ಮೆಲ್ಬೋರ್ನ್: ದಾಖಲೆಯ 24ನೇ ಗ್ರ್ಯಾಂಡ್ಸ್ಲಾಮ್ ಟ್ರೋಫಿ ಗೆದ್ದು ದಾಖಲೆಯ ಕನಸು ಕಾಣುತ್ತಿದ್ದ ಸೆರೆನಾ ವಿಲಿಯಮ್ಸ್ಗೆ ಮತ್ತೊಮ್ಮೆ ನಿರಾಸೆಯಾಗಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.
23 ಗ್ರ್ಯಾಂಡ್ಸ್ಲಾಮ್ ವಿಜೇತೆ ಸೆರೆನಾ ಜಪಾನ್ನ ನವೋಮಿ ಒಸಾಕ ವಿರುದ್ಧ ನಡೆದ ಸೆಮಿಪೈನಲ್ ಪಂದ್ಯದಲ್ಲಿ 3 - 6, 4 - 6ರ ನೇರ ಸೆಟ್ಗಳ ಅಂತರದಲ್ಲಿ ಸೋಲುಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.
-
Simply sensational ✨@naomiosaka sweeps past Serena Williams 6-3 6-4 & is our first #AO2021 women's singles finalist!#AusOpen pic.twitter.com/KsMUARKI3L
— #AusOpen (@AustralianOpen) February 18, 2021 " class="align-text-top noRightClick twitterSection" data="
">Simply sensational ✨@naomiosaka sweeps past Serena Williams 6-3 6-4 & is our first #AO2021 women's singles finalist!#AusOpen pic.twitter.com/KsMUARKI3L
— #AusOpen (@AustralianOpen) February 18, 2021Simply sensational ✨@naomiosaka sweeps past Serena Williams 6-3 6-4 & is our first #AO2021 women's singles finalist!#AusOpen pic.twitter.com/KsMUARKI3L
— #AusOpen (@AustralianOpen) February 18, 2021
ಒಸಾಕ 2018ರ ಯುಎಸ್ ಓಪನ್ ಫೈನಲ್ನಲ್ಲೂ ಸೋಲಿಸಿ ಚಾಂಪಿಯನ್ ಆಗಿದ್ದರು. ಇದೀಗ ಮತ್ತೊಮ್ಮೆ ಶ್ರೇಷ್ಠ ಆಟಗಾರ್ತಿಯನ್ನು ಮಣಿಸಿ 4ನೇ ಬಾರಿ ಗ್ರ್ಯಾಂಡ್ಸ್ಲಾಮ್ ಫೈನಲ್ ಪ್ರವೇಶಿಸಿದ್ದಾರೆ. ಅಲ್ಲದೇ ಸತತ 20 ಪಂದ್ಯಗಳ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.
ಇಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಆಟಗಾರ್ತಿಯನ್ನು ಒಸಾಕ ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಎದುರಿಸಲಿದ್ದಾರೆ. ಇಂದು 22 ನೇ ಶ್ರೇಯಾಂಕದ ಜನ್ನಿಫರ್ ಬ್ರಾಡಿ ಮತ್ತು 25ನೇ ಶ್ರೇಯಾಂಕದ ಕರೋಲಿನಾ ಮುಚೋವಾ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಡುತ್ತಿದ್ದಾರೆ.
ಇದನ್ನು ಓದಿ:ಇಂದು ಐಪಿಎಲ್-14 ಹರಾಜು: ಕಣದಲ್ಲಿ 292 ಆಟಗಾರರು, ಆರ್ಸಿಬಿ ಬಳಿ ಇದೆ 35.40 ಕೋಟಿ!