ಮೆಲ್ಬೋರ್ನ್: ಅಮೆರಿಕದ ಟೆನ್ನಿಸ್ ಸ್ಟಾರ್ ಸೆರೆನಾ ವಿಲಿಯಮ್ಸ್ ಮಂಗಳವಾರ ವಿಶ್ವ ಟೆನ್ನಿಸ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ರೋಮೆನಿಯಾದ ಸಿಮೋನಾ ಹಾಲೆಪ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
24ನೇ ಗ್ರ್ಯಾಂಡ್ಸ್ಲಾಮ್ ಗೆಲ್ಲುವ ಕನಸಿನಲ್ಲಿರುವ ಸೆರೆನಾ ವಿಲಿಯಮ್ಸ್ ಮಂಗಳವಾರದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲೆಪ್ ವಿರುದ್ಧ 6-3, 6-3 ನೇರ ಸೆಟ್ಗಳ ಅಂತರದಲ್ಲಿ ಗೆಲುವು ಸಾಧಿಸಿ ನಾಕೌಟ್ ಪ್ರವೇಶಿಸಿದರು.
39 ವರ್ಷದ ಸೆರೆನಾ ಮೊದಲ ಸೆಟ್ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರರು. ಇದರ ಫಲ 6-3ರಲ್ಲಿ ಮೊದಲ ಸೆಟ್ ಗೆದ್ದು ಕೊಂಡರು, ಈ ವೇಳೆ ಅವರು ಎದುರಾಳಿ ವಿರುದ್ಧ 14 ಅಂಕಗಳನ್ನು ಏಸ್ ಸಿಡಿಸುವ ಮೂಲಕ ಪಡೆದು ಕೊಂಡಿದ್ದು ವಿಶೇಷವಾಗಿತ್ತು.
ಎರಡನೇ ಸೆಟ್ನಲ್ಲಿ ಹಾಲೆಪ್ ಒಂದು ಹಂತದಲ್ಲಿ 3-1ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಅದ್ಭುತವಾಗಿ ತಿರುಗಿ ಬಿದ್ದ ಸೆರೆನಾ ವಿಲಿಯಮ್ಸ್ 3-3ಕ್ಕೆ ಸ್ಕೋರ್ ಸಮಬಲ ಸಾಧಿಸಿದರು. ನಂತರ ಅದೇ ಅಂತರವನ್ನು ಮುಂದುವರಿಸಿದ ಅವರದು ಎದುರಾಳಿಗೆ ಹಿಂತಿರುಗಲು ಅವಕಾಶ ನೀಡದೇ 6-3ರಲ್ಲಿ ಸೆಟ್ ಜೊತೆಗೆ ಪಂದ್ಯ ಗೆದ್ದುಕೊಂಡರು.
ಈಗಾಗಲೇ 23 ಪಂದ್ಯಗಳನ್ನು ಗೆದ್ದಿರುವ ಸೆರೆನಾ ಇನ್ನೊಂದು ಗ್ರ್ಯಾಂಡ್ ಸ್ಲಾಮ್ ಗೆದ್ದರೆ ಅತಿ ಹೆಚ್ಚು ಹೆಚ್ಚು ಗ್ರ್ಯಾಂಡ್ ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಸೆರೆನಾ 2017ರಲ್ಲಿ ಕೊನೆಯ ಬಾರಿ ಅವರ ಸಹೋದರಿ ವೀನಸ್ ವಿಲಿಯಮ್ಸ್ ಮಣಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು.
ಇದನ್ನು ಓದಿ:ಪದಾರ್ಪಣೆ ಪಂದ್ಯದಲ್ಲೇ ಅಶ್ವಿನ್, ಮಿಶ್ರಾ ಲಿಸ್ಟ್ ಸೇರಿದ ಅಕ್ಸರ್ ಪಟೇಲ್