ಪ್ಯಾರೀಸ್: ವಿಶ್ವದ ನಂ.1 ಆಟಗಾರ ನೊವಾಕ್ ಜೋಕೊವಿಕ್ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ನಲ್ಲಿ ಹಾಲಿ ಹಾಗೂ 13 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಜೋಕೊವಿಕ್ 3-6, 6-3, 7-6, 6-2 ಸೆಟ್ಗಳಿಂದ ಮಣಿಸಿದರು.
ಮೊದಲ ಸೆಟ್ನಲ್ಲಿ ಸೋತರೂ ಕೂಡ ಬಳಿಕ ಮೂರೂ ಸೆಟ್ಗಳಲ್ಲಿ ಪ್ರಾಬಲ್ಯ ತೋರಿದ ಜೋಕೊವಿಕ್ ಮಣ್ಣಿನ ಅಂಕಣದ ದೊರೆ ನಡಾಲ್ಗೆ ಸೋಲುಣಿಸಿದರು. ಎರಡನೇ ಸೆಟ್ನಲ್ಲಿ 6-3ರಿಂದ ತಿರುಗೇಟು ನೀಡಿದ ಜೋಕೊವಿಕ್ 3ನೇ ಸೆಟ್ನಲ್ಲಿ ಭಾರೀ ಪೈಪೋಟಿ ನಡೆಸಿ ಗೆಲ್ಲುವಲ್ಲಿ ಯಶಸ್ವಿಯಾದರು. 6-6ರಿಂದ ಸಮಬಲವಾಗಿದ್ದ 3ನೇ ಸೆಟ್, ಕೊನೆಯಲ್ಲಿ 7-6ರಿಂದ ನೊವಾಕ್ ಪಾಲಾಯಿತು. ಬಳಿಕ 4ನೇ ಸೆಟ್ನಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಹಿನ್ನೆಲೆ ರಾಫಾ ಆರಂಭಿಕ ಅಂಕಗಳ ಮುನ್ನಡೆ ಪಡೆದರೂ ರೋಚಕ ಆಟ ಪ್ರದರ್ಶಿಸಿದ ಜೋಕೊವಿಕ್ 6-2ರಿಂದ ಗೆದ್ದು, ಸತತ ಮೂರು ಸೆಟ್ಗಳ ಜಯದೊಂದಿಗೆ ಫೈನಲ್ಗೆ ಲಗ್ಗೆ ಇಟ್ಟರು.
-
He's done it! 🙌@DjokerNole knocks out defending champion Nadal 3-6, 6-3, 7-6(4), 6-2 in an instant classic to reach the final.#RolandGarros pic.twitter.com/IlATNYTioZ
— ATP Tour (@atptour) June 11, 2021 " class="align-text-top noRightClick twitterSection" data="
">He's done it! 🙌@DjokerNole knocks out defending champion Nadal 3-6, 6-3, 7-6(4), 6-2 in an instant classic to reach the final.#RolandGarros pic.twitter.com/IlATNYTioZ
— ATP Tour (@atptour) June 11, 2021He's done it! 🙌@DjokerNole knocks out defending champion Nadal 3-6, 6-3, 7-6(4), 6-2 in an instant classic to reach the final.#RolandGarros pic.twitter.com/IlATNYTioZ
— ATP Tour (@atptour) June 11, 2021
ಈ ಸೋಲಿನೊಂದಿಗೆ 21ನೇ ಬಾರಿಗೆ ಗ್ರಾಂಡ್ಸ್ಲಾಂ ಗೆದ್ದು ಇತಿಹಾಸ ಬರೆಯುವ ನಡಾಲ್ ಕನಸು ನನಸಾಗಲಿಲ್ಲ. ಫೈನಲ್ನಲ್ಲಿ ಜೋಕೊವಿಕ್ 22 ವರ್ಷದ ಗ್ರೀಕ್ನ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ 19ನೇ ವೃತ್ತಿಪರ ಗ್ರಾಂಡ್ಸ್ಲಾಂಗಾಗಿ ಸೆಣೆಸಾಡಲಿದ್ದಾರೆ. ಇಲ್ಲಿ ಗೆಲುವು ಕಂಡರೆ 2016ರ ಬಳಿಕ ಫ್ರೆಂಚ್ ಓಪನ್ಗೆ ನೊವಾಕ್ ಮುತ್ತಿಕ್ಕಲಿದ್ದಾರೆ. ಅಲ್ಲದೆ ರಾಡ್ ಲಾವರ್ ಹಾಗೂ ರಾಯ್ ಎಮರ್ಸನ್ ಬಳಿಕ ಎಲ್ಲಾ 4 ಗ್ರಾಂಡ್ಸ್ಲಾಂ ಪ್ರಶಸ್ತಿಗಳನ್ನು ಎರಡೆರಡು ಬಾರಿ ಜಯಿಸಿದ ಆಟಗಾರ ಎಂಬ ಹೆಗ್ಗಳಿಗೆ ನೊವಾಕ್ ಪಾಲಾಗಲಿದೆ.
ಗ್ರೀಕ್ನ ಸ್ಟೆಫನೊಸ್ ಸಿಟ್ಸಿಪಾಸ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ರನ್ನು 6-4, 6-4, 3-6, 3-6, 6-3ರ ಸೆಟ್ಗಳ ಅಂತರಲ್ಲಿ ಮಣಿಸಿ ಫೈನಲ್ಗೇರಿದ್ದಾರೆ. ಜೋಕೊವಿಕ್ ಹಾಗೂ ಸ್ಟೆಫನೊಸ್ ಈ ಹಿಂದೆ 5 ಬಾರಿ ಪರಸ್ಪರ ಎದುರಾಗಿದ್ದು, ನೊವಾಕ್ 5-2ರ ಗೆಲುವಿನ ಸರಾಸರಿ ಹೊಂದಿದ್ದಾರೆ. ಫೈನಲ್ ಪಂದ್ಯವು ನಾಳೆ (ಭಾನುವಾರ) ನಡೆಯಲಿದೆ.