡಂಡನ್ 120 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಈಜಿಪ್ಟ್‌ನ ರೆಹಾಬ್ ಅಹ್ಮದ್ ಬೆಳ್ಳಿ, ಗ್ರೇಟ್ ಬ್ರಿಟನ್‌ನ ಒಲಿವಿಯಾ ಬ್ರೂಮ್ ಕಂಚಿನ ಪದಕ ಗೆದ್ದಿದ್ದಾರೆ.
ಇಂದು ಭಾರತದ ಪ್ಯಾರಾ-ಪವರ್ ಲಿಫ್ಟರ್ ಜೈದೀಪ್ ಕುಮಾರ್ ಪುರುಷರ 65 ಕೆಜಿ ವಿಭಾಗದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Tokyo Paralympics: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್