ಪ್ಯಾರೀಸ್ : ವಿಶ್ವದಾಖಲೆಯ 24ನೇ ಗ್ರ್ಯಾಂಡ್ಸ್ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಅಮೆರಿಕಾದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸನ್ ಫ್ರೆಂಚ್ ಓಪನ್ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಫಿಲಿಪ್ಪೆ ಚಾಟ್ರಿಯರ್ ಮೈದಾನದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕಾದವರೆ ಆದ ಕ್ರಿಸ್ಟಿ ಅಹ್ನ್ ವಿರುದ್ಧ 7(7)-6(2), 6-0ಯ ಅಂತರದ ನೇರ ಸೆಟ್ಗಳಲ್ಲಿ ಜಯ ಸಾಧಿಸುವ ಮೂಲಕ 2ನೇ ಸುತ್ತಿಗೆ ತೇರ್ಗಡೆಯಾದರು.
ಮೊದಲ ಸುತ್ತಿನ ಪಂದ್ಯದಲ್ಲಿ ಇಬ್ಬರು ಅಮೆರಿಕನ್ ಆಟಗಾರ್ತಿಯರಿಂದ ಪ್ರಬಲ ಪೈಪೋಟಿ ಕಂಡು ಬಂದಿತು. ಆದರೆ, ಟ್ರೈಬ್ರೇಕರ್ನಲ್ಲಿ ಸೆರೆನಾ ವಿಲಿಯಮ್ಸ್ 7-2ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೊದಲ ಸೆಟ್ ಗೆದ್ದರು. 2ನೇ ಸುತ್ತಿನ ಪಂದ್ಯದಲ್ಲಿ 23 ಗ್ರ್ಯಾಂಡ್ಸ್ಲಾಮ್ ವಿನ್ನರ್ ಎದುರು ಮಂಕಾದ ಕ್ರಿಸ್ಟಿ ಒಂದೇ ಒಂದು ಗೇಮ್ ಗೆಲ್ಲಲಾಗದೆ 0-6ರಲ್ಲಿ ಸೋಲು ಕಂಡರು.
39 ವರ್ಷದ 3 ಬಾರಿ ಫ್ರೆಂಚ್ ಓಪನ್ ವಿಜೇತೆ ಈಗಾಗಲೇ 23 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ತಮ್ಮ ಖಾತೆ ಮತ್ತೊಂದು ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಸೇರಿಸಿಕೊಳ್ಳುವ ಮೂಲಕ ಆಸ್ಟ್ರೆಲಿಯಾದ ಮಾರ್ಗ್ರೇಟ್ ಕೋರ್ಟ್ ಅವರ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ.
ವಿಲಿಯಮ್ಸ್ ತಮ್ಮ ಮುಂದಿನ ಸುತ್ತಿನಲ್ಲಿ ಬಲ್ಗೇರಿಯಾದ ಸ್ವೆಟಾನಾ ಪಿರೊಂಕೋವಾ ಅವರ ಸವಾಲನ್ನು ಎದುರಿಸಲಿದ್ದಾರೆ.