ಮುಂಬೈ: ಮಂಗಳವಾರದಿಂದ ಟೋಕಿಯೋದಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ವಿಶೇಷ ಚೇತನರು ತಮ್ಮ ಅಂಗವಿಕಲತೆಯನ್ನೇ ಮೀರಿ ತಮ್ಮಂತೆ ಇರುವವರ ಜೊತೆಗೆ ಕ್ರೀಡೆಗಳಲ್ಲಿ ಸ್ಪರ್ಧಿಸಿ ಸಂಭ್ರಮಿಸಲಿದ್ದಾರೆ.
ಈ ಬಾರಿ ಭಾರತದಿಂದ 54 ಮಂದಿ ಹಲವಾರು ಕನಸುಗಳೊಂದಿಗೆ ಟೋಕಿಯೋಗೆ ಪ್ರಯಾಣಿಸಿದ್ದು, ಅವರಿಗೆ ಇದೇ ದೇಶದ ಜನಗೆ ಮನಸಾರೆ ಹರಸಿ, ಅವರು ನಿಜ ಜೀವನದ ಹೀರೋಗಳು ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಇದು ಪ್ಯಾರಾಲಿಂಪಿಕ್ಸ್ನ ಸಮಯ. ಎಲ್ಲ ಭಾರತೀಯರು ಟೋಕಿಯೋಗೆ ತೆರಳಿರುವ ಭಾರತದ 54 ಕ್ರೀಡಾಪಟುಗಳ ಬಳಗವನ್ನು ಬೆಂಬಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಹವ್ಯಾಸ ಮತ್ತು ದೃಢನಂಬಿಕೆ ಇದ್ದರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ಪ್ಯಾರಾ ಕ್ರೀಡಾಪಟುಗಳ ಪಯಣ ಸಾಮಾನ್ಯ ಜನರಿಗೆ ಕಣ್ಣು ತೆರೆಸುತ್ತದೆ. ಇಲ್ಲಿ ಭಾಗವಹಿಸುವ ಪುರುಷರು ಮತ್ತು ಮಹಿಳೆಯರು ವಿಶೇಷ ಸಾಮರ್ಥ್ಯವುಳ್ಳ ಕ್ರೀಡಾಪಟುಗಳಲ್ಲ ಎಂದು ನಾನು ನಂಬುತ್ತೇನೆ. ಆದರೆ, ಅವರು ನಮ್ಮಲ್ಲಿ ಪ್ರತಿಯೊಬ್ಬರಿಗೂ ನಿಜ ಜೀವನದ ಹೀರೋಗಳು, ಅಸಾಧಾರಣ ಸಾಮರ್ಥ್ಯವಿರುವ ಮಹಿಳೆಯರು ಮತ್ತು ಪುರುಷರು ಎಂದು ಕ್ರಿಕೆಟ್ ದೇವರು ಕೊಂಡಾಡಿದ್ದಾರೆ.
ಫಲಿತಾಂಶಗಳು ಏನೇ ಆದರೂ ಒಲಿಂಪಿಕ್ಸ್ನಲ್ಲಿ ಭಾಗವಹಿಸವ ಪ್ರತಿಯೊಬ್ಬ ಕ್ರೀಡಾಪಟು ಬೆಂಬಲಿಸೋಣ. ಒಲಿಂಪಿಕ್ಸ್ ಹೀರೋಗಳು ಮತ್ತು ಕ್ರಿಕೆಟಿಗರ ಯಶಸ್ಸು ಹೇಗೆ ಆಚರಿಸಿದೆವೋ ಹಾಗೆಯೇ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳ ಆಟವನ್ನು ಅದೇ ಆಚರಿಸಿದರೆ ನಾವು ಉತ್ತಮ ಸಮಾಜ ಆಗಬಹುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ 54 ಕ್ರೀಡಾಪಟುಗಳು ಪದಕ ಗೆಲ್ಲಲಾಗುವುದಿಲ್ಲ. ಆದರೆ, ನಾವು ಎಲ್ಲರ ಸಾಮರ್ಥ್ಯ ಬೆಂಬಲಿಸಿ ಸಂಭ್ರವನ್ನಾಚರಿಸೋಣ ಎಂದು ಸಚಿನ್ ಹೇಳಿದ್ದಾರೆ.
ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವುದರಿಂದ ಈ ಬಾರಿ ಹೆಚ್ಚು ಪದಕಗಳನ್ನು ಗೆಲ್ಲಬಹುದು. ನಾನು ಈ ಬಾರಿ 10ಕ್ಕಿಂತಲೂ ಹೆಚ್ಚು ಪದಕ ಗೆಲ್ಲಬಹುದು ಎಂದು ಓದಿದ್ದೇನೆ. ಆದರೆ, ರಿಯೋಗಿಂತ ಹೆಚ್ಚು ಪದಕ ಬರಲಿವೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಇದನ್ನು ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಈ ಬಾರಿ ದಾಖಲೆಯ ಪದಕ ಗೆಲ್ಲಲಿದೆ : ದೀಪಾ ಮಲಿಕ್