ETV Bharat / sports

ಕ್ಯಾರೆನೊ ಬುಸ್ಟಾ - ಜೋಕೊವಿಕ್​ಗೆ ಮರುಪಂದ್ಯವಾಗಲಿದೆ ಫ್ರೆಂಚ್​ ಓಪನ್​ ಕ್ವಾರ್ಟರ್​ ಫೈನಲ್ - ಫ್ರೆಂಚ್​ ಓಪನ್ 2020

ಸೋಮವಾರ ನಡೆದ ಪಂದ್ಯದಲ್ಲಿ ಕ್ಯಾರೆನೊ ಬುಸ್ಟಾ 186ನೇ ಶ್ರೇಯಾಂಕದ ಡೇನಿಯಲ್ ಅಲ್ಟ್​ಮೇಯರ್​ ಅವರನ್ನು 6-1, 7-5 ಹಾಗೂ 6-2 ರಲ್ಲಿ ಮಣಿಸಿ ಎರಡನೇ ಬಾರಿಗೆ ಫ್ರೆಂಚ್​ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿದ್ದರು.

ಕ್ಯಾರೆನೊ ಬುಸ್ಟಾ - ಜೋಕೊವಿಕ್
ಕ್ಯಾರೆನೊ ಬುಸ್ಟಾ - ಜೋಕೊವಿಕ್
author img

By

Published : Oct 6, 2020, 6:25 PM IST

ಪ್ಯಾರಿಸ್​: 17ನೇ ಶ್ರೇಯಾಂಕಿತ ಆಟಗಾರ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ತಮ್ಮ ವೃತ್ತಿ ಜೀವನದ ಎರಡನೇ ಕ್ವಾರ್ಟರ್ ಫೈನಲ್ ತಲುಪಿದ್ದು, ಲೆಜೆಂಡ್​ ಜೋಕೊವಿಕ್ ವಿರುದ್ಧ ಮರುಪಂದ್ಯವನ್ನು ಪಡೆದಿದ್ದಾರೆ. ಇವರಿಬ್ಬರ ನಡುವಿನ ಯುಎಸ್​ ಕ್ವಾರ್ಟರ್ ಫೈನಲ್ ಪಂದ್ಯ ಸಂಪೂರ್ಣವಾಗಿ ಮುಗಿಯದೇ ಕೊನೆಗೊಂಡಿತ್ತು.

ಕಳೆದ ತಿಂಗಳು ಯುಎಸ್ ಓಪನ್​ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಬುಸ್ಟಾ ಹಾಗೂ ಜೋಕೊವಿಕ್ ಎದುರುಬದರಾಗಿದ್ದರು. ಈ ವೇಳೆ ಸೆಟ್​ ಕಳೆದುಕೊಂಡ ಸಿಟ್ಟಿನಲ್ಲಿ ಜೋಕೊವಿಕ್​ ಆಕಸ್ಮಿಕವಾಗಿ ಹೊಡೆದ ಚೆಂಡು ಲೈನ್​ ಅಂಪೈರ್​ಗೆ ಬಡಿದಿತ್ತು. ಆಕಸ್ಮಿಕವಾಗಿ ನಡೆದರೂ ಇದು ಪಂದ್ಯವಾಳಿಯ ನಿಯಮಗಳಿಗೆ ವಿರುದ್ಧವಾಗಿದ್ದರಿಂದ ಜೋಕೊವಿಕ್​ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದರೂ ಮಾಡಿದ ತಪ್ಪಿಗೆ ಪಂದ್ಯದಿಂದ ಅನರ್ಹಗೊಂಡಿದ್ದರು. ಇದಿರಂದ ಪಂದ್ಯ ಪೂರ್ಣವಾಡದೆ ಬುಸ್ಟಾ ಸೆಮಿಫೈನಲ್ ಪ್ರವೇಶಿಸಿದ್ದರು.

ಸೋಮವಾರ ನಡೆದ ಪಂದ್ಯದಲ್ಲಿ ಕ್ಯಾರೆನೊ ಬುಸ್ಟಾ 186ನೇ ಶ್ರೇಯಾಂಕದ ಡೇನಿಯಲ್ ಅಲ್ಟ್​ಮೇಯರ್​ ಅವರನ್ನು 6-1, 7-5 ಹಾಗೂ 6-2 ರಲ್ಲಿ ಮಣಿಸಿ ಎರಡನೇ ಬಾರಿಗೆ ಫ್ರೆಂಚ್​ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿದ್ದರು.

ಇದೀಗ ಸ್ಪೇನ್ ಟೆನ್ನಿಸ್ ಪ್ಲೇಯರ್​ ಮತ್ತೆ ಜೋಕೊವಿಕ್ ವಿರುದ್ಧ ಸೆಣಸಾಡಲು ಸಿದ್ಧವಾಗುತ್ತಿದ್ದಾರೆ. ಇತ್ತ ದಾಖಲೆಯ 18ನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೊವಿಕ್​ ಯುಎಸ್​ ಓಪನ್​ನಲ್ಲಿ ತಪ್ಪನ್ನು ತಿದ್ದಿಕೊಂಡು ತಾಳ್ಮೆಯಿಂದ ಆಡುತ್ತಾ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ. ಇವರಿಬ್ಬರ ನಡುವಿನ ಪಂದ್ಯ ಬುಧವಾರ ನಡೆಯಲಿದೆ.

ಇಂದಿನ ಫ್ರೆಂಚ್ ಓಪನ್ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ 19 ಗ್ರ್ಯಾಂಡ್​ಸ್ಲಾಮ್ ವಿಜೇತ ರಾಫೆಲ್ ನಡಾಲ್ ಇಟಲಿಯ ಜನ್ನಿಕ್ ಸಿನ್ನರ್​ ವಿರುದ್ಧ ಸೆಣಸಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.