ETV Bharat / sports

ವಿಶ್ವ ಟೆನ್ನಿಸ್ ರ‍್ಯಾಂಕಿಂಗ್​ನಲ್ಲಿ 3ನೇ ಸ್ಥಾನಕ್ಕೇರಿದ ನವೋಮಿ ಒಸಾಕಾ - ಏಂಜಲಿಕ್ಯೂ ಕೆರ್ಬರ್

2020ರ ಗ್ರ್ಯಾಂಡ್​​ಸ್ಲ್ಯಾಮ್ ಪ್ರಶಸ್ತಿ ಪಡೆದ ಜಪಾನ್ ಟೆನ್ನಿಸ್ ತಾರೆ ನವೋಮಿ ಒಸಾಕಾ ವಿಶ್ವ ಟೆನ್ನಿಸ್ ರ‍್ಯಾಂಕಿಂಗ್​ನಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.

Naomi Osaka
ನವೋಮಿ ಒಸಾಕಾ
author img

By

Published : Sep 15, 2020, 8:58 AM IST

ಫ್ಲೋರಿಡಾ (ಅಮೆರಿಕ): ಯುಎಸ್ ಓಪನ್ 2020ರಲ್ಲಿ ಗ್ರ್ಯಾಂಡ್​​ಸ್ಲ್ಯಾಮ್ ಪ್ರಶಸ್ತಿ ಪಡೆದ ಬಳಿಕ ಜಪಾನ್ ಟೆನ್ನಿಸ್ ತಾರೆ ನವೋಮಿ ಒಸಾಕಾ ವಿಶ್ವ ಟೆನ್ನಿಸ್ ರ‍್ಯಾಂಕಿಂಗ್​ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

22 ವರ್ಷದ ಇವರು ಯುಎಸ್ ಓಪನ್ ಟೆನ್ನಿಸ್​​ ಫೈನಲ್ ಪಂದ್ಯದಲ್ಲಿ ಬೆಲಾರಸ್​ನ ಟೆನ್ನಿಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರ ವಿರುದ್ಧ ಗೆಲುವು ಕಂಡಿದ್ದರು. ಇದರಿಂದಾಗಿ ಆರನೇ ಸ್ಥಾನದಲ್ಲಿದ್ದ ನವೋಮಿ ಒಸಾಕಾ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

Naomi Osaka
ನವೋಮಿ ಒಸಾಕಾ

ಅಜರೆಂಕಾ ವಿರುದ್ಧ 1-6, 6-3, 6-3 ಸೆಟ್​ಗಳಲ್ಲಿ ಗೆದ್ದ ನವೋಮಿ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಮೂರು ಸ್ಥಾನಗಳಷ್ಟು ಏರಿಕೆ ಕಂಡಿದ್ದಾರೆ.

ಸುಮಾರು 1 ಗಂಟೆ 53 ನಿಮಿಷಗಳ ಹೋರಾಟದ ಬಳಿಕ ನ್ಯೂಯಾರ್ಕ್​ ನಗರದಲ್ಲಿರುವ ಅರ್ಥರ್ ಆಶೆ ಸ್ಟೇಡಿಯಂನಲ್ಲಿ ನವೋಮಿ ಗ್ರ್ಯಾಂಡ್​ಸ್ಲ್ಯಾಮ್ ಕಿರೀಟ ಮುಡಿದಿದ್ದಾರೆ.

WTA Rankings
ವಿಶ್ವ ಟೆನ್ನಿಸ್ ರ‍್ಯಾಂಕಿಂಗ್

ಅತಿ ಹೆಚ್ಚು ಗ್ರ್ಯಾಂಡ್​​ಸ್ಲ್ಯಾಮ್ ಪಡೆದಿರುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸೆರೆನಾ ವಿಲಿಯಮ್ಸ್, ಎರಡನೇ ಸ್ಥಾನದಲ್ಲಿ ವೀನನ್ಸ್ ವಿಲಿಯಮ್ಸ್ ಹಾಗೂ ಮೂರನೇ ಸ್ಥಾನದಲ್ಲಿ ಕಿಮ್ ಕ್ಲಿಜ್​ಸ್ಟರ್ಸ್​ ಇದ್ದು, ನಾಲ್ಕನೇ ಸ್ಥಾನವನ್ನು ಮೂರು ಗ್ರ್ಯಾಂಡ್​ಸ್ಲ್ಯಾಮ್ ಪಡೆದ ಏಂಜಲಿಕ್ಯೂ ಕೆರ್ಬರ್ ಜೊತೆಗೆ ನವೋಮಿ ಹಂಚಿಕೊಂಡಿದ್ದಾರೆ.

ಸದಕ್ಕೆ ಅಜರೆಂಕಾ ವಿಶ್ವ ಟೆನ್ನಿಸ್ ರ‍್ಯಾಂಕಿಂಗ್​ನಲ್ಲಿ​ 13 ಸ್ಥಾನಗಳಷ್ಟು ಜಿಗಿಗಿದ್ದು, ಈಗ 14ನೇ ಸ್ಥಾನದಲ್ಲಿದ್ದಾರೆ. ಅಮೆರಿಕಾದ ಟೆನ್ನಿಸ್ ಆಟಗಾರ್ತಿ ಜೆನ್ನಿಫರ್ ಬ್ರಾಡಿ 16 ಸ್ಥಾನಗಳಷ್ಟು ಏರಿಕೆ ಕಂಡಿದ್ದು, ಇದೀಗ 25ನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.