ರೋಮ್: ಇಟಾಲಿಯನ್ ಓಪನ್ ಗೆದ್ದ ಪೋಲೆಂಡ್ನ 19 ವರ್ಷ ಇಗಾ ಸ್ವಿಯಾಟೆಕ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಡಬ್ಲ್ಯೂಟಿಎ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 10 ರೊಳಗೆ ಪ್ರವೇಶಿಸಿದ್ದಾರೆ.
ಟೂರ್ನಿಗೂ ಮುನ್ನ 15ನೇ ಶ್ರೇಯಾಂಕ ಪಡೆದಿದ್ದ ಪೋಲೆಂಡ್ ಆಟಗಾರ್ತಿ ಭಾನುವಾರ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು ಅವರನ್ನು 6-0, 6-0 ಯಲ್ಲಿ ಮಣಿಸಿ ಚಾಂಪಿಯನ್ ಆಗಿದ್ದರು.
ಇಗಾ ಕಳೆದ ವರ್ಷ ಅಕ್ಟೋಬರ್ನಲ್ಲಿ ಫ್ರೆಂಚ್ ಓಪನ್ ಗೆಲ್ಲುವ ಮುನ್ನ 54ನೇ ಶ್ರೇಯಾಂಕ ಪಡೆದಿದ್ದರು. ಇದೀಗ ವರ್ಷ ತುಂಬುವುದರೊಳಗೆ ಅಗ್ರ 9ನೇ ಶ್ರೇಯಾಂಕ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಮೊದಲ ಸ್ಥಾನದಲ್ಲಿದ್ದರೆ, ಜಪಾನ್ ನವೋಮಿ ಒಸಾಕ, ರೊಮೆನಿಯಾದ ಸಿಮೋನಾ ಹಾಲೆಪ್, ಬೆಲಾರಸ್ನ ಅರಿನಾ ಸಬಲೆಂಕಾ ಮತ್ತು ಅಮೆರಿಕದ ಎಲಿನಾ ಸ್ವಿಟೋಲಿನಾ ಅಗ್ರ 5ರಲ್ಲಿದ್ದಾರೆ. 23 ಗ್ರ್ಯಾಂಡ್ಸ್ಲಾಮ್ ಒಡತಿ ಸೆರೆನಾ ವಿಲಿಯಮ್ಸ್ 8ನೇ ಸ್ಥಾನದಲ್ಲಿದ್ದಾರೆ.
ಪುರುಷರ ಶ್ರೇಯಾಂಕದಲ್ಲಿ ಸರ್ಬಿಯಾದ ನೊವಾಕ್ ಜೋಕೊವಿಕ್ ಅಗ್ರಸ್ಥಾನದಲ್ಲಿ ಮುಂದುವರಿದರೆ, ಮಡ್ವೆಡೆವ್, ರಾಫೆಲ್ ನಡಾಲ್, ಡೊಮೆನಿಕ್ ಥೀಮ್, ಸ್ಟೆಫನೋಸ್ ಸಿಟ್ಸಿಪಾಸ್ ಮತ್ತು ಅಲೆಕ್ಸಾಂಡರ್ ಜ್ವರೆವ್ ಟಾಪ್ 5ರಲ್ಲಿದ್ದಾರೆ. ಸ್ವಿಸ್ ಸ್ಟಾರ್ ರೋಜರ್ ಫೆಡರರ್ 8ನೇ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ:ಇಟಾಲಿಯನ್ ಓಪನ್ ಫೈನಲ್: ಜೊಕೊವಿಕ್ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ನಡಾಲ್