ETV Bharat / sports

ದೇಶಕ್ಕಾಗಿ ಪದಕ ಗೆದ್ದಿರುವುದು ಹೆಮ್ಮೆ ಎನಿಸುತ್ತಿದೆ, ಮುಂದಿನ ಬಾರಿ ಚಿನ್ನಕ್ಕೆ ಪ್ರಯತ್ನಿಸುವೆ: ಪಿ ವಿ ಸಿಂಧು - Sindhu return to Hyderabad

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್​ ತಾರೆ ಪಿ ವಿ ಸಿಂಧು ಚಿನ್ನ ಗೆಲ್ಲಬೇಕೆಂದು ಇಡೀ ದೇಶದ ಜನತೆ ಬಯಸಿದ್ದರು. ಆದರೆ ಸೆಮಿಫೈನಲ್​ನಲ್ಲಿ ನಂಬರ್​ 1 ಅಟಗಾರ್ತಿ ಚೀನಾದ ತೈಪೆಯ ತೈ ಜು ಯಿಂಗ್ ವಿರುದ್ಧ ಸೋಲು ಕಾಣುವ ಮೂಲಕ ಚಿನ್ನದ ಕನಸು ಭಗ್ನವಾಯಿತು. ಆದರೆ ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ ಚೀನಾದ ಹೆ ಬಿಂಗ್ ಜಿಯೊವೊ ಅವರನ್ನು ಮಣಿಸಿ ಕಂಚಿನ ಪದಕ ಪಡೆದರು.

PV Sindhu Promises to trying win gold medal in Paris
ಪಿವಿ ಸಿಂಧು
author img

By

Published : Aug 4, 2021, 7:23 PM IST

ಹೈದರಾಬಾದ್​: ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದುಕೊಡುವ ಮೂಲಕ ಒಲಿಂಪಿಕ್ಸ್​ನಲ್ಲಿ ಸತತ ಎರಡು ಪದಕ ಗೆದ್ದಿರುವ ಬ್ಯಾಡ್ಮಿಂಟನ್​​ ಪಿ ವಿ ಸಿಂಧು ಬುಧವಾರ ಹೈದರಾಬಾದ್​ಗೆ ಮರಳಿದ್ದಾರೆ. ಸ್ವತಃ ತೆಲಂಗಾಣ ಕ್ರೀಡಾ ಸಚಿವ ಶ್ರೀನಿವಾಸ ಗೌಡ ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪದಕ ವಿಜೇತೆಯನ್ನು ಸ್ವಾಗತಿಸಿದರು.

ಸುಚಿತ್ರ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪಿ ವಿ ಸಿಂಧು, ದೇಶಕ್ಕಾಗಿ ಪದಕ ತಂದುಕೊಟ್ಟಿರುವುದು ನನಗೆ ಹೆಮ್ಮೆಯನ್ನಿಸುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಭವಿಷ್ಯದಲ್ಲೂ ಮತ್ತಷ್ಟು ವಿಜಯ ಸಾಧಿಸುವುದಕ್ಕೆ ನನಗೆ ಪ್ರೇರಣೆ ನೀಡಿದೆ. ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಇದು ಹೀಗೆ ಮುಂದುವರಿಯಲಿ. ನನಗೆ ಈ ಪಯಣದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಸುಚಿತ್ರ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಮಾತನಾಡಿದ ಪಿ ವಿ ಸಿಂಧು

ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲೆ ನನ್ನ ಮೇಲಿನ ಭರವಸೆ ಕೂಡ ಹೆಚ್ಚಾಗಿತ್ತು. ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ, ಹೀಗೆ ಮುಂದುವರಿಯಲಿದೆ. 2024ರ ಪ್ಯಾರೀಸ್​ ಒಲಿಂಪಿಕ್ಸ್​ನಲ್ಲಿ ಖಂಡಿತ ಆಡುತ್ತೇನೆ. ಅಲ್ಲಿ ಚಿನ್ನದ ಪದಕ ಗೆಲ್ಲಲು ಶೇ.100 ಪ್ರಯತ್ನ ಪಡುತ್ತೇನೆ. ಸದ್ಯಕ್ಕೆ ಈ ಕ್ಷಣವನ್ನು ಆನಂದಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಯಶಸ್ಸನ್ನು ತಮ್ಮ ಪೋಷಕರು, ಕೋಚ್​, ತರಬೇತಿಗೆ ನೆರವಾದ ರಾಜ್ಯ ಸರ್ಕಾರ, ಸುಚಿತ್ರ ಬ್ಯಾಡ್ಮಿಂಟನ್ ಅಕಾಡೆಮಿ, ಕ್ರೀಡಾ ಪ್ರಾಧಿಕಾರ ಮತ್ತು ಸ್ಪಾನ್ಸರ್​ಗೆ ಅರ್ಪಿಸುತ್ತೇನೆ, ಇವರೆಲ್ಲರ ಸಹಕಾರದಿಂದಲೇ ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಎಂದು ಸಂತಸ ಹಂಚಿಕೊಂಡರು.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪಿ ವಿ ಸಿಂಧು ಚಿನ್ನ ಗೆಲ್ಲಬೇಕೆಂದು ಇಡೀ ದೇಶದ ಜನತೆ ಬಯಸಿದ್ದರು. ಆದರೆ ಸೆಮಿಫೈನಲ್​ನಲ್ಲಿ ನಂಬರ್​ 1 ಅಟಗಾರ್ತಿ ಚೀನಾದ ತೈಪೆಯ ತೈ ಜು ಯಿಂಗ್ ವಿರುದ್ಧ ಸೋಲು ಕಾಣುವ ಮೂಲಕ ಚಿನ್ನದ ಕನಸು ಭಗ್ನವಾಯಿತು. ಆದರೆ ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ ಚೀನಾದ ಹೆ ಬಿಂಗ್ ಜಿಯೊವೊ ಅವರನ್ನು ಮಣಿಸಿ ಕಂಚಿನ ಪದಕ ಪಡೆದರು.

ಇದನ್ನು ಓದಿ:Good News: ಫೈನಲ್​ ಪ್ರವೇಶಿಸಿ ಮತ್ತೊಂದು ಪದಕ ಖಚಿತಪಡಿಸಿದ ರವಿ ಕುಮಾರ್ ದಹಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.