ETV Bharat / sports

French Open 2021: ಮಹಿಳೆಯರ ಫೈನಲ್​ನಲ್ಲಿ ಪಾವಲ್ಯುಚೆಂಕೋವಾ-ಕ್ರೆಜಿ​​ಕೋವಾ ಮುಖಾಮುಖಿ

author img

By

Published : Jun 11, 2021, 4:27 AM IST

ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿ​​ಕೋವಾ ಫ್ರೆಂಚ್ ಓಪನ್‌ ಮಹಿಳೆಯರ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ. ಫೈನಲ್​ನಲ್ಲಿ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾ ವಿರುದ್ಧ ಕ್ರೆಜಿ​​ಕೋವಾ ಕಾದಾಡಲಿದ್ದಾರೆ.

French Open 2021: Krejcikova storms into women's finals, sets up summit clash against Pavlyuchenkova
French Open 2021: ಮಹಿಳೆಯರ ಫೈನಲ್​ನಲ್ಲಿ ಪಾವಲ್ಯುಚೆಂಕೋವಾ-ಕ್ರೆಜಿ​​ಕೋವಾ ಮುಖಾಮುಖಿ

ಪ್ಯಾರಿಸ್​: ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿ​​ಕೋವಾ ಫ್ರೆಂಚ್ ಓಪನ್‌ನ ಫೈನಲ್‌ ತಲುಪಿದ್ದಾರೆ. ಫೈನಲ್​ನಲ್ಲಿ ಕ್ರೆಜಿಕೋವಾ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್​ನಲ್ಲಿ ಕ್ರೆಜಿ​​ಕೋವಾ, ಗ್ರೀಸ್‌ನ ಮಾರಿಯಾ ಸಕ್ಕಾರಿ ವಿರುದ್ಧ ರೋಚಕ ಗೆಲುವು ಸಾಧಿಸಿದರು. ಇಬ್ಬರೂ ಆಟಗಾರ್ತಿಯರು ಪೈಪೋಟಿಯುಕ್ತ ಆಟದ ಮೂಲಕ ಗಮನ ಸೆಳೆದರು. ಕೊನೆಗೆ 7-5, 4-6, 9-7ರಲ್ಲಿ ಜಯ ಕ್ರೆಜ್ಕಿಕೋವಾ ಪಾಲಾಯಿತು.

ಮೊದಲ ಸೆಟ್​ ಒಂದು ಹಂತದಲ್ಲಿ ಅದು 5-5ರ ಸಮಬಲದಲ್ಲಿತ್ತು. ಆದರೆ ಕೊನೆಯಲ್ಲಿ ಪ್ರಾಬಲ್ಯ ಸಾಧಿಸಿದ ಕ್ರೆಜಿಕೋವಾ 7-5 ಅಂತರದಿಂದ ಗೆದ್ದರು. ಬಳಿಕ 2ನೇ ಸೆಟ್​ನಲ್ಲಿ ತಿರುಗೇಟು ನೀಡಿದ ಸಕ್ಕಾರಿ 6-4ರಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ತದನಂತರ ಭಾರೀ ರೋಚಕತೆಯಿಂದ ಕೂಡಿದ್ದ ಮೂರನೇ ಸೆಟ್​ನಲ್ಲಿ ಇಬ್ಬರೂ 7-7ರ ಸಮಬಲ ಸಾಧಿಸಿದ್ದರು. ಈ ವೇಳೆ ಮೇಲುಗೈ ಸಾಧಿಸಿದ ಕ್ರೆಜಿ​​ಕೋವಾ 9-7ರಿಂದ ಗೆದ್ದು ಫೈನಲ್​ಗೆ ಎಂಟ್ರಿ ಪಡೆದುಕೊಂಡರು.

ಫೈನಲ್​ನಲ್ಲಿ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾ ವಿರುದ್ಧ ಕ್ರೆಜಿ​​ಕೋವಾ ಕಾದಾಡಲಿದ್ದಾರೆ. ಪಾವಲ್ಯುಚೆಂಕೋವಾ, ಸ್ಲೊವೇನಿಯಾದ ತಮಾರಾ ಜಿಡಾನ್ಸೆಕ್ ಅವರನ್ನು 7-5, 6-3ರಿಂದ ಮಣಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ. ಫೈನಲ್​ ಪಂದ್ಯ ನಾಳೆ ನಡೆಯಲಿದೆ.

ಇಂದು (ಶುಕ್ರವಾರ) ಪುರುಷರ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಮುಖಾಮುಖಿಯಾಗಲಿದ್ದಾರೆ. ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಸ್ಟೆಫನೊಸ್ ಸಿಟ್ಸಿಪಾಸ್ ಎದುರಾಗಲಿದ್ದಾರೆ.

ಇದನ್ನೂ ಓದಿ: ’ಪಾಕಿಸ್ತಾನ ತಂಡಕ್ಕೆ ಧೋನಿಯಂತಹ ನಾಯಕ, ಫಿನಿಷರ್​ನ​ ಅವಶ್ಯಕತೆಯಿದೆ’

ETV Bharat Logo

Copyright © 2024 Ushodaya Enterprises Pvt. Ltd., All Rights Reserved.