ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ 5-4 ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಸುಮಾರು 41 ವರ್ಷಗಳ ಬಳಿಕ ಭಾರತಕ್ಕೆ ಹಾಕಿಯಲ್ಲಿ ಪದಕ ಸಿಕ್ಕಿದ್ದು, ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಗಂಭೀರ್ ಟ್ವೀಟ್ ಮಾಡಿದ್ದು, ಅದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಟೀಂ ಇಂಡಿಯಾ ಜರ್ಮನಿ ವಿರುದ್ಧ ಗೆಲುವು ದಾಖಲು ಮಾಡುತ್ತಿದ್ದಂತೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, 1983, 2007 ಹಾಗೂ 2011ರ ಕ್ರಿಕೆಟ್ ವಿಶ್ವಕಪ್ ಗೆಲುವುಗಳನ್ನ ಮೆರೆತು ಬಿಡಿ. ಈ ಗೆಲುವುಗಿಂತಲೂ ಹಾಕಿ ಗೆಲುವು ಮಿಗಿಲಾದದ್ದು. ಭಾರತೀಯ ಹಾಕಿ ನಮ್ಮ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.
-
Forget 1983, 2007 or 2011, this medal in Hockey is bigger than any World Cup! #IndianHockeyMyPride 🇮🇳 pic.twitter.com/UZjfPwFHJJ
— Gautam Gambhir (@GautamGambhir) August 5, 2021 " class="align-text-top noRightClick twitterSection" data="
">Forget 1983, 2007 or 2011, this medal in Hockey is bigger than any World Cup! #IndianHockeyMyPride 🇮🇳 pic.twitter.com/UZjfPwFHJJ
— Gautam Gambhir (@GautamGambhir) August 5, 2021Forget 1983, 2007 or 2011, this medal in Hockey is bigger than any World Cup! #IndianHockeyMyPride 🇮🇳 pic.twitter.com/UZjfPwFHJJ
— Gautam Gambhir (@GautamGambhir) August 5, 2021
2007 ಹಾಗೂ 2011ರ ವಿಶ್ವಕಪ್ ತಂಡದ ಸದಸ್ಯನಾಗಿದ್ದ ಗೌತಮ್ ಗಂಭೀರ್ ಈ ರೀತಿಯ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ಕ್ರೀಡೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಈ ಹಿಂದೆ ವಿಶ್ವಕಪ್ ತಂಡದ ಸದಸ್ಯರಾಗಿ ನೀವೂ ಈ ರೀತಿಯಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಟ್ವೀಟ್ ಮಾಡಿ, ಸರ್ ನಿಮ್ಮ ಈ ಟ್ವೀಟ್ ರಾಜಕಾರಣಿಗಳ ರೀತಿಯಲ್ಲಿ ಇದೆ. ಇನ್ನೊಬ್ಬರ ಸಾಧನೆ ಕಡಿಮೆಯಾಗಿರುವುದಿಲ್ಲ ಎಂದಿದ್ದಾರೆ.
-
Sir, this looks more like a politician's tweet than a sportsperson's tweet. No need to demean other's achievement.
— Silly Point (@FarziCricketer) August 5, 2021 " class="align-text-top noRightClick twitterSection" data="
">Sir, this looks more like a politician's tweet than a sportsperson's tweet. No need to demean other's achievement.
— Silly Point (@FarziCricketer) August 5, 2021Sir, this looks more like a politician's tweet than a sportsperson's tweet. No need to demean other's achievement.
— Silly Point (@FarziCricketer) August 5, 2021
ಇದನ್ನೂ ಓದಿರಿ: ಬೃಹತ್ ಮೊಸಳೆ ಹೆಗಲ ಮೇಲೆ ಹೊತ್ತು ತಂದ ಜನರು... ವಿಡಿಯೋ ವೈರಲ್!