ಟೋಕಿಯೋ: 20ನೇ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಅಚ್ಚರಿ ರೀತಿಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಅವರು ಕನಸು ಭಗ್ನಗೊಂಡಿದೆ.
-
#TokyoOlympics: Serbia's Novak Djokovic (in file photo) loses to Alexander Zverev of Germany in men's singles semi-finals pic.twitter.com/ogMooERces
— ANI (@ANI) July 30, 2021 " class="align-text-top noRightClick twitterSection" data="
">#TokyoOlympics: Serbia's Novak Djokovic (in file photo) loses to Alexander Zverev of Germany in men's singles semi-finals pic.twitter.com/ogMooERces
— ANI (@ANI) July 30, 2021#TokyoOlympics: Serbia's Novak Djokovic (in file photo) loses to Alexander Zverev of Germany in men's singles semi-finals pic.twitter.com/ogMooERces
— ANI (@ANI) July 30, 2021
34 ವರ್ಷದ ಜೊಕೊವಿಚ್ ಈಗಾಗಲೇ ಅಸ್ಟ್ರೇಲಿಯಾ ಓಪನ್, ಅಮೆರಿಕ, ಫ್ರೆಂಚ್ ಹಾಗೂ ವಿಂಬಲ್ಡನ್ ಗೆದ್ದು, ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದರು. ಆದರೆ ಇಂದು ನಡೆದ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜೆರೆವ್ ವಿರುದ್ಧ 6-1, 3-6, 1-6 ಅಂತರದಿಂದ ಸೋಲು ಅನುಭವಿಸಿದರು.
ಜಪಾನ್ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನ ಟೆನಿಸ್ ಪುರುಷರ ವಿಭಾಗದ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಆರಂಭದಿಂದಲೇ ಅಲೆಕ್ಸಾಂಡರ್ ಉತ್ತಮ ಹೊಡೆತಗಳಿಂದ ನೊವಾಕ್ ಮೇಲೆ ಸವಾರಿ ಮಾಡಿದರು. ಹೀಗಾಗಿ ಮೊದಲ ಸೆಟ್ನಲ್ಲಿ 6-1 ಅಂತರದಿಂದ ಗೆಲುವು ದಾಖಲಿಸಿದರು. ಇದಾದ ಬಳಿಕ ಕಮ್ಬ್ಯಾಕ್ ಮಾಡಿದ ನೊವಾಕ್ 3-6 ಅಂತರದಿಂದ ಗೆಲುವು ದಾಖಲು ಮಾಡಿದ್ದರು. ಆದರೆ ಕೊನೆ ಸುತ್ತಿನಲ್ಲಿ ಸೋಲಿಗೆ ಶರಣಾಗಿ 1-6 ಅಂತರದಿಂದ ಪಂದ್ಯ ಕೈಚೆಲ್ಲಿದರು.
ಇದನ್ನೂ ಓದಿ: ಹಗಲಿಡೀ ದುಡಿದು ಸಿಹಿನಿದ್ರೆಯಲ್ಲಿದ್ದ ಆರು ಮಂದಿ ಕಾರ್ಮಿಕರು ಚಿರನಿದ್ರೆಗೆ ಜಾರಿದ್ರು!
ಸೆಮಿಫೈನಲ್ನಲ್ಲಿ ಸೋಲು ಕಂಡಿರುವ ಜೊಕೊವಿಚ್ ಇದೀಗ ಕಂಚಿನ ಪದಕಕ್ಕಾಗಿ ಸ್ಪೇನ್ನ ಕ್ಯಾರೆನೊ ಬುಸ್ಟಾ ವಿರುದ್ಧ ಹೋರಾಟ ನಡೆಸಲಿದ್ದಾರೆ. ಪ್ರಸಕ್ತ ಟೋಕಿಯೋ ಒಲಿಂಪಿಕ್ಸ್ನಲ್ಲಿ ಜೊಕೊವಿಚ್ ಚಿನ್ನದ ಪದಕ ಗೆದ್ದಿದ್ದರೆ ಗೋಲ್ಡನ್ ಸ್ಲ್ಯಾಮ್ ಆಗಿ ಹೊರಹೊಮ್ಮುತ್ತಿದ್ದರು.