ETV Bharat / sports

ಫ್ರೆಂಚ್​ ಓಪನ್ 2020​.. ಮೊದಲ ಸುತ್ತಿನಲ್ಲೇ ಹೊರಬಿದ್ದ ಆ್ಯಂಡಿ ಮರ್ರೆ - ಸ್ಟ್ಯಾನ್‌ ವಾವ್ರಿಂಕಾ- ಆ್ಯಂಡಿ ಮರ್ರೆ

ತಲಾ ಮೂರು ಗ್ರ್ಯಾಂಡ್​ಸ್ಲಾಮ್​ ಗೆದ್ದಿರುವ ಇಬ್ಬರು ಸ್ಟಾರ್​ ಟೆನ್ನಿಸ್​ ಆಟಗಾರರು 21 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಿದ್ದರು..

ಆ್ಯಂಡಿ ಮರ್ರೆ - ವಾವ್ರಿಂಕಾ
ಆ್ಯಂಡಿ ಮರ್ರೆ - ವಾವ್ರಿಂಕಾ
author img

By

Published : Sep 28, 2020, 8:25 PM IST

ಪ್ಯಾರಿಸ್ ‌: ಇಂಗ್ಲೆಂಡ್​ನ ಸ್ಟಾರ್​ ಟೆನ್ನಿಸ್​ ಪ್ಲೇಯರ್​ ಆ್ಯಂಡಿ ಮರ್ರೆ ಫ್ರೆಂಚ್​ ಓಪನ್​ನ ಮೊದಲ ಸುತ್ತಿನಲ್ಲೇ ಸೋಲು ಕಂಡು ನಿರಾಶೆ ಅನುಭವಿಸಿದ್ದಾರೆ.

ಫ್ರೆಂಚ್​ ಓಪನ್​ನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟ್ಯಾನ್‌ ವಾವ್ರಿಂಕಾ ವಿರುದ್ಧ 6-1, 6-3, 6-2ರಿಂದ ಮರ್ರೆ ಸೋಲು ಕಂಡಿದ್ದಾರೆ. ಎರಡು ಬಾರಿಯ ಒಲಿಂಪಿಕ್ಸ್​ ಚಿನ್ನ ಗೆದ್ದಿರುವ ಮರ್ರೆ ವಿರುದ್ಧ 97 ನಿಮಿಷಗಳ ಕಾಳಗದಲ್ಲಿ ವಾವ್ರಿಂಕಾ ಸಂಪೂರ್ಣ ಮೇಲುಗೈ ಸಾಧಿಸಿದರು.

ತಲಾ ಮೂರು ಗ್ರ್ಯಾಂಡ್​ಸ್ಲಾಮ್​ ಗೆದ್ದಿರುವ ಇಬ್ಬರು ಸ್ಟಾರ್​ ಟೆನ್ನಿಸ್​ ಆಟಗಾರರು 21 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಿದ್ದರು.

ಜರ್ಮನ್​ನ ಯುವ ಆಟಗಾರ ಹಾಗೂ ಯುಎಸ್​ ರನ್ನರ್​ ಅಪ್​ ಅಲೆಕ್ಸಾಂಡರ್‌ ಜ್ವೆರೆವ್‌ 7-5, 6-2, 6-4ರಿಂದ ಡೆನ್ನಿಸ್‌ ನೊವಾಕ್‌ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ಮಹಿಳಾ ಸಿಂಗಲ್ಸ್ ನಲ್ಲಿ ವೀನಸ್‌ ವಿಲಿಯಮ್ಸ್‌ ಕೂಡ ಮತ್ತೊಮ್ಮೆ ಮೊದಲ ಸುತ್ತಿನಲ್ಲೇ ಹೊರ ಬಿದ್ದರು. ಅವರು 4-6, 4-6ರಿಂದ ಅನ್ನಾ ಕರೋಲಿನಾ ಸ್ಮಿಡ್ಲೊವಾ ಅವರಿಗೆ ಶರಣಾದರು. ಈ ಮೂಲಕ ವೀನಸ್​ ಸತತ ಮೂರು ಪ್ರತಿಷ್ಠಿತ ಗ್ರ್ಯಾಂಡ್​ಸ್ಲಾಮ್​ನಲ್ಲಿ ಮೊದಲ ಸುತ್ತಿನಲ್ಲೇ ಹೊರ ಬಿದ್ದಂತಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.