ಟೋಕಿಯೋ(ಜಪಾನ್) : ಸುಮಾರು 12 ದಿನಗಳಿಂದ ನಡೆದ ಟೋಕಿಯೊ ಪ್ಯಾರಾಲಿಂಪಿಕ್ ಅದ್ದೂರಿ ಯಶಸ್ಸನ್ನು ಕಂಡಿದೆ. ಕೋವಿಡ್ ಕಾರಣದಿಂದ ಒಂದು ವರ್ಷ ತಡವಾಗಿ ಆರಂಭವಾದ ಈ ಒಲಿಂಪಿಕ್ಸ್ ಜಗಮೆಚ್ಚಿದ ಪ್ರತಿಭೆಗಳನ್ನು ಪರಿಚಯಿಸಿದೆ.
ಸೋಲು, ಗೆಲುವುಗಳು, ದಾಖಲೆಗಳು, ಸುಮಾರು ವರ್ಷಗಳ ಸ್ಪರ್ಧಿಗಳ ಪರಿಶ್ರಮ ಫಲಿತಾಂಶ ಅನಾವರಣಗೊಂಡಿದೆ. ಇದರ ಜೊತೆಗೆ ಕೋವಿಡ್ ಸಾಂಕ್ರಾಮಿಕ ನಡುವೆಯೂ ಯಾವುದೇ ಲೋಪವಿಲ್ಲದೇ ಕ್ರೀಡಾಕೂಟ ನಡೆಸಿಕೊಟ್ಟ ಜಪಾನ್ನ ದಿಟ್ಟತನ ಜಗತ್ತಿನ ಅರಿವಿಗೆ ಬಂದಿದೆ.

ಪ್ಯಾರಾಲಿಂಪಿಕ್ಸ್ ಅನ್ನು ಜೀವನದಲ್ಲಿ ಗೆದ್ದವರ ಆಟ ಅಂಥಲೇ ಸಾಮಾನ್ಯವಾಗಿ ಕರೆಯಲಾಗುತ್ತದೆ. ಇಲ್ಲಿ 'ಜೀವನದಲ್ಲಿ ಗೆದ್ದವರು' ಅಂದರೆ ಪ್ಯಾರಾ ಸ್ಪರ್ಧಿಗಳು ಅದರಲ್ಲೂ ಭಾರತೀಯರು ತೋರಿರುವ ಸಾಧನೆ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುವಂಥದ್ದಾಗಿದೆ.
ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯಸ್ಥ ಆಂಡ್ರ್ಯೂ ಪಾರ್ಸನ್ಸ್ ಅವರು ಒಲಿಂಪಿಕ್ ಕ್ರೀಡಾಂಗಣದಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯವಾಗಿದೆ ಎಂದು ಘೋಷಿಸಿದ್ದಾರೆ. ಜೊತೆಗೆ ಇದು ಕೇವಲ ಐತಿಹಾಸಿಕವಲ್ಲ, ಅವರು ಅದ್ಭುತ ಕ್ರೀಡಾಕೂಟ ಎಂದು ಹೊಗಳಿದ್ದಾರೆ. ಪ್ಯಾರಾಲಿಂಪಿಕ್ ಸಮಾರೋಪ ಸಮಾರಂಭದಲ್ಲಿ ಪಟಾಕಿಗಳನ್ನು ಹೊತ್ತಿಸುವ ಮೂಲಕ ಕ್ರೀಡಾ ಗ್ರಾಮವನ್ನು ವರ್ಣರಂಜಿತಗೊಳಿಸಲಾಗಿದೆ.

ಈ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಸಾಧನೆ ಅಭೂತಪೂರ್ಣವಾಗಿದೆ. 5 ಚಿನ್ನದ ಪದಕ, 8 ಬೆಳ್ಳಿಯ ಪದಕ, 6 ಕಂಚಿನ ಪದಕ ಪಡೆದಿರುವ ಭಾರತೀಯ ಆಟಗಾರರು ಒಟ್ಟು 19 ಪದಕವನ್ನು ಗಳಿಸುವ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಸ್ಥಾನವನ್ನು 24ಕ್ಕೆ ಏರಿಸಿದ್ದಾರೆ.
-
Speechless! Historic performance by #IND at the #Tokyo2020 #Paralympics !🤩🎉✨ Thank you #Japan 🇯🇵 @Tokyo2020, for hosting us @Paralympics as India scripts sporting history and opens a New Chapter for Indian para-sports! Onwards & Upwards from here! #Praise4Para #UnitedByEmotion pic.twitter.com/Xlkee9UaPr
— Paralympic India 🇮🇳 #Cheer4India 🏅 #Praise4Para (@ParalympicIndia) September 5, 2021 " class="align-text-top noRightClick twitterSection" data="
">Speechless! Historic performance by #IND at the #Tokyo2020 #Paralympics !🤩🎉✨ Thank you #Japan 🇯🇵 @Tokyo2020, for hosting us @Paralympics as India scripts sporting history and opens a New Chapter for Indian para-sports! Onwards & Upwards from here! #Praise4Para #UnitedByEmotion pic.twitter.com/Xlkee9UaPr
— Paralympic India 🇮🇳 #Cheer4India 🏅 #Praise4Para (@ParalympicIndia) September 5, 2021Speechless! Historic performance by #IND at the #Tokyo2020 #Paralympics !🤩🎉✨ Thank you #Japan 🇯🇵 @Tokyo2020, for hosting us @Paralympics as India scripts sporting history and opens a New Chapter for Indian para-sports! Onwards & Upwards from here! #Praise4Para #UnitedByEmotion pic.twitter.com/Xlkee9UaPr
— Paralympic India 🇮🇳 #Cheer4India 🏅 #Praise4Para (@ParalympicIndia) September 5, 2021
ಪ್ಯಾರಾಲಿಂಪಿಕ್ಸ್ನಲ್ಲಿ ಒಟ್ಟು 207 ಪದಕ ಗಳಿಸುವ ಮೂಲಕ ಚೀನಾ ಮೊದಲನೇ ಸ್ಥಾನದಲ್ಲಿದ್ದರೆ, 124 ಪದಕ ಗಳಿಸುವ ಮೂಲಕ ಬ್ರಿಟನ್ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ರಷ್ಯಾ ತಲಾ 37 ಮತ್ತು 34 ಪದಕಗಳನ್ನು ಪಡೆಯುವ ಮೂಲಕ ಮೂರು ಮತ್ತು 4ನೇ ಸ್ಥಾನದಲ್ಲಿವೆ.
ಟೋಕಿಯೊ ಒಲಿಂಪಿಕ್ಸ್ ಯಶಸ್ವಿ ಆಯೋಜನೆಯಾಗಿದ್ದು, ಮುಂದಿನ ಒಲಿಂಪಿಕ್ಸ್ 2024ರಲ್ಲಿ ಫ್ರಾನ್ಸ್ನ ಪ್ಯಾರೀಸ್ನಲ್ಲಿ ನಡೆಯಲಿದೆ. 2028 ಒಲಿಂಪಿಕ್ಸ್ ಅಮೆರಿಕದ ಲಾಸ್ ಎಂಜಲೀಸ್, 2032ನೇ ಒಲಿಂಪಿಕ್ಸ್ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆಯಲಿದೆ.