ನ್ಯೂಯಾರ್ಕ್: ವೆಸ್ಟರ್ನ್ ಮತ್ತು ಸದರ್ನ್ ಓಪನ್ ಹಾಗೂ ಉಎಸ್ ಓಪನ್ನಲ್ಲಿ ಫೈನಲ್ ಪ್ರವೇಶಿಸಿರುವ ಜಪಾನ್ನ ನವೋಮಿ ಒಸಾಕ ಡಬ್ಲ್ಯೂಟಿಎ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಟಾಪ್ 5ಗೆ ಎಂಟ್ರಿಕೊಟ್ಟಿದ್ದಾರೆ.
2020ರ ಆರಂಭದಲ್ಲಿ 5ನೇ ಶ್ರಾಯಾಂಕದಲ್ಲಿದ್ದ ಒಸಾಕ ನಡೆದಿದ್ದ ಆಸ್ಟ್ರೇಲಿಯಾ ಓಪನ್ನಲ್ಲಿ ಲೀಗ್ನಲ್ಲಿ ಲೀಗ್ ಹಂತದಲ್ಲೇ ಸೋಲು ಕಾಣುವ ಮೂಲಕ ಟಾಪ್ 10ರಿಂದ ಹೊರಬಿದ್ದಿದ್ದರು.
ಪ್ರಸ್ತುತ 4020 ಅಂಕಗಳೊಂದಿಗೆ 9ನೇ ಶ್ರೇಯಾಂಕದಲ್ಲಿದ್ದಾರೆ. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸೋತರೆ ಅವರಿಗೆ 1060 ಎಟಿಪಿ ಅಂಕದೊರೆಯಲಿದೆ. ಒಟ್ಟಾರೆ 5080 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಲಿದ್ದಾರೆ. ಒಂದು ವೇಳೆ ಫೈನಲ್ ಗೆದ್ದರೆ 1760 ಅಂಕ ಪಡೆಯಲಿದ್ದಾರೆ, ಆಗ ಒಟ್ಟಾರೆ 5780 ಅಂಕವಾಗಲಿದ್ದು 3ನೇ ಶ್ರೇಯಾಂಕ ಪಡೆಯಲಿದ್ದಾರೆ.
ಭಾನುವಾರ ನವೋಮಿ ಒಸಾಕ ಬೆಲರಷಿಯನ್ ಟೆನ್ನಿಸ್ ಪ್ಲೇಯರ್ ವಿಕಟೋರಿಯಾ ಅಜರೆಂಕಾ ಅವರನ್ನು ಎದುರಿಸಲಿದ್ದಾರೆ.