ETV Bharat / sports

ಫ್ರೆಂಚ್​ ಓಪನ್.. ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ರಾಫೆಲ್ ನಡಾಲ್​

12 ಪ್ರಶಸ್ತಿ ಜೊತೆಗೆ ಹಾಲಿ ಚಾಂಪಿಯನ್ ಹಾಗಿರುವ ನಡಾಲ್ ಪ್ಯಾರಿಸ್ ಪರಿಸ್ಥಿತಿಗಳಲ್ಲಿ ತಾವು ಎಂದಿಗೂ ನಿರ್ದಯಿಯೆಂಬುದನ್ನು ಸಾಬೀತು ಮಾಡಿದರು. 13ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಡಾಲ್​ ಟೂರ್ನಿಯಲ್ಲಿ ಈವರೆಗೂ ಒಂದೂ ಸೆಟ್​ಗಳನ್ನು ಕಳೆದುಕೊಳ್ಳದೆ ಕ್ವಾರ್ಟರ್ ಪ್ರವೇಶಿಸಿದ್ದಾರೆ..

ಫ್ರೆಂಚ್​ ಓಪನ್
ಫ್ರೆಂಚ್​ ಓಪನ್
author img

By

Published : Oct 4, 2020, 9:50 PM IST

ಪ್ಯಾರಿಸ್ : 19 ಗ್ರ್ಯಾಂಡ್​ಸ್ಲಾಮ್ ವಿಜೇತ ರಾಫೆಲ್ ನಡಾಲ್​ ಅಮೆರಿಕಾದ ಸೆಬಾಸ್ಟಿಯನ್​ ಕೊರ್ಡಾರನ್ನು ಮಣಿಸಿ ಫ್ರೆಂಚ್ ಓಪನ್​ನ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ನಡಾಲ್​ರ ಪಕ್ಕಾ ಅಭಿಮಾನಿಯಾಗಿರುವ ಸೆಬಾಸ್ಟಿಯನ್​ ಇಂದು ತನ್ನಿಷ್ಟದ ಲೆಜೆಂಡ್​ ವಿರುದ್ಧ ಆಡುವ ಕನಸನ್ನು ನನಸಾಗಿಸಿಕೊಂಡರಾದ್ರೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕೋರ್ಟ್ ಫಿಲಿಪ್ ಚಾಟ್ರಿಯರ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಡಾಲ್​ 20 ವರ್ಷದ ಆಟಗಾರನ ವಿರುದ್ಧ 6-1,6-1,6-2 ರಲ್ಲಿ ಮಣಿಸಿ 14ನೇ ಬಾರಿ ಫ್ರೆಂಚ್ ಓಪನ್​ ಕ್ವಾರ್ಟರ್​ ಫೈನಲ್ ಪ್ರವೇಶಿಸಿದರು.

12 ಪ್ರಶಸ್ತಿ ಜೊತೆಗೆ ಹಾಲಿ ಚಾಂಪಿಯನ್ ಹಾಗಿರುವ ನಡಾಲ್ ಪ್ಯಾರಿಸ್ ಪರಿಸ್ಥಿತಿಗಳಲ್ಲಿ ತಾವು ಎಂದಿಗೂ ನಿರ್ದಯಿಯೆಂಬುದನ್ನು ಸಾಬೀತು ಮಾಡಿದರು. 13ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಡಾಲ್​ ಟೂರ್ನಿಯಲ್ಲಿ ಈವರೆಗೂ ಒಂದೂ ಸೆಟ್​ಗಳನ್ನು ಕಳೆದುಕೊಳ್ಳದೆ ಕ್ವಾರ್ಟರ್ ಪ್ರವೇಶಿಸಿದ್ದಾರೆ.

1998ರ ಆಸ್ಟ್ರೇಲಿಯಾದ ಚಾಂಪಿಯನ್ ಪೆಟ್ರ್ ಕೊರ್ಡಾ ಅವರ ಪುತ್ರನಾಗಿರುವ ಸೆಬಾಸ್ಟಿಯನ್​ ಕೊರ್ಡಾ, ಕೆಂಪು ಮಣ್ಣಿನ ಅಂಕಣದಲ್ಲಿ ನಡಾಲ್ ಆಟಕ್ಕೆ ಕೊಚ್ಚಿಹೋದರು. ಆದರೆ, ಅವರು 34 ವರ್ಷದ ತಮಗೆ ಸ್ಫೂರ್ತಿಯಾಗಿರುವ ಟೆನಿಸ್ ಆಟಗಾರನಿಂದ ಕೆಲವು ಉತ್ತೇಜಕ ಮಾತುಗಳನ್ನು ಸ್ವೀಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.