ಟೋಕಿಯೋ: ಜಪಾನ್ನ ಟೋಕಿಯೋದಲ್ಲಿ ಜುಲೈ 23ರಿಂದ ಆರಂಭಗೊಂಡಿದ್ದ ಟೋಕಿಯೋ ಒಲಿಂಪಿಕ್ಸ್ 2020 ನಿನ್ನೆಗೆ ಮುಕ್ತಾಯವಾಗಿದ್ದು, 16ನೇ ದಿನವಾದ ಇಂದು ಭರ್ಜರಿಯಾಗಿ ಸಮಾರೋಪ ಸಮಾರಂಭ ನಡೆಯಲಿದೆ.
ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿ ಒಟ್ಟು 7 ಪದಕ ಬಂದಿದೆ. ಈ ಮೂಲಕ ಅತಿ ಹೆಚ್ಚು ಪದಕ ಗೆದ್ದು ಭಾರತ ಒಲಿಂಪಿಕ್ಸ್ ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಿಸಿದೆ. ಲಂಡನ್ ಒಲಿಂಪಿಕ್ಸ್ ವೇಳೆ ನಿರ್ಮಾಣಗೊಂಡಿದ್ದ ದಾಖಲೆಯನ್ನು ಮೀರಿದ ಸಾಧನೆಗೈದ ಕ್ರೀಡಾಪಟುಗಳ ಹೊಸ ಎತ್ತರಕ್ಕೆ ದೇಶದ ಧ್ವಜವನ್ನು ಕೊಂಡೊಯ್ದರು. ಜೊತೆಗೆ ಒಲಿಂಪಿಕ್ಸ್ ಪಾಯಿಂಟ್ ಪಟ್ಟಿಯಲ್ಲಿ ಭಾರತ 47ನೇ ಸ್ಥಾನದಲ್ಲಿದೆ.
-
The Olympics Closing Ceremony brings out all the feels! ❤️
— Olympics (@Olympics) August 7, 2021 " class="align-text-top noRightClick twitterSection" data="
We reminisce and look back at how past Games came to an end.
#StrongerTogether pic.twitter.com/SW9QM0R4Wk
">The Olympics Closing Ceremony brings out all the feels! ❤️
— Olympics (@Olympics) August 7, 2021
We reminisce and look back at how past Games came to an end.
#StrongerTogether pic.twitter.com/SW9QM0R4WkThe Olympics Closing Ceremony brings out all the feels! ❤️
— Olympics (@Olympics) August 7, 2021
We reminisce and look back at how past Games came to an end.
#StrongerTogether pic.twitter.com/SW9QM0R4Wk
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಇತಿಹಾಸ ಬರೆದ ಭಾರತ.. ಅತಿ ಹೆಚ್ಚು ಪದಕ ಗೆದ್ದ ಸಾಧನೆ
ಒಲಿಂಪಿಕ್ಸ್ ಸಮಾರೋಪ ಸಮಾರಂಭ
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭವು ಟೋಕಿಯೋದಲ್ಲಿನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಭಾರತದಲ್ಲಿ ಈ ಸಮಯ ಸಂಜೆ 4.30 ಆಗಿರುತ್ತದೆ. ಟಿವಿಯಲ್ಲಿ ಸಮಾರಂಭದ ನೇರಪ್ರಸಾರ ನೋಡ ಬಯಸುವವರು Sony TEN 1 HD/SD, Sony TEN 2 HD/SD ಯಲ್ಲಿ ಇಂಗ್ಲಿಷ್ ಕಾಮೆಂಟರಿಯೊಂದಿಗೆ ವೀಕ್ಷಿಸಬಹುದು. Sony TEN 3 HD/SD ಹಿಂದಿ ಭಾಷೆ ಕಾಮೆಂಟರಿಯನ್ನು ಹೊಂದಿರುತ್ತದೆ. ಆನ್‌ಲೈನ್ ಸ್ಟ್ರೀಮಿಂಗ್ ಬಯಸುವವರು SonyLivನಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: ಟೋಕಿಯೋದಲ್ಲಿ ಇತಿಹಾಸ ಬರೆದ ಚೋಪ್ರಾ.. ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಮುಕುಟ